7

ತವಾ ಚಿಕನ್‌ ಧಾಬಾ ಸ್ಟೈಲ್‌ನ ರುಚಿ ನೋಡಿ

Published:
Updated:
ತವಾ ಚಿಕನ್‌ ಧಾಬಾ ಸ್ಟೈಲ್‌ನ ರುಚಿ ನೋಡಿ

ಚಿಕನ್ ಕಬಾಬ್‌, ಚಿಕನ್‌ ಕರಿ, ಚಿಲ್ಲಿ ಚಿಕನ್‌ ಸವಿದು ಬೋರಾಗಿದೆಯೇ? ಹಾಗಾದರೆ ಈ ಸಲ ತವಾ ಚಿಕನ್‌ ಧಾಬಾ ಸ್ಟೈಲ್‌ನ ರುಚಿ ನೋಡಿ ! ತವಾ ಚಿಕನ್‌ ಧಾಬಾ ಸ್ಟೈಲ್‌ ಮಾಡಲು ‘ಪ್ರಜಾವಾಣಿ ರೆಸಿಪಿ’ ವಿಡಿಯೊ ನೋಡಿ.

ಸಾಮಗ್ರಿಗಳು

1. ಚಿಕನ್ ಬೇಯಿಸಿದ್ದು -            1/4 ಕೆಜಿ

2. ಈರುಳ್ಳಿ -                           2

3. ಟೊಮ್ಯಾಟೊ -                    2

4. ಶುಂಠಿ ಬೆಳ್ಳುಳ್ಳಿ ಪೇಸ್ಟ್ -         2 ಚಮಚ

5. ಅರಿಶಿನ -                          1/2 ಚಮಚ

6. ಖಾರದ ಪುಡಿ -                    1/2 ಚಮಚ

7. ಧನಿಯಾ ಪುಡಿ -                  1/2 ಚಮಚ

8. ಗರಮ್ ಮಸಾಲ -                 ಸ್ವಲ್ಪ

9. ಮೆಂತ್ಯ -                            2 ದೊಡ್ಡ ಚಮಚ

10. ತುಪ್ಪ -                            2 ಚಮಚ

11. ಒಣಮೆಣಸಿನ ಕಾಯಿ -           2

12. ಕ್ಯಾಪ್ಸಿಕಮ್ -                     1

13. ನಿಂಬೆರಸ -                       1 ಸ್ಪೂನ್

14. ತುಪ್ಪ -                            2 ದೊಡ್ಡ ಚವiಚ

15.  ಎಣ್ಣೆ -                            1 ದೊಡ್ಡ ಚಮಚ

16. ಕೊತ್ತಂಬರಿ ಸೊಪ್ಪು -            ಸ್ವಲ್ಪ

ಮಾಡುವ ವಿಧಾನ: ಒಂದು ಟೊಮ್ಯಾಟೋ ಹಾಗೂ ಒಂದು ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಇನ್ನೊಂದು ಈರುಳ್ಳಿ ಹಾಗೂ ಟೊಮ್ಯಾಟೋವನ್ನು ದೊಡ್ಡದಾಗಿ ಹೆಚ್ಚಿಕೊಳ್ಳಿ. ಈಗ ಬಾಣಲೆಯಲ್ಲಿ ಒಂದು ದೊಡ್ಡ ಚಮಚ ತುಪ್ಪ ಬಿಸಿಮಾಡಿ, ಮೆಂತ್ಯ, ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಸಣ್ಣಗೆ ಹೆಚ್ಚಿದ ಟೊಮ್ಯಾಟೊ, ಉಪ್ಪು, ಚಿಕನ್, ಖಾರದ ಪುಡಿ, ಧನಿಯಾ ಪುಡಿ, ಅರಿಶಿನ, ಗರಮ್ ಮಸಾಲ ಸೇರಿಸಿ ಚೆನ್ನಾಗಿ ಬಾಡಿಸಿ. ಇದಕ್ಕೆ ದಪ್ಪಗೆ ಹೆಚ್ಚಿದ ಈರುಳ್ಳಿ,  ಕ್ಯಾಪ್ಸಿಕಮ್, ಟೊಮ್ಯಾಟೊ, ಒಣ ಮೆಣಸಿನ ಕಾಯಿಗಳನ್ನು ಸೇರಿಸಿ ಚೆನ್ನಾಗಿ ಫ್ರೈ ಮಾಡಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry