ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಯಾಳಂ ಚಿತ್ರ 'ಮಾಯಾವಿ'ಯಲ್ಲಿ 'ಎಕ್ಸ್‌ಕ್ಯೂಸ್ ಮಿ' ಚಿತ್ರದ ಹಾಡು 'ಬ್ರಹ್ಮ ವಿಷ್ಣು ಶಿವ' ಎಂದಾಗ

Last Updated 10 ಮೇ 2017, 9:25 IST
ಅಕ್ಷರ ಗಾತ್ರ

2003ರಲ್ಲಿ ತೆರೆಕಂಡ  ರೊಮ್ಯಾಂಟಿಕ್  ಚಿತ್ರ ಪ್ರೇಮ್ ನಿರ್ದೇಶನದ 'ಎಕ್ಸ್‌ಕ್ಯೂಸ್ ಮಿ'. ಸುನಿಲ್ ರಾವ್, ರಮ್ಯಾ ಮತ್ತು ಅಜಯ್ ರಾವ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ಈ ಚಿತ್ರ ಮ್ಯೂಸಿಕಲ್ ಹಿಟ್ ಆಗಿತ್ತು,

ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯದಲ್ಲಿ ಮೂಡಿ ಬಂದ ಪ್ರತಿಯೊಂದು ಹಾಡುಗಳು ಅದ್ಭುತವಾಗಿದ್ದವು. ಈ ಚಿತ್ರದಲ್ಲಿ 'ಬ್ರಹ್ಮ ವಿಷ್ಣು ಶಿವ' ಎಂಬ ಹಾಡೊಂದಿದೆ. ಪ್ರೇಮ್ ಅವರು ಈ ಹಾಡನ್ನು ಹಾಡಿದ್ದರು. ಸಂಗೀತ ನಿರ್ದೇಶನ ಆರ್.ಪಿ. ಪಟ್ನಾಯಿಕ್ ಅವರದ್ದು.

2007ರಲ್ಲಿ ತೆರೆಕಂಡ ಮಲಯಾಳಂ ಚಿತ್ರ ಮಾಯಾವಿ. ಮಮ್ಮೂಟ್ಟಿ, ಗೋಪಿಕಾ ಅಭಿನಯದ ಈ ಚಿತ್ರದಲ್ಲಿ 'ಮುಟ್ಟತ್ತೇ ಮುಲ್ಲೇ ಚೊಲ್ಲ್' ಎಂದು ಆರಂಭವಾಗುವ ಹಾಡಿಗೆ ಎಕ್ಸ್‌ಕ್ಯೂಸ್ ಮಿ ಚಿತ್ರದ  ಬ್ರಹ್ಮ ವಿಷ್ಣು ಶಿವ ಹಾಡೇ ಸ್ಫೂರ್ತಿ. ಅಲೆಕ್ಸ್ ಪೌಲ್ ಸಂಗೀತ ನಿರ್ದೇಶಿಸಿದ ಈ ಹಾಡನ್ನು ಯೇಸುದಾಸ್ ಮತ್ತು ಮಂಜರಿ ಹಾಡಿದ್ದರು.

[related]

ಪರಭಾಷೆಯ ಹಾಡುಗಳಿಂದ ಸ್ಫೂರ್ತಿ ಪಡೆದ ಕನ್ನಡ ಚಿತ್ರಗೀತೆಗಳು ಇರುವಂತೆಯೇ ಕನ್ನಡದಿಂದ ಸ್ಫೂರ್ತಿ ಪಡೆದ ಪರಭಾಷಾ ಚಿತ್ರಗೀತೆಗಳೂ ಇವೆ. ಅವುಗಳಲ್ಲಿ ಮಾಯಾವಿ ಚಿತ್ರದ ಹಾಡೂ ಕೂಡಾ ಒಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT