ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾರ್ಮಸಿ ಅಧ್ಯಯನಕ್ಕೆ ಡಿ.ಫಾರ್ಮ, ಬಿ.ಫಾರ್ಮ

Last Updated 26 ಏಪ್ರಿಲ್ 2017, 13:52 IST
ಅಕ್ಷರ ಗಾತ್ರ

ಬೆಂಗಳೂರು: ಈಚಿನ ದಿನಗಳಲ್ಲಿ ಔಷಧಗಳ ಬಳಕೆ ಸಾಮಾನ್ಯವೆನಿಸಿದೆ. ರೋಗಗಳು ಬಾರದಿರಲಿ ಎಂಬ ಮುನ್ನೆಚ್ಚರಿಕೆ ಹಾಗೂ ಬಂದಾಗ ಅವುಗಳ ನಿವಾರಣೆಗೆ ಹಲವು ಔಷಧಗಳ ಬಳಕೆ ಅತ್ಯಗತ್ಯ. ಜನಸಂಖ್ಯೆ ಹೆಚ್ಚಿದಂತೆ ಔಷಧ ತಯಾರಿಕೆಯ ಪ್ರಮಾಣವೂ ಹೆಚ್ಚುತ್ತಿದೆ. ಔಷಧ ಮತ್ತು ಸೌಂದರ್ಯವರ್ಧಕಗಳಿಗೂ ಬೇಡಿಕೆ ಹೆಚ್ಚಿದೆ.

ಔಷಧ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಕಡಿಮೆ ಖರ್ಚಿನಲ್ಲಿ ಹೆಚ್ಚು ಜನರನ್ನು ತಲುಪುವ ಔಷಧಗಳನ್ನು ಕಂಡು ಹಿಡಿಯುವ ಸವಾಲು ಫಾರ್ಮಸಿ ಕ್ಷೇತ್ರದ್ದು. ಔಷಧಗಳ ತಯಾರಿಕೆ, ಅವುಗಳ ರಚನೆ, ಸಂಶೋಧನೆ, ಬಳಕೆ, ಕ್ಲಿನಿಕಲ್ ಟ್ರಯಲ್, ಪರಿಣಾಮ ಮತ್ತು ಅಡ್ಡ ಪರಿಣಾಮಗಳು, ಸೂಕ್ಷ್ಮಾಣು ಜೀವಿಗಳು, ರೋಗಾಣುಗಳು, ರೋಗಪತ್ತೆ, ಔಷಧದ ಕ್ರಿಯಾತ್ಮಕ ಭಾಗ ಮುಂತಾದವುಗಳ ಬಗ್ಗೆ ಅಧ್ಯಯನ ಮಾಡಲು ಇರುವ ಕ್ಷೇತ್ರವೇ ಫಾರ್ಮಸಿ.

ದ್ವಿತೀಯ ಪಿಯು ವಿಜ್ಞಾನ (ಭೌತವಿಜ್ಞಾನ, ರಸಾಯನ ವಿಜ್ಞಾನ ಮತ್ತು ಜೀವ ವಿಜ್ಞಾನ / ಗಣಿತ) ಉತ್ತೀರ್ಣರಾಗಿರುವವರಿಗೆ ಹಲವು ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆಯಲು ಫಾರ್ಮಸಿ ಅಧ್ಯಯನ ಮಾಡಬಹುದು.

ಎರಡು ವರ್ಷ ಅವಧಿಯ ಡಿಪ್ಲೊಮಾ ಇನ್‌ ಫಾರ್ಮಸಿ (ಡಿ.ಫಾರ್ಮ), ನಾಲ್ಕು ವರ್ಷ ಅವಧಿಯ ಬ್ಯಾಚುಲರ್‌ ಆಫ್‌ ಫಾರ್ಮಸಿ (ಬಿ.ಫಾರ್ಮ) ಅಧ್ಯಯನ ಮಾಡಬಹುದು.

ಬಿ.ಫಾರ್ಮ ಪದವಿಯ ನಂತರ ಉನ್ನತ ಅಧ್ಯಯನ ಮಾಡಲು 2 ವರ್ಷದ ಮಾಸ್ಟರ್‌ ಆಫ್‌ ಫಾರ್ಮಸಿ (ಎಂ.ಫಾರ್ಮ) ಸಹ ಅಧ್ಯಯನ ಮಾಡಬಹುದು.
ಉದ್ಯೋಗಾವಕಾಶಗಳು
l
ಬಿ.ಫಾರ್ಮ ಅಧ್ಯಯನ ಮಾಡಿರುವವರು ಡಿ.ಫಾರ್ಮ ಕಾಲೇಜುಗಳಲ್ಲಿ ಬೋಧಕರಾಗಿ, ಎಂ.ಫಾರ್ಮ ಮಾಡಿರುವವರು ಬಿ.ಫಾರ್ಮ ಕಾಲೇಜುಗಳಲ್ಲಿ ಬೋಧಕರಾಗಿ ವೃತ್ತಿ ಆರಂಭಿಸಬಹುದು.

l ಬಿ.ಫಾರ್ಮ ಪದವೀಧರರು ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಫಾರ್ಮಸಿಸ್ಟ್‌ ಆಗಿ ಅಥವಾ ಹೆಲ್ತ್‌ ಫಾರ್ಮಸಿಸ್ಟ್‌ / ಕಮ್ಯುನಿಟಿ ಫಾರ್ಮಸಿಸ್ಟ್‌ ಆಗಬಹುದು.

l ಔಷಧ ತಯಾರಿಕಾ ಕಂಪೆನಿಗಳಲ್ಲಿ ಗುಣಮಟ್ಟ ನಿಯಂತ್ರಣ ಮ್ಯಾನೇಜರ್‌ (ಕ್ವಾಲಿಟಿ ಕಂಟ್ರೋಲ್‌/ ಕ್ವಾಲಿಟಿ ಅಷೂರೆನ್ಸ್‌ ಮ್ಯಾನೇಜರ್‌) ಆಗಬಹುದು.

l ಕ್ಲಿನಿಕಲ್‌ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಬಹುದು.

l ಡ್ರಗ್‌ ಇನ್‌ಸ್ಪೆಕ್ಟರ್‌, ಜ್ಯೂನಿಯರ್ ಸೈಂಟಿಸ್ಟ್‌, ಸೀನಿಯರ್‌ ಸೈಂಟಿಸ್ಟ್‌ ಹುದ್ದೆಗೇರಬಹುದು.

l ಇವಿಷ್ಟೇ ಅಲ್ಲದೆ, ಡೇಟಾ ಮ್ಯಾನೇಜರ್‌, ರೆಗ್ಯುಲೇಟರಿ ಮ್ಯಾನೇಜರ್‌, ಮೆಡಿಕಲ್ ಟ್ರಾನ್ಸ್‌ಕ್ರಿಪ್ಷನ್‌, ಔಷಧಗಳ ಸೇಲ್ಸ್‌ ಅಂಡ್‌ ಮಾರ್ಕೆಟಿಂಗ್‌ ಕ್ಷೇತ್ರಗಳಲ್ಲಿ ಅಪಾರ ಅವಕಾಶಗಳು ಇವೆ.

l ಎರಡು ವರ್ಷ ಡಿ.ಫಾರ್ಮ ಕೋರ್ಸ್‌ ಪೂರೈಸಿದವರು ಸ್ವಂತವಾಗಿ ಔಷಧ ಮಳಿಗೆಯನ್ನು ತೆರೆಯಬಹುದು. ಬಿ.ಫಾರ್ಮ, ಎಂ.ಫಾರ್ಮ ಕೋರ್ಸ್‌ ಮಾಡಿದವರಿಗೂ ಈ ಅವಕಾಶ ಇದ್ದೇ ಇರುತ್ತದೆ.

ಪ್ರವೇಶ ಪ್ರಕ್ರಿಯೆ
ಬಿ.ಫಾರ್ಮ ಕೋರ್ಸ್‌ ಪ್ರವೇಶ ಬಯಸುವ ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ವೃತ್ತಿ ಶಿಕ್ಷಣ ಕೋರ್ಸ್‌ಗಳಿಗೆ ನಡೆಸುವ ಸಿಇಟಿ ಬರೆಯಬೇಕು. ಸಿಇಟಿ ರ್‌್ಯಾಂಕಿಂಗ್‌ ಆಧಾರದಲ್ಲಿ ಸೀಟುಗಳನ್ನು ವಿದ್ಯಾರ್ಥಿಗಳಿಗೆ ಕೆಇಎ ಹಂಚುತ್ತದೆ. ಖಾಸಗಿ ಕಾಲೇಜುಗಳಲ್ಲಿ ಮ್ಯಾನೇಜ್‌ಮೆಂಟ್‌ ಸೀಟುಗಳು ಸಹ ಲಭ್ಯವಿರುತ್ತವೆ.

ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೂ ಡಿ.ಫಾರ್ಮ, ಬಿ.ಫಾರ್ಮ, ಎಂ.ಫಾರ್ಮ ಕೋರ್ಸ್‌ಗಳನ್ನು ಹೊಂದಿರುವ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಿವೆ. ಇಲ್ಲಿ ಪ್ರವೇಶ ಪಡೆದು ಈ ಕೋರ್ಸ್‌ಗಳನ್ನು ಅಧ್ಯಯನ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT