ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲುಗು ಕ್ರಾಂತಿಗೀತೆಯೊಂದು 'ಏನೇ ಕನ್ನಡತಿ' ಎಂದು ರೇಗಿಸಿ ಕನ್ನಡದ ಹಿರಿಮೆ ಸಾರಿತು!

Last Updated 5 ಮೇ 2017, 10:19 IST
ಅಕ್ಷರ ಗಾತ್ರ

ವಿಷ್ಣುವರ್ಧನ್ ಅವರ 'ಅಪ್ಪಾಜಿ' ಚಿತ್ರದಲ್ಲಿನ 'ಏನೇ ಕನ್ನಡತಿ' ಹಾಡು ಅದೆಷ್ಟು ಜನಪ್ರಿಯ ಎಂದರೆ ಊರಹಬ್ಬ, ಜಾತ್ರೆ ಅದೇನೇ ಕಾರ್ಯಕ್ರಮಗಳು ಇರಲಿ ಇಂದಿಗೂ ಆರ್ಕೆಸ್ಟ್ರಾಗಳಲ್ಲಿ ಈ ಹಾಡನ್ನು ಹಾಡಲಾಗುತ್ತದೆ.

'ಅಪ್ಪಾಜಿ' ಸಿನಿಮಾದಲ್ಲಿ ನಾಯಕ ವಿಷ್ಣುವರ್ಧನ್ ಹುಡುಗಿಯನ್ನು ರೇಗಿಸುವುದರ ಜತೆಗೆ ಕನ್ನಡದ ಹಿರಿಮೆ ಸಾರುವ ಹಾಡಾಗಿತ್ತು ಅದು. 1996ರಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಸಂಗೀತ ನಿರ್ದೇಶಿಸಿದ್ದು ಎಂ.ಎಂ.ಕೀರವಾಣಿ. ಈ ಹಾಡನ್ನು ಹಾಡಿದವರು ಎಸ್.ಪಿ ಬಾಲಸುಬ್ರಮಣ್ಯಂ.

1994ರಲ್ಲಿ ತೆರೆಕಂಡ ತೆಲುಗು ಚಿತ್ರ 'ಎರ್ರಸೈನ್ಯಂ'ನಲ್ಲಿ ಊರು ಮನದಿರ ಎಂದು ಆರಂಭವಾಗುವ ಕ್ರಾಂತಿಗೀತೆಯೊಂದಿದೆ. ಅಪ್ಪಾಜಿ ಚಿತ್ರದ ಹಾಡಿನ ಸಾಹಿತ್ಯವನ್ನು ಬದಲಿಸಿ ಹಾಡಿದರೆ 'ಎರ್ರಸೈನ್ಯಂ' ಚಿತ್ರದ ಹಾಡಾಗುತ್ತದೆ. ತೆಲುಗು ಚಿತ್ರದಲ್ಲಿ ಈ ಹಾಡನ್ನು ಎಸ್.ಪಿ. ಬಾಲಸುಬ್ರಮಣ್ಯಂ ಅವರು ಹಾಡಿದ್ದಾರೆ.

ಚಿತ್ರ: ಅಪ್ಪಾಜಿ
ಹಾಡು: ಏನೇ ಕನ್ನಡತಿ
ಗಾಯಕರು: ಎಸ್.ಪಿ ಬಾಲಸುಬ್ರಮಣ್ಯಂ
ಸಂಗೀತ ನಿರ್ದೇಶನ: ಎಂ.ಎಂ.ಕೀರವಾಣಿ

ಸಾಮ್ಯತೆ

ಚಿತ್ರ: ಎರ್ರಸೈನ್ಯಂ (ತೆಲುಗು)
ಹಾಡು: ಊರು ಮನದಿರ
ಗಾಯಕರು: ಎಸ್.ಪಿ ಬಾಲಸುಬ್ರಮಣ್ಯಂ

[related]

ಕನ್ನಡ ಚಿತ್ರರಂಗದಲ್ಲಿ ಪರಭಾಷೆಯಿಂದ ಸ್ಫೂರ್ತಿ ಪಡೆದ  ಹಲವಾರು ಚಿತ್ರಗೀತೆಗಳಿವೆ. ಅವುಗಳ ಬಗ್ಗೆ ಬೆಳಕು ಚೆಲ್ಲುವ ಸರಣಿ ಲೇಖನ ಮಾಲೆ ಸ್ಫೂರ್ತಿ ಸೆಲೆ. ಇಂಥಾ ಹಾಡುಗಳ ಬಗ್ಗೆ ನಿಮಗೆ ತಿಳಿದಿದ್ದರೆ ಕಾಮೆಂಟ್ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT