ಪಂಜಾಬ್ ವಿರುದ್ಧ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ

ಮುಂಬೈ: ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 10ನೇ ಆವೃತ್ತಿಯ 51ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ – ಮುಂಬೈ ಇಂಡಿಯನ್ಸ್ ತಂಡಗಳು ಗೆಲುವಿಗಾಗಿ ಮುಖಾಮುಖಿಯಾಗಿವೆ.
ಕಿಂಗ್ಸ್ ವಿರುದ್ಧ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಪಾಯಿಂಟ್ ಪಟ್ಟಿಯ ಅಗ್ರಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ಪಾಲಿಗೆ ಇದು ಔಪಚಾರಿಕ ಪಂದ್ಯ. ಆದರೆ, ಕಿಂಗ್ಸ್ ತಂಡಕ್ಕೆ ಇದು ಮಹತ್ವದ ಹೋರಾಟ.
ರೋಹಿತ್ ಶರ್ಮಾ ನಾಯಕತ್ವದ ಇಂಡಿಯನ್ಸ್ ತಂಡವು ಟೂರ್ನಿಯಲ್ಲಿ 12 ಪಂದ್ಯಗಳನ್ನು ಆಡಿ ಒಂಬತ್ತರಲ್ಲಿ ಗೆದ್ದಿದೆ. ಅದರೊಂದಿಗೆ 18 ಪಾಯಿಂಟ್ ಗಳನ್ನುಗಳಿಸಿ ಮೊದಲ ಸ್ಥಾನ ಪಡೆದು ಕೊಂಡಿದೆ. ಅಷ್ಟೇ ಪಂದ್ಯಗಳನ್ನು ಆಡಿರುವ ಕಿಂಗ್ಸ್ ತಂಡವು ಆರು ಜಯ ಸಾಧಿಸಿ 12 ಅಂಕಗಳನ್ನು ಗಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.