ಕೊಳವೆ ಬಾವಿ ನೀರು ಮರುಪೂರಣಕ್ಕೆ ಸಕಾಲ

7

ಕೊಳವೆ ಬಾವಿ ನೀರು ಮರುಪೂರಣಕ್ಕೆ ಸಕಾಲ

Published:
Updated:
ಕೊಳವೆ ಬಾವಿ ನೀರು ಮರುಪೂರಣಕ್ಕೆ ಸಕಾಲ

ಅಂತರ್ಜಲ ಮಟ್ಟವನ್ನು ಹೆಚ್ಚಿಸಬೇ ಕೆಂಬ ನಿಟ್ಟಿನಲ್ಲಿ ಇಂಗು ಗುಂಡಿ, ಕಾಲುವೆ, ಒಡ್ಡುಗಳನ್ನು ನಿರ್ಮಿಸುವುದನ್ನು ನೋಡಿ ದ್ದೇವೆ. ಹಲವು ವರ್ಷಗಳಿಂದ ಹರಿಯುವ ನೀರನ್ನು ಇಂಗಿಸುವ ಪ್ರಯತ್ನಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತ ಬಂದಿದೆ.ಆದರೆ ಇತ್ತೀಚಿನ ದಿನಗಳಲ್ಲಿ ಕರಾವಳಿಯಲ್ಲಿನ ಬೋರ್ ಯಂತ್ರಗಳು ಜೋರಾಗಿ ಸದ್ದು ಮಾಡತೊಡಗಿವೆ. ಇಂದು ರಾಜ್ಯದಾದ್ಯಂತ ಕುಡಿಯಲು ಮತ್ತು ಕೃಷಿಗೆ ಅತಿ ಹೆಚ್ಚಾಗಿ ನೆಚ್ಚಿಕೊಂಡಿರುವ ನೀರಿನ ಮೂಲವೂ ಇದೆ. ಹಾಗಾಗಿ, ಈ ದಿನಗಳಲ್ಲಿ ಬೋರ್ ರಿಚಾರ್ಜ್‌ನತ್ತ ಒಲವು ತೋರಬೇಕಾದ ಅಗತ್ಯವಿದೆ.

 

ಮೂರು, ನಾಲ್ಕು ಇಂಚು ನೀರು ದೊರೆತಿದೆ ಅಂದು ಕೊಂಡು ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬಳಸುವ ಬದಲು ಬೋರ್ ನೀರಿನ ಮಿತ ಬಳಕೆಯತ್ತಲೂ ಗಮನ ಹರಿಸಬೇಕಾಗಿದೆ. ಭೂಮಿಯೊಳಗಿನ ನೀರನ್ನು ಬಳ ಸುವ ಜೊತೆಗೆ ಬೋರ್ ರಿಚಾರ್ಜ್ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಪ್ರಯತ್ನಗಳನ್ನು ಕೈಗೊಳ್ಳಬೇಕಿದೆ.

 

ಈಗಾಗಲೇ ಧರ್ಮಸ್ಥಳದ ಹೇಮಾವತಿ ಹೆಗ್ಗಡೆ ಅವರ ಮಾರ್ಗ ದರ್ಶನದಂತೆ ಉತ್ತರ ಕನ್ನಡದ ಜಿಲ್ಲೆಗಳಲ್ಲಿ ಬೋರ್ ರಿಚಾರ್ಜ್ ಕಾರ್ಯಕ್ರಮ ಯಶಸ್ಸು ಪಡೆದಿದೆ. ಬೋರ್ ರಿಚಾರ್ಜ್ ಕಾರ್ಯ ಕ್ರಮ ಜಲನಿಧಿ ಬತ್ತುತ್ತಿರುವ ದಿನಗಳಲ್ಲಿ ಅನಿವಾರ್ಯ ಮತ್ತು ಅತ್ಯಗತ್ಯ. ಪ್ರತಿಯೊಬ್ಬರು ಕೈಗೊಳ್ಳಬಹುದಾದ ಪ್ರಯತ್ನವಿದು. ಇದಕ್ಕೆ ತಗುಲುವ ಖರ್ಚು ಕೂಡ ಕಡಿಮೆ.

 

ನೀರು ಮರುಪೂರಣ ಹೇಗೆ?

ಬತ್ತಿದ ಅಥವಾ ನೀರಿರುವ ಬೋರ್‌ನ ಸುತ್ತ ಐದು ಅಡಿ ಸುತ್ತಳತೆಯಾಗಿ ಐದರಿಂದ ಹತ್ತು ಅಡಿ ಆಳವಾಗಿ ಗುಂಡಿ ತೆಗೆಯಬೇಕು. ಬೋರ್‌ಗೆ ಅಳವಡಿಸಿದ ಚೇಸಿಂಗ್ ಪೈಪ್‌ನ ಸುತ್ತ ಗುಂಡಿಯ ತಳದಿಂದ ಮುಕ್ಕಾಲು ಅಡಿ ಯಷ್ಟು ಬಿಟ್ಟು ಡ್ರಿಲ್‌ನಿಂದ 80ರಿಂದ 100ರಷ್ಟು ರಂಧ್ರಗಳನ್ನು ಕೊರೆಯಬೇಕು.

 

ರಂಧ್ರ ಕೊರೆದ ಚೇಸಿಂಗ್ ಪೈಪ್‌ಗೆ ರಂಧ್ರದಲ್ಲಿ ಕಸಕಡ್ಡಿ ಗಳು ಬೋರ್‌ ನೊಳಗೆ ಹೋಗದಂತೆ ತಡೆಯುವು ದಕ್ಕಾಗಿ ನೈಲಾನ್‌ನ ನೆಟ್ ಒಂದನ್ನು ಸುತ್ತ ಕಟ್ಟಬೇಕು. ಗುಂಡಿಯ ಅಡಿಭಾಗಕ್ಕೆ ಒಂದರಿಂದ ಒಂದೂವರೆ ಅಡಿಯಷ್ಟು ಎತ್ತರಕ್ಕೆ ಸೈಜ್ ಕಲ್ಲನ್ನು ಹಾಕಬೇಕು. ನಂತರ ಅದರ ಮೇಲೆ ಒಂದು ಅಡಿಯಷ್ಟು ಎತ್ತರಕ್ಕೆ 75 ಎಂ.ಎಂ. ಗಾತ್ರದ ಜಲ್ಲಿ ಕಲ್ಲನ್ನು ತುಂಬಬೇಕು.

 

ಅದರ ಮೇಲೆ ಅರ್ಧ ಅಡಿಯಷ್ಟು ಎತ್ತರಕ್ಕೆ ಸಣ್ಣ ಜಲ್ಲಿಕಲ್ಲನ್ನು ಹಾಕಿ ಮುಚ್ಚಬೇಕು. ಅದರ ಮೇಲೆ ಒಂದು ಗೋಣಿ ಚೀಲದಷ್ಟು ಇದ್ದಿಲು ಹಾಕಿ ನಂತರ ಪೂರ್ತಿ ಗುಂಡಿಯನ್ನು ಮರಳಿನಿಂದ ಮುಚ್ಚಬೇಕು. ಸಣ್ಣಪುಟ್ಟ ಕಾಲುವೆ, ಗದ್ದೆಗಳಲ್ಲಿ ಶೇಖರಿಸಲ್ಪಟ್ಟ ನೀರನ್ನು ಇದಕ್ಕೆ ಬಿಡಬಹುದಾಗಿದೆ.

 

ನೀರು ಹಂತಹಂತವಾಗಿ ಗುಂಡಿಗೆ ಸೇರಿ ಚೇಸಿಂಗ್ ಪೈಪ್‌ನ ಮೂಲಕ ನೀರು ಬೋರ್‌ಗೆ ಸೇರುತ್ತದೆ. ನೀರು ವಿವಿಧ ಹಂತಗಳಲ್ಲಿ ಸೋಸಿ ಹೋಗುವುದರಿಂದ ಬೋರ್‌ಗೆ ಕಲ್ಲು, ಮಣ್ಣು ಬೇಡವಾದ ವಸ್ತುಗಳು ಸೇರಲು ಸಾಧ್ಯವೇ ಇಲ್ಲ. 

 

ಈಗಾಗಲೇ ಉತ್ತರ ಕರ್ನಾಟಕದ ಕೆಲವು ಕಡೆಗಳಲ್ಲಿ ಬೋರ್ ರಿಚಾರ್ಜ್ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳುವ ಮೂಲಕ ಬತ್ತಿದ ಬೋರ್‌ಗಳಲ್ಲಿ ಮತ್ತೆ ನೀರನ್ನು ಪಡೆಯಲಾಗಿದೆ. ಇದು ಪ್ರತಿಯೊಬ್ಬರು  ಮಾಡಬಹುದಾದ ಪ್ರಯೋಗವಾಗಿದ್ದು ಮುಂದಿನ ದಿನಗಳಲ್ಲಿ ಇತರರು ಇತ್ತ ಕಡೆ ಒಲವು ತೋರಬಹುದಾಗಿದೆ. 

 

ಬಳಸಿ ಉಳಿಯುವ ಹೆಚ್ಚುವರಿ ನೀರನ್ನು ಬೋರ್‌ಗೆ ಹಾಯಿಸುವ ಮೂಲಕ ನೀರ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಬೋರ್ ರಿಚಾರ್ಜ್ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಯೋಜನೆಯ ಕೃಷಿ ಅಧಿಕಾರಿ ರಾಘವೇಂದ್ರ ಅವರನ್ನು ಸಂಪರ್ಕಿಸಬಹುದು. ಮೊಬೈಲ್ ನಂಬರ್: 88802 99548. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry