ಬಿಎಫ್‌ಸಿಗೆ ಮೊದಲ ಆಘಾತ

7

ಬಿಎಫ್‌ಸಿಗೆ ಮೊದಲ ಆಘಾತ

Published:
Updated:

ಢಾಕಾ (ಪಿಟಿಐ): ಬೆಂಗಳೂರು ಫುಟ್‌ ಬಾಲ್‌ ಕ್ಲಬ್ ತಂಡಕ್ಕೆ ಬುಧವಾರ ಎಎಫ್‌ಸಿ ಕಪ್ ಫುಟ್‌ಬಾಲ್‌ ಟೂರ್ನಿಯಲ್ಲಿ ಮೊದಲ ಸೋಲು ಎದುರಾಗಿದೆ.

ಟೂರ್ನಿಯಲ್ಲಿ ಹಿಂದೆ ಆಡಿದ್ದ ಮೂರೂ ಪಂದ್ಯಗಳನ್ನು ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದ್ದ ಬಿಎಫ್‌ಸಿ 0–2 ಗೋಲುಗಳಲ್ಲಿ ಬಾಂಗ್ಲಾದೇಶದ ಅಬಹನಿ ತಂಡದ ಎದುರು ಆಘಾತ ಅನುಭವಿಸಿದೆ. ಡ್ರಾ ಹಾದಿಯಲ್ಲಿ ಸಾಗಿದ್ದ ಪಂದ್ಯ ಕೊನೆಯ ಹತ್ತು ನಿಮಿಷದಲ್ಲಿ ಸಂಪೂರ್ಣ ಚಿತ್ರಣ ಬದಲಾಯಿತು. ಟೂರ್ನಿಯಲ್ಲಿ ಒಂದೂ ಪಂದ್ಯದಲ್ಲಿ ಜಯ ಕಂಡಿರದ ಅಬಹನಿ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿ ದ್ದ ಬಿಎಫ್‌ಸಿ ಎದುರು ಗೆಲುವಿನ ಖಾತೆ ತೆರೆಯಿತು. ಕೊನೆಯ ಐದು ನಿಮಿಷಗಳ ಅಂತರದಲ್ಲಿ ಅಬಹನಿ ಎರಡು ಗೋಲು ದಾಖಲಿಸಿ ಮಿಂಚಿತು. ಸಾದ್‌ ಉದ್ದೀನ್ 87ನೇ ನಿಮಿಷದಲ್ಲಿ ಹಾಗೂ ರುಬೆಲ್‌ ಮಿಯಾ ಇಂಜುರಿ ಸಮ ಯದಲ್ಲಿ ಗೋಲುಗಳನ್ನು ದಾಖಲಿಸಿ ದರು. ಈಗಾಗಲೇ ಒಂದು ಪಂದ್ಯದಲ್ಲಿ ಬಿಎಫ್‌ಸಿ ಎದುರು ಸೋಲು ಕಂಡಿದ್ದ ಅಬಹನಿ ತವರಿನಲ್ಲಿ ಮಿಂಚುವ  ಮೂಲಕ ಸೇಡು ತೀರಿಸಿಕೊಂಡಿದೆ.

ಪಂದ್ಯದ ಆರಂಭದಿಂದಲೂ ಅಬಹನಿ ತಂಡ ಬಿಎಫ್‌ಸಿ ಎದುರು ಗೋಲು ಗಳಿಸಲು ಸಾಕಷ್ಟು ಪ್ರಯಾಸ  ಪಟ್ಟಿತ್ತು. ಅಂತಿಮ ಹಂತದವರೆಗೂ ಬಿಎಫ್‌ಸಿ ಗೋಲು ಗಳಿಸುವ ಪ್ರಯತ್ನ ದಲ್ಲಿ ಮುಂಚೂಣಿಯಲ್ಲಿತ್ತು. ಆದರೆ ಎದುರಾಳಿ ತಂಡದ ರಕ್ಷಣಾಗೋಡೆ ಯನ್ನು ದಾಟಲು ಬಿಎಫ್‌ಸಿಗೆ ಸಾಧ್ಯ ವಾಗಿರಲಿಲ್ಲ. ಕೊನೆಯ ಹತ್ತು ನಿಮಿಷದ ಪಂದ್ಯದಲ್ಲಿ ಅಬಹನಿ ಮುನ್ನಡೆ ಪಡೆಯಿತು.

ಅಬಹನಿ ಕೇವಲ ಹತ್ತು ಆಟಗಾರರ ಮೂಲಕ ಆಕ್ರಮಣ ಮಾಡಿತು. ಈ ತಂಡದ ನಾಸಿರುದ್ದೀನ್ ಚೌಧರಿ 80ನೇ ನಿಮಿಷದಲ್ಲಿ ಪಂದ್ಯದಿಂದ ಹೊರಗೆ ಬಿದ್ದಿದ್ದರು.ಇನ್ನೇನು ಮೂರು ನಿಮಿಷದ ಪಂದ್ಯ ಬಾಕಿ ಇದ್ದಾಗ ಸಾದ್ ಉದ್ದೀನ್ ಬೆಂಗಳೂರು ತಂಡದ ರಕ್ಷಣಾ ಸಾಮ ರ್ಥ್ಯಕ್ಕೆ ಸವಾಲಾಗುವಂತೆ ಗೋಲು ಗಳಿಸಿದರು. ಈ ಗೆಲುವಿನಿಂದ ಅಬಹನಿ ತಂಡ ಮೂರು ಪಾಯಿಂಟ್ಸ್ ಪಡೆದು ಖಾತೆ ತೆರೆದಿದೆ. ಬಿಎಫ್‌ಸಿ 9 ಪಾಯಿಂಟ್ಸ್‌ ಗಳಿಂದ ಅಗ್ರಸ್ಥಾನದಲ್ಲಿ ಮುಂದುವರಿದಿದೆ.

ಬಾಗನ್‌ಗೆ ಸೋಲು: ಮೋಹನ್ ಬಾಗನ್ ತಂಡ 2–5ಗೋಲುಗಳಲ್ಲಿ  ಮಜಿ ಯಾ ಸ್ಪೋರ್ಟ್ಸ್‌ ಮತ್ತು ರಿಕ್ರಿ ಯೇಷನ್ ಕ್ಲಬ್ ಎದುರು ಸೋಲು ಕಂಡಿದೆ. ಮಜಿಯಾ ತಂಡದ ಯಾಸ್‌ಫದ್ ಹಬೀಬ್‌ (13ನೇ ನಿ.) ಮತ್ತು ಮೊಹಮ್ಮದ್ ಉಮೇರ್‌ (27ನೇ ನಿ.) ತಲಾ ಒಂದು ಗೋಲು ದಾಖ ಲಿಸಿದರೆ, ಅಲೆಗ್ಸಾಂಡರ್‌ ರಾಕಿಕ್‌ 45ನೇ ಮತ್ತು 60ನೇ ನಿಮಿಷಗಳಲ್ಲಿ ಗೋಲು ತಂದಿತ್ತರು.

ಮೋಹನ್ ಬಾಗನ್‌ 48ನೇ ನಿಮಿಷ ದಲ್ಲಿ ಮೊದಲ ಗೋಲು ದಾಖಲಿಸಿತು. ಕಿಂಗ್‌ಶಕ್‌ ದೇವನಾಥ್‌ ಗೋಲುಪೆಟ್ಟಿಗೆ ಯೊಳಗೆ ಚೆಂಡನ್ನು ತೂರಿಸಿದರು. ಜೆಲೆ ಲಾಲ್‌ಪೆಕುಲಾ 78ನೇ ನಿಮಿಷದಲ್ಲಿ ಬಾಗನ್‌ಗೆ ಎರಡನೇ ಗೋಲು ತಂದುಕೊಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry