ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳಿನ 'ತಂಗಮೇ' ಹಾಡು 'ಕಿರಿಕ್' ಮಾಡದೆ ಅರೆರೆರೇ ಎಂದು ಪಾರ್ಟಿ ಮಾಡಿದ್ದು ಇಲ್ಲಿಯೇ!

Last Updated 25 ಏಪ್ರಿಲ್ 2017, 10:32 IST
ಅಕ್ಷರ ಗಾತ್ರ

2016ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿ ಪಡೆದ ರಿಷಭ್‌ ಶೆಟ್ಟಿ ನಿರ್ದೇಶನದ 'ಕಿರಿಕ್‌ ಪಾರ್ಟಿ' ಚಿತ್ರ ಬಿಡುಗಡೆಗೆ ಮುನ್ನ ಹಾಡೊಂದರ ಕಾಪಿರೈಟ್ ವಿಷಯದಲ್ಲಿ ಸುದ್ದಿ ಮಾಡಿತ್ತು. ಪ್ರಸ್ತುತ ಚಿತ್ರದಲ್ಲಿನ 'ಹೇ ಹೂ ಆರ್ ಯೂ' ಎಂಬ ಹಾಡು 'ಶಾಂತಿ ಕ್ರಾಂತಿ' ಚಿತ್ರದ ಒಂದು ಹಾಡಿನ ಕಾಪಿರೈಟ್ ಉಲ್ಲಂಘಿಸಿದೆ ಎಂದು ಲಹರಿ ಸಂಸ್ಥೆ ನ್ಯಾಯಾಲಯದ ಮೊರೆ ಹೋಗಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ. 

'ಹೇ ಹೂ ಆರ್ ಯೂ' ಹಾಡಿಗೂ ಶಾಂತಿ ಕ್ರಾಂತಿ ಚಿತ್ರದ ಹಾಡಿಗೂ ಹೋಲಿಕೆ ಇಲ್ಲ ಎಂದು ಕಿರಿಕ್ ಪಾರ್ಟಿ ತಂಡ ವಾದಿಸಿತ್ತು. ಈಗ ವಿಷಯ ಅದಲ್ಲ, ಇದೇ ಚಿತ್ರದ ಇನ್ನೊಂದು ಹಾಡು, ಬೆಳಗೆದ್ದು ಯಾರ ಮುಖವ ನಾನು ನೋಡಿದೆ ಹಾಡು ತಮಿಳು ಹಾಡೊಂದರಿಂದ ಸ್ಫೂರ್ತಿ ಪಡೆಯಿತೇ? ಹಾಡಿನ ಕೆಲವು ಸಾಲುಗಳನ್ನು  ಗಮನಿಸಿದರೆ ಆ ಸಾಮ್ಯತೆ ಸ್ಪಷ್ಟವಾಗಿ ಕಾಣುತ್ತದೆ.

ಚಿತ್ರ: ಕಿರಿಕ್ ಪಾರ್ಟಿ
ಹಾಡು: ಬೆಳಗೆದ್ದು ಯಾರ ಮುಖವ ನಾನು ನೋಡಿದೆ
ಗಾಯಕರು: ವಿಜಯ್ ಪ್ರಕಾಶ್
ಸಂಗೀತ ನಿರ್ದೇಶನ: ಬಿ. ಅಜನೀಶ್ ಲೋಕನಾಥ್

ಸಾಮ್ಯತೆ

ಚಿತ್ರ: ನಾನುಂ ರೌಡಿ ದಾ (ತಮಿಳು)
ಹಾಡು: ತಂಗಮೇ
ಗಾಯಕರು: ಅನಿರುದ್ದ್ ರವಿಚಂದರ್
ಸಂಗೀತ ನಿರ್ದೇಶನ: ಅನಿರುದ್ದ್ ರವಿಚಂದರ್

[related]

ಈ ಹಾಡು ಮಾತ್ರವಲ್ಲ ಕಿರಿಕ್ ಪಾರ್ಟಿ ಚಿತ್ರದ 'ನೀಚ ಸುಳ್ಳು ಸುತ್ತೋ ನಾಲಿಗೆ' ಹಾಡಿಗೆ ಪ್ರೇಮಂ (ಮಲಯಾಳಂ) ಚಿತ್ರದ 'ಕಲಿಪ್ಪು' ಹಾಡು ಪ್ರೇರಣೆ ಅಂದಿದ್ದಾರೆ ನಮ್ಮ ಓದುಗರಾದ ಕವಿತಾ ಗಾಣಿಗ


ಆ ಹಾಡುಗಳು ಇಲ್ಲಿವೆ

ಕಿರಿಕ್ ಪಾರ್ಟಿ ಚಿತ್ರದ ಹಾಡು

ಪ್ರೇಮಂ ಚಿತ್ರದ ಕಲಿಪ್ಪು ಹಾಡು

ಹೀಗೆ ಪರಭಾಷೆಯಿಂದ ಸ್ಫೂರ್ತಿ ಪಡೆದು ಹುಟ್ಟಿಕೊಂಡ ಕನ್ನಡ ಹಾಡುಗಳ ಬಗ್ಗೆ ನಿಮಗೆ ತಿಳಿದಿದ್ದರೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT