ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕೆಟ್‍ಫುಲ್ ಆಫ್ ಸನ್‍ಶೈನ್‍ನಿಂದ ಬಂತು 'ಹೆಬ್ಬುಲಿ'ಯ ಉಸಿರೇ ಉಸಿರೇ

Last Updated 29 ಏಪ್ರಿಲ್ 2017, 12:01 IST
ಅಕ್ಷರ ಗಾತ್ರ

ಕಿಚ್ಚ ಸುದೀಪ್ ಮತ್ತು ಅಮಲಾ ಪೌಲ್ ನಟಿಸಿರುವ 'ಹೆಬ್ಬುಲಿ' ಚಿತ್ರದಲ್ಲಿ 'ಉಸಿರೇ ಉಸಿರೇ' ಎಂಬ ಸುಂದರವಾದ ಹಾಡೊಂದಿದೆ. ಸ್ವಿಜರ್‍‍ಲ್ಯಾಂಡ್‍ನ ಮನೋಹರ ತಾಣಗಳಲ್ಲಿ ಚಿತ್ರೀಕರಿಸಲಾದ ಈ ಹಾಡನ್ನು ಹಾಡಿದ್ದು ಶ್ರೇಯಾ ಘೋಷಾಲ್ ಮತ್ತು ಶಾನ್.

ತೆಳ್ಳಗೆ ಬೆಳ್ಳಗೆ ನಗ್ತಾನೆ
ಯುದ್ಧಕೆ ನಿಂತರೆ ಮದ್ದಾನೆ
ಇವನು ಅಂದ್ರೆ ನನಗೆ ಪ್ರಾಣನೇ ...ಎಂದು ಆರಂಭವಾಗುವ ಈ ಹಾಡಿನಲ್ಲಿ ಸುದೀಪ್ ಮತ್ತು ಅಮಲಾ ತುಂಬಾನೇ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.

ವಿಷಯ ಏನಪ್ಪಾ ಅಂದ್ರೆ ಈ ಹಾಡು ನಟಾಷಾ ಬೆಡಿಂಗ್‍ಫೀಲ್ಡ್ ಅವರ 'ಪಾಕೆಟ್‍ಫುಲ್ ಆಫ್ ಸನ್‍ಶೈನ್' ಹಾಡಿನ ರಾಗವನ್ನು ಹೋಲುತ್ತದೆ.

ಅಂದ ಹಾಗೆ 'ಹೆಬ್ಬುಲಿ' ಚಿತ್ರದ ಉಸಿರೇ ಉಸಿರೇ ಹಾಡು ಪಾಕೆಟ್‍ಫುಲ್ ಆಫ್ ಸನ್‍ಶೈನ್ ಹಾಡನ್ನು ಹೋಲುತ್ತದೆ ಎಂದು ಸಾಬೀತುಪಡಿಸುವ ವಿಡಿಯೊ 'ಸೆಂಚುರಿ ಗೌಡ' ಯೂಟ್ಯೂಬ್ ಚಾನೆಲ್‍ನಲ್ಲಿ ಅಪ್‍ಲೋಡ್ ಆಗಿದೆ.

ಈ ಹಾಡುಗಳನ್ನು ಕೇಳಿದರೆ ಸಾಮ್ಯತೆ ಇರುವುದು ಸ್ಪಷ್ಟವಾಗುತ್ತದೆ.

ಚಿತ್ರ: ಹೆಬ್ಬುಲಿ
ಹಾಡು: ಉಸಿರೇ ಉಸಿರೇ
ಗಾಯಕರು: ಶ್ರೇಯಾ ಘೋಷಾಲ್, ಶಾನ್
ಸಂಗೀತ ನಿರ್ದೇಶನ: ಅರ್ಜುನ್ ಜನ್ಯ

ಸಾಮ್ಯತೆ
ಹಾಡು: ಪಾಕೆಟ್ ಫುಲ್ ಆಫ್ ಸನ್‍ಶೈನ್
ಗಾಯಕರು: ನಟಾಷಾ ಬೆಡಿಂಗ್‍ಫೀಲ್ಡ್

ಹೆಬ್ಬುಲಿ ಚಿತ್ರದ ದೇವರೇ ಹಾಡಿಗೂ  ಬಾಲಿವುಡ್‍ನ ಬದ್‍ಲಾಪುರ್ ಚಿತ್ರದ ಜುದಾಯಿ ಹಾಡಿಗೂ ಸಾಮ್ಯತೆ ಇರುವುದನ್ನು ಈಗಾಗಲೇ ಸ್ಫೂರ್ತಿ ಸೆಲೆ ಸರಣಿಯಲ್ಲಿ ಹೇಳಿದ್ದೇವೆ.

[related]

ಈ ರೀತಿಯ ಹಾಡುಗಳ ಬಗ್ಗೆ ನಿಮಗೆ ಮಾಹಿತಿ ಇದ್ದರೆ ಕಾಮೆಂಟ್ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT