ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕಿ ಯೋಜನೆ ಪೂರ್ಣಗೊಳಿಸುವತ್ತ ಚಿತ್ತ

ನಗರಸಭೆ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಲಲಿತಾ ಅನಪೂರ
Last Updated 9 ಮೇ 2017, 6:52 IST
ಅಕ್ಷರ ಗಾತ್ರ
ಯಾದಗಿರಿ: ಇಲ್ಲಿನ ನಗರಸಭೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಲಲಿತಾ ಅನಪೂರ ಸೋಮವಾರ ಅಧಿಕಾರ ಸ್ವೀಕರಿಸಿದರು.
 
ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು,‘ ಸದಸ್ಯರೆಲ್ಲರೂ ಪಕ್ಷಾ ತೀತವಾಗಿ ಬೆಂಬಲ ಸೂಚಿಸಿದ ಪರಿಣಾಮ ಅಧಿಕಾರ ಸಿಕ್ಕಿದೆ. ಹಾಗಾಗಿ, ಪ್ರಸಕ್ತ ಆಯವ್ಯಯದಲ್ಲಿ ನಗರದ ಎಲ್ಲಾ 31ವಾರ್ಡ್‌ಗಳಲ್ಲಿ ಮೂಲಸೌಕರ್ಯ ಒದಗಿಸಲು ಪ್ರಯತ್ನಿಸಲಾಗುವುದು.

ಸದಸ್ಯರ ನಿರೀಕ್ಷೆಯಂತೆ ನಗರದಲ್ಲಿ ಅಭಿವೃದ್ಧಿ ಯೋಜನೆ ಹಮ್ಮಿಕೊಳ್ಳಲಾಗುವುದು. ಕೆಲ ಯೋಜನೆಗಳನ್ನಾದರೂ ಪೂರ್ಣಗೊಳಿಸುವತ್ತ ಚಿತ್ತ ಹರಿಸುವುದಾಗಿ ಅವರು ತಿಳಿಸಿದರು.
 
‘ನಗರದ ಕೆಲ ವಾರ್ಡ್‌ಗಳಲ್ಲಿ  ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ. ಇದರಿಂದ ಸಾರ್ವಜನಿಕರು ತೊಂದರೆ ಅನು ಭವಿಸುತ್ತಿದ್ದಾರೆ. ಇದಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ವಾರ್ಡ್‌ಸಭೆ ಹಮ್ಮಿ ಕೊಳ್ಳಲು ನಿರ್ಧರಿಸಲಾಗಿದೆ. ಮೇ11ರ ನಂತರ ವಾರ್ಡ್‌ಸಭೆ ಆರಂಭಗೊಳ್ಳಲಿದ್ದು, ಸದಸ್ಯರೊಡನೆ ಚರ್ಚಿಸಿ ಅಲ್ಲಿನ ಸಮಸ್ಯೆಗಳ ಬಗ್ಗೆ ನಿವಾಸಿಗಳಿಂದ ಕುಂದುಕೊರತೆ ಆಲಿಸಿ ಪಟ್ಟಿ ಮಾಡಲಾಗುವುದು. ನಂತರ ಸಮಸ್ಯೆಗಳ ಪರಿ ಹಾರಕ್ಕೆ ಮುಂದಾಗುತ್ತೇನೆ’ ಎಂದರು.
 
‘ವಿಶೇಷವಾಗಿ ನಗರದಲ್ಲಿ ಎಲ್ಲಾ ಬಡಾವಣೆಗಳಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಲಾಗುವುದು. ಈ ನಿಟ್ಟಿನಲ್ಲಿ ವಾರ್ಡುಗಳಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲು ಚಿಂತಿಸ ಲಾಗಿದೆ. ನಗರದ ಪ್ರತಿ ಶಾಲೆಗಳ ಮುಂದೆ ಸಸಿ ನಡೆಯುವ ಅಭಿಯಾನಕ್ಕೂ ಚಾಲನೆ ನೀಡಲು ನಿರ್ಧರಿಸಲಾಗಿದೆ. ಯಾದಗಿರಿ ನಗರವನ್ನು ಮಾದರಿ ನಗರವನ್ನಾಗಿಸಲು ಪ್ರಯತ್ನ ಮಾಡುತ್ತೇನೆ’ ಎಂದು ತಿಳಿಸಿದರು.
 
‘ನಗರಗಳ ಪ್ರಮುಖ ರಸ್ತೆಗಳ ಮಧ್ಯೆ ನಿರ್ಮಿಸಿರುವ ಡಿವೈಡರ್‌ಗಳ ಮಧ್ಯೆ ಅಲಂಕಾರಿಕ ಸಸಿಗಳನ್ನು ನಡೆಸಿ, ರಸ್ತೆ ಪಕ್ಕದಲ್ಲಿ ಉತ್ತಮ ಜಾತಿಯ ಮರಗಳನ್ನು ನೆಡಲು ಚಿಂತನೆ ನಡೆಸಲಾಗಿದೆ. 
 
ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಸಹಕಾರ ಹಾಗೂ ಜಿಲ್ಲಾಡಳಿತದ ನೆರವು ಪಡೆಯಲಾಗುವುದು. ನಗರ ಸೌಂದರ್ಯ ಕಾಪಾಡುವ ಕುರಿತು ಕೈಗೊಳ್ಳಬೇಕಾದ ಯೋಜನೆ ಬಗ್ಗೆ ಕೂಲಂಕಷವಾಗಿ ಸದಸ್ಯರೊಂದಿಗೆ ಚರ್ಚಿಸಲಾಗುವುದು’ ಎಂದು ತಿಳಿಸಿದರು.
 
‘ನಗರದಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಆರಂಭಿಸಲಾಗಿದ್ದ ಒಳಚರಂಡಿ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿಲ್ಲ. ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಕಳಪೆ ಕಾಮಗಾರಿ ಕಳಪೆ ಆರೋಪ ಕೇಳಿ ಬಂದಿದೆ. ಇದರಿಂದ ನಗರಸಭೆ ಸದಸ್ಯರ ಸಭೆಯಲ್ಲಿ ವಿಷಯ ಚರ್ಚಿಸಿ ಒಳಚರಂಡಿ ಕಾಮಗಾರಿಗೆ ಪುನರ್‌ ಚಾಲನೆ ನೀಡಲು ಚಿಂತನೆ ನಡೆಸಲಾಗಿದೆ’ ಎಂದು ವಿವರಿಸಿದರು. ನಗರಸಭೆ ಮಾಜಿ ಅಧ್ಯಕ್ಷ ಮಹ್ಮದ್ ಇಸಾಕ್ ಸೇಠ್, ಸದಸ್ಯ ಮರೆಪ್ಪ ಚೆಟ್ಟೇರಕರ್ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT