7
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ಮನರಂಜನೆಗೆ ಸಿಮೊ ಆ್ಯಪ್

Published:
Updated:
ಮನರಂಜನೆಗೆ ಸಿಮೊ ಆ್ಯಪ್

ಹೈದರಾಬಾದ್ ಮೂಲದ ಡಿಜಿಟಲ್ ಮನರಂಜನೆ ಕಂಪೆನಿ ಸಿಲಿಮೊಂಕ್ಸ್ (ಸಿಮೊ) ಎಂಬ ಮನರಂಜನೆ ಆ್ಯಪ್ ಬಿಡುಗಡೆ ಮಾಡಿದೆ. ತಮಿಳು, ಮಲಯಾಳಂ, ತೆಲುಗು, ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಮನರಂಜನೆ ವಿಡಿಯೊಗಳು, ಸಿನಿಮಾಗಳು, ಕಿರುಚಿತ್ರಗಳನ್ನು ವೀಕ್ಷಿಸಬಹುದು. ಇದು ಸಂಪೂರ್ಣ ಉಚಿತವಾಗಿದ್ದು ಉತ್ತಮ ಗುಣಮಟ್ಟದ ವಿಡಿಯೊ ಮತ್ತು ಆಡಿಯೊಗಳು ಸಿಗುತ್ತವೆ.  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಆಯ್ದ ವಿಡಿಯೊಗಳು ಇಲ್ಲಿ ಲಭ್ಯವಿವೆ.

ಇತರೆ ಮನರಂಜನೆ ಆ್ಯಪ್ ಗಳಿಗಿಂತಲೂ ಇದು ಭಿನ್ನವಾಗಿದೆ. ಅಲಾರಂ ಮಾದರಿಯಲ್ಲಿ ವಿಡಿಯೊ ನೋಡುವ ಮತ್ತು ಆಡಿಯೊ ಆಲಿಸುವ ಸೌಲಭ್ಯವಿದೆ. ಉದಾಹರಣೆಗೆ ಬಳಕೆದಾರರೊಬ್ಬರು ಸಂಜೆ 4 ಗಂಟೆಗೆ ವಿಡಿಯೊ ನೋಡಬೇಕು ಎಂದು ಟೈಮ್ ಸೆಟ್ ಮಾಡಿದರೆ ಆ ಟೈಮ್ ಗೆ ಸರಿಯಾಗಿ ವಿಡಿಯೊ ಆನ್ ಆಗುವ ವಿಶಿಷ್ಟ ಸೌಕರ್ಯ ಇದರಲ್ಲಿ ಕಲ್ಪಿಸಲಾಗಿದೆ.ಗೂಗಲ್ ಪ್ಲೇಸ್ಟೋರ್: sillymonk app 

ಎಂಪಿನ್ ಆ್ಯಪ್… ಮೈಕ್ರೊ ಫೈನಾನ್ಸ್ ನೆಟ್‌ವರ್ಕ್‌ ಸಂಸ್ಥೆಯು ಹಣಕಾಸು ವ್ಯವಹಾರದ ಬಗ್ಗೆ ಮಾಹಿತಿ ನೀಡುವ ಎಂಪಿನ್ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ. ಆಂಡ್ರಾಯ್ಡ್‌ ಪ್ಲಾಟ್‌ಫಾರಂನಲ್ಲಿ ಲಭ್ಯವಿರುವ ಈ ಆ್ಯಪ್ ಸಣ್ಣ ಹೂಡಿಕೆದಾರರು, ವ್ಯಾಪರಸ್ಥರು, ಉದ್ಯಮಿಗಳಿಗೆ ಹಣಕಾಸು ನೆರವಿನ ಬಗ್ಗೆ ಮಾಹಿತಿ ನೀಡುತ್ತದೆ.

ಸಾಲದ ಉದ್ದೇಶ, ಸಾಲದ ಸದುಪಯೋಗ, ಮರುಪಾವತಿ, ಸಾಲ ಪಡೆಯುವ ವಿಧಾನ, ನಿಯಮಗಳು, ನಿಬಂಧನೆಗಳು, ಷೇರು ಸಮಾಚಾರ, ಬಡ್ಡಿ ದರ ಇಳಿಕೆ, ಏರಿಕೆ ಮಾಹಿತಿ ಈ ಆ್ಯಪ್‌ನಲ್ಲಿ ಲಭ್ಯವಿದೆ. ಬಳಕೆದಾರರಿಗೆ ಸುಲಭವಾಗಿ ಅರ್ಥವಾಗುತಂಹ ವಿಡಿಯೊ ಮತ್ತು ಆಡಿಯೊ ಮಾಹಿತಿಯು ದೊರೆಯುತ್ತದೆ. ಹೊಸದಾಗಿ ಸಾಲ ಪಡೆಯುವವರು, ಯುವ ಉದ್ಯಮಿಗಳು ಮತ್ತು ಹೂಡಿಕೆದಾರರಿಗೆ ಈ ಆ್ಯಪ್ ಬಹು ಉಪಯುಕ್ತವಾಗಿದೆ. ಗೂಗಲ್ ಪ್ಲೇಸ್ಟೋರ್: mfin app

ಐಒಎಸ್ ಬಳಕೆದಾರರಿಗೆ ಸಿರಿ ಆ್ಯಪ್

ಫೇಸ್‌ಬುಕ್‌ ಕಂಪೆನಿಯು ಐಒಎಸ್ ವಾಟ್ಸ್್ಆ್ಯಪ್ ಬಳಕೆದಾರರಿಗೆ ಸಿರಿ ಎಂಬ ನೂತನ ಟೂಲ್ ಅನ್ನು ಪರಿಚಯಿಸಿದ್ದು ಇದರ ಮೂಲಕ ಅಪ್‌ಡೇಟ್‌ ಮೆಸೇಜ್‌ಗಳನ್ನು ನೋಡಬಹುದು. ಇದರಿಂದ ಬಳಕೆದಾರರು ಪದೇ ಪದೇ ಮೆಸೆಜ್್ ಬಾಕ್ಸ್‌ಗೆ ಹೋಗಿ ಸಂದೇಶಗಳನ್ನು ನೋಡುವುದು ತಪ್ಪುತ್ತದೆ.

ಸಿರಿಯಲ್ಲಿ ವಿವಿಧ ಕೆಟಗರಿಗಳನ್ನು ನಿರ್ಮಿಸಿ ಮೆಸೆಜ್ ನೋಡಬಹುದು. ಅಂದರೆ ಕಾಂಟ್ಯಾಕ್ಟ್ ಲಿಸ್ಟ್ ಅನ್ನು ಗೆಳೆಯರು, ಕುಟುಂಬವರ್ಗದವರು, ಸಹದ್ಯೋಗಿಗಳು ಎಂಬ ವಿಭಾಗಳನ್ನು ಮಾಡಿಕೊಂಡು ಸಂದೇಶಗಳನ್ನು ವೀಕ್ಷಿಸಬಹುದು. ವಾಟ್ಸ್್ಆ್ಯಪ್, ಫೇಸ್‌ಬುಕ್‌  ಮೆಸೆಂಜರ್್ ಸಂದೇಶವನ್ನು ಹ್ಯಾಂಡ್ಸ್ ಫ್ರೀಯಾಗಿ ನೋಡಬಹುದು. ಆ್ಯಪಲ್ ಸ್ಟೋರ್‌ನಲ್ಲಿ ಸಿರಿ ಆ್ಯಪ್ ಟೂಲ್ ಅನ್ನು ಉಚಿತವಾಗಿ ಡೌನ್್ಲೋಡ್ ಮಾಡಿಕೊಳ್ಳಬಹುದು.ಆ್ಯಪಲ್ ಸ್ಟೋರ್: siri tool

ಅರ್ಥ್‌ ಮ್ಯಾಪಿಂಗ್ ಆ್ಯಪ್

ಗೂಗಲ್ ಸಂಸ್ಥೆಯ ಉಚಿತವಾಗಿ ಅರ್ಥ್ ಮ್ಯಾಪಿಂಗ್ ಸೇವೆಯನ್ನು ಪರಿಚಯಿಸಿದೆ. ಈ ಮೂಲಕ ಭೂಮಿ ಸೇರಿದಂತೆ ಖಗೋಳ ವಿಜ್ಞಾನದ ಮಾಹಿತಿಯನ್ನು ಚಿತ್ರ ಹಾಗೂ ವಿಡಿಯೊ ಸಮೇತ ಪಡೆಯಬಹುದು ಎಂದು ಗೂಗಲ್ ಸಂಸ್ಥೆಯ ಅಂಗ ಸಂಸ್ಥೆಯಾಗಿರುವ ಗೂಗಲ್ ಅರ್ಥ್ ಮ್ಯಾಪಿಂಗ್ ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ.ಬಿಬಿಸಿ, ನಾಸಾದಂತಹ ಸಂಸ್ಥೆಗಳು ಅರ್ಥ್ ಮ್ಯಾಪಿಂಗ್‌ಗೆ ಮಾಹಿತಿ ಒದಗಿಸಿವೆ. 3ಡಿ ತಂತ್ರಜ್ಞಾನದ ಮೂಲಕ ಕುಳಿತಲೇ ಭೂಮಿ ಸುತ್ತುವ, ವಿವಿಧ ಗ್ರಹಗಳಿಗೆ ಲಗ್ಗೆ ಹಾಕಿದ ಅನುಭವ ಪಡೆಯಬಹುದು.

ಭಾರತೀಯರ ರಕ್ಷಣಾತ್ಮಕ ವ್ಯವಹಾರ…

ಭಾರತೀಯರು ಜಾಣತನದಿಂದ, ರಕ್ಷಣಾತ್ಮಕವಾಗಿ ಆನ್‌ಲೈನ್‌ನಲ್ಲಿ ವ್ಯವಹಾರ ನಡೆಸುತ್ತಾರೆ ಎಂದು ಇತ್ತೀಚಿನ ಸಮೀಕ್ಷೆಯೊಂದು ತಿಳಿಸಿದೆ. ಮಾಸ್ಟರ್ ಕಾರ್ಡ್ ಷಾಪಿಂಗ್ ಆನ್‌ಲೈನ್‌ ಸಂಸ್ಥೆ ಈ ಸಮೀಕ್ಷೆ ನಡೆಸಿದ್ದು ಶೇ. 72 ರಷ್ಟು ಭಾರತೀಯ ಗ್ರಾಹಕರು ರಕ್ಷಣಾತ್ಮಕವಾಗಿ ಆನ್‌ಲೈನ್ ವ್ಯವಹಾರ ನಡೆಸುತ್ತಾರೆ ಎಂದು ಹೇಳಿದೆ.

ಚೀನಾ 63.5, ಆಸ್ಟ್ರೇಲಿಯಾ 62.2, ನ್ಯೂಜಿಲೆಂಡ್ 59.8, ದಕ್ಷಿಣ ಕೊರಿಯಾದಲ್ಲಿ 34.6, ಹಾಂಕಾಂಗ್‌ 37.4 ರಷ್ಟು ಜನರು ಮಾತ್ರ ರಕ್ಷಣಾತ್ಮಕವಾಗಿ ವ್ಯವಹಾರ ನಡೆಸುತ್ತಾರೆ.

ಗುಡ್‌ಬಾಕ್ಸ್‌ ಮಿನಿ ಆ್ಯಪ್‌

ಸ್ಟಾರ್ಟ್‌ಅಪ್‌ ಕಂಪೆನಿ ಗುಡ್‌ಬಾಕ್ಸ್‌ ಮೊಬೈಲ್‌ ಆ್ಯಪ್‌, ಬೆಂಗಳೂರಿನ15 ಸಾವಿರಕ್ಕೂ ಅಧಿಕ ಉದ್ಯಮಿಗಳಿಗೆ ಡಿಐವೈ (ಡೂ ಇಟ್ಟ ಯುವರ್‌ಸೆಲ್ಫ್‌) ಆನ್‌ಲೈನ್‌ ವೇದಿಕೆ ಮೂಲಕ ‘ಮಿನಿ ಆ್ಯಪ್‌’ ಪಡೆಯುವ ಅವಕಾಶ ಕಲ್ಪಿಸಿದೆ. 300ಕ್ಕೂ ಹೆಚ್ಚು ಸ್ಥಳೀಯ ಉದ್ಯಮಗಳಾದ ಸೂಪರ್ ಮಾರ್ಕೆಟ್‌ಗಳು, ರೆಸ್ಟೋರೆಂಟ್‌ಗಳು ಇತ್ಯಾದಿ ಈಗ ಗುಡ್‌ಬಾಕ್ಸ್‌ನಲ್ಲಿ ಮಿನಿ ಆ್ಯಪ್‌ ಹೊಂದಿವೆ.

ವಹಿವಾಟಿನ ವಿವರಗಳು, ಮೆನು/ಬೆಲೆಗಳನ್ನು ಸೇರಿಸಿ ಆನ್‌ಲೈನ್‌ ಪಾವತಿಗಳನ್ನು ಈ ಮಿನಿ ಆ್ಯಪ್‌ನಲ್ಲಿ ದಾಖಲಿಸಬಹುದು. ವರ್ತಕರು ತಮ್ಮದೇ ಆ್ಯಪ್‌ ಪಡೆಯುವುದಕ್ಕಿಂತಲೂ ಶೇ 1 ಕ್ಕಿಂತ ಕಡಿಮೆ ವೆಚ್ಚದಲ್ಲಿ ಮಿನಿ ಆ್ಯಪ್‌ ಸೃಷ್ಟಿಸಿಕೊಳ್ಳಬಹುದು. ಆ ಮೂಲಕ ತಮ್ಮ ಉತ್ಪನ್ನಗಳ ಮಾಹಿತಿ ಅಪ್‌ಲೋಡ್‌ ಮಾಡಲು, ಗ್ರಾಹಕರೊಂದಿಗೆ ಚಾಟ್‌ ಮಾಡಲು ಸುಲಭವಾಗಲಿದೆ. ಆ ಮಿನಿ ಆ್ಯಪ್‌ ಗುಡ್‌ಬಾಕ್ಸ್‌ನ ಜಾಲತಾಣದಲ್ಲಿ ಸೇರಿಕೊಳ್ಳುತ್ತದೆ ಎಂದು ಸಿಇಒ ಅಬೇ ಜಕಾರಿಯಾ ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry