ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಂಖೆಡೆಯಲ್ಲಿ ರನ್‌ ಹೊಳೆ ಹರಿಸಿದ ಕಿಂಗ್ಸ್

Last Updated 11 ಮೇ 2017, 20:09 IST
ಅಕ್ಷರ ಗಾತ್ರ

ಮುಂಬೈ: ಪ್ಲೇ ಆಫ್‌ ಪ್ರವೇಶಕ್ಕೆ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದ್ದ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡ ಗುರುವಾರ ಬಲಿಷ್ಠ ಮುಂಬೈ ಇಂಡಿ ಯನ್ಸ್‌ ತಂಡದ ಬೌಲಿಂಗ್‌ ದಾಳಿಯನ್ನು ದೂಳೀಪಟ ಮಾಡಿತು. ಆದರೆ ಅಷ್ಟೇ ಸಮರ್ಥವಾಗಿ ಉತ್ತರ ನೀಡಿದ ಎದು ರಾಳಿ ಬ್ಯಾಟ್ಸ್‌ಮನ್‌ಗಳು ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು.

ಇದರಿಂದ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಸೇರಿದ್ದ ಕ್ರಿಕೆಟ್ ಪ್ರಿಯರು ಹುಚ್ಚೆದ್ದು ಕುಣಿದರು. ಉಭಯ ತಂಡಗಳ ಜಿದ್ದಾಜಿದ್ದಿ ಹೋರಾಟದ ಕೊನೆಯಲ್ಲಿ ಕಿಂಗ್ಸ್ ಇಲೆವನ್‌ಗೆ ಜಯ ಒಲಿಯಿತು. 231 ರನ್‌ಗಳ ಜಯದ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಆಟ ಗಾರರು ಹೋರಾಡಿ ಸೋತು ಪ್ರೇಕ್ಷಕರ ಮನಗೆದ್ದರು. ಈ ಜಯದೊಂದಿಗೆ ಕಿಂಗ್ಸ್ ಇಲೆವನ್ ತಂಡದ ಪ್ಲೇ ಆಫ್ ಹಂತಕ್ಕೇರುವ ಕನಸು ಜೀವಂತವಾಗಿ ಉಳಿಯಿತು.
ಈಗ 13 ಪಂದ್ಯಗಳಲ್ಲಿ 14 ಪಾಯಿಂಟ್ ಗಳಿಸಿರುವ ತಂಡ ಮುಂದಿನ ಪಂದ್ಯವನ್ನೂ ಗೆದ್ದರೆ ಪ್ಲೇ ಆಫ್‌ ಹಂತಕ್ಕೆ ಏರುವ ಸಾಧ್ಯತೆ ಇದೆ. ಗುಜರಾತ್ ಲಯನ್ಸ್‌ ವಿರುದ್ಧದ ಪಂದ್ಯದಲ್ಲಿ ಸನ್‌ ರೈಸರ್ಸ್ ಹೈದರಾಬಾದ್ ಸೋತರೆ ಇನ್ನಷ್ಟು ಸುಲಭವಾಗಲಿದೆ. 

ಸ್ಫೋಟಿಸಿದ ಸಿಮನ್ಸ್‌, ಪಾರ್ಥಿವ್‌, ಪೊಲಾರ್ಡ್‌: ಗುರಿ 200ಕ್ಕೂ ಅಧಿಕ ಇದ್ದ ಕಾರಣ ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ ಮನ್‌ಗಳು ಆರಂಭದಲ್ಲೇ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದರು. ಲೆಂಡ್ಲ್‌ ಸಿಮನ್ಸ್ ಮತ್ತು ಪಾರ್ಥಿವ್ ಪಟೇಲ್‌ ಮೋಹಕ ಬ್ಯಾಟಿಂಗ್ ಮೂಲಕ 8.4 ಓವರ್‌ಗಳಲ್ಲಿ 99 ರನ್ ಜೋಡಿಸಿದರು. 4 ಸಿಕ್ಸರ್ಸ್‌ ಮತ್ತು 5 ಬೌಂಡರಿಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ ಸಿಮನ್ಸ್‌ 32 ಎಸೆತಗಳಲ್ಲಿ 59 ರನ್‌ ಸಿಡಿಸಿದರು.

ನ್ನೊಂದು ತುದಿಯಲ್ಲಿ ಪಾರ್ಥಿವ್ ಕೂಡ ಸುಮ್ಮನಿರಲಿಲ್ಲ. 23 ಎಸೆತಗಳಲ್ಲಿ 7 ಬೌಂಡರಿ ಸಿಡಿಸಿದ ಅವರು 38 ರನ್‌ ಗಳಿಸಿದರು. 10 ಓವರ್‌ಗಳ ಒಳಗೆ ಇವರಿಬ್ಬರ ವಿಕೆಟ್ ಕಳೆದುಕೊಂಡ ‘ಇಂಡಿಯನ್ಸ್’ ನಂತರ 121 ರನ್‌ಗಳಾಗುವಷ್ಟರಲ್ಲಿ ನಿತೀಶ್ ರಾಣ ಮತ್ತು ರೋಹಿತ್ ಶರ್ಮಾ ಅವರ ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ನಿಟ್ಟುಸಿರು ಬಿಟ್ಟ ಕಿಂಗ್ಸ್ ಇಲೆವೆನ್‌ ಪಾಳಯದಲ್ಲಿ ಕೀರನ್ ಪೊಲಾರ್ಡ್ ಮತ್ತು ಹಾರ್ದಿಕ್‌ ಪಾಂಡ್ಯ ಮತ್ತೆ ಆತಂಕ ಸೃಷ್ಟಿಸಿದರು. ಐದನೇ ವಿಕೆಟ್‌ಗೆ 21 ಎಸೆತಗಳಲ್ಲಿ 55 ರನ್‌ ಸೇರಿಸಿ ಮುಂಬೈ ಇಂಡಿಯನ್ಸ್ ತಂಡದವರಲ್ಲಿ ಮತ್ತೆ ಜಯದ ಆಸೆ ಚಿಗುರುವಂತೆ ಮಾಡಿದರು. ಕರಣ್ ಶರ್ಮಾ ಮತ್ತು ಪೊಲಾರ್ಡ್ ಜೊತೆಗೂಡಿದಾಗ ಇನ್ನಷ್ಟು ರನ್‌ ಹೊಳೆ ಹರಿಯಿತು. ಆರನೇ ವಿಕೆಟ್‌ಗೆ 10 ಎಸೆತಗಳಲ್ಲಿ 31 ರನ್‌ ಸೇರಿಸಿದ ಇವರಿಬ್ಬರು ತಂಡದ ಗತಿಯನ್ನೇ ಬದಲಿಸಿದರು. ಕರಣ್ ಶರ್ಮಾ ಔಟಾದರೂ ಪಟ್ಟು ಬಿಡದ ಪೊಲಾರ್ಡ್‌ (50; 24ಎ, 5 ಸಿ, 1 ಬೌಂ) ಕೊನೆಯ ಎರಡು ಓವರ್‌ಗಳಲ್ಲಿ ಇನ್ನಷ್ಟು ವೇಗವಾಗಿ ರನ್ ಗಳಿಸಿದರು. ಆದರೆ ತಂಡವನ್ನು ಗೆಲುವಿನ ದಡ ಸೇರಿಸಲು ಅವರಿಗೆ ಸಾಧ್ಯವಾಗಲಿಲ್ಲ.

ಕಿಂಗ್ಸ್‌ ಬ್ಯಾಟ್ಸ್‌ಮನ್‌ಗಳ ಅಬ್ಬರ: ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಇಂಡಿಯನ್ಸ್‌ ತಂಡದ ನಿರ್ಧಾರ ತಪ್ಪಾ ಯಿತು ಎನ್ನುವ ರೀತಿಯಲ್ಲಿ ಕಿಂಗ್ಸ್‌ ಬ್ಯಾಟ್ಸ್‌ಮನ್‌ಗಳು ರನ್‌ ಕದ್ದರು. ವೃದ್ಧಿ ಮಾನ್ ಸಹಾ (ಔಟಾಗದೆ 93; 55ಎ, 11ಬೌಂ 3ಸಿ) ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್  (47; 21ಎ, 2ಬೌಂ, 5ಸಿ) ಕ್ರಮವಾಗಿ ಸ್ವಲ್ಪ ರನ್‌ಗಳ ಅಂತರದಿಂದ ಶತಕ ಮತ್ತು ಅರ್ಧಶತಕಗಳನ್ನು ತಪ್ಪಿಸಿ ಕೊಂಡರು. ಆದರೆ, ತಮ್ಮ ತಂಡವು ದೊಡ್ಡ ಮೊತ್ತ ಪೇರಿಸಲು ಅಮೂಲ್ಯ ಕಾಣಿಕೆ ನೀಡಿದರು.

ಮಾರ್ಟಿನ್ ಗಪ್ಟಿಲ್ (36; 18ಎ, 5ಬೌಂ, 1ಸಿ) ಮತ್ತು ಸಹಾ ತಂಡಕ್ಕೆ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ  ಕೇವಲ 5.3 ಓವರ್‌ಗಳಲ್ಲಿ   68 ರನ್‌ಗಳನ್ನು ಸೇರಿಸಿದರು.

ಆರನೇ ಓವರ್‌ನಲ್ಲಿ ಕರ್ಣ ಶರ್ಮಾ ಅವರ ಎಸೆತದಲ್ಲಿ ಗಪ್ಟಿಲ್ ಅವರು ಹಾರ್ದಿಕ್ ಪಾಂಡ್ಯಗೆ ಕ್ಯಾಚಿತ್ತು ನಿರ್ಗ ಮಿಸಿದರು. ಆ ನಂತರ ಬಂಗಾಳದ ಆಟ ಗಾರ ಸಹಾ ಅವರ ಆಟ ರಂಗೇರಿತು. ಅವರೊಂದಿಗೆ ಸೇರಿದ ನಾಯಕ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಬೀಸಾಟ ಆರಂಭಿಸಿ ದರು. ಈಗಾಗಲೇ ಪ್ಲೇ ಆಫ್‌ ಪ್ರವೇಶಿ ಸಿರುವ  ಮುಂಬೈ ತಂಡಕ್ಕೆ ಇದು ಔಪ ಚಾರಿಕ ಪಂದ್ಯವಾಗಿತ್ತು. ಆದರೆ ಟೂರ್ನಿ ಯುದ್ದಕ್ಕೂ ಉತ್ತಮ ಬೌಲಿಂಗ್ ಮಾಡಿದ್ದ ತಂಡದ ಎಲ್ಲ ಬೌಲರ್‌ಗಳು ಸಹಾ ಮತ್ತು ಮ್ಯಾಕ್ಸ್‌ವೆಲ್ ಅವರ ಆಟದ ಮುಂದೆ ಬಸವಳಿದರು. ಮ್ಯಾಕ್ಸ್‌ವೆಲ್ ಅವರು ಐದು ಅಮೋಘ ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ತಂಡ ದ ರನ್‌ ಗಳಿಕೆಗೆ ವೇಗ ತುಂಬಿದರು.

ಸಹಾ ಕೂಡ ಹಿಂದೆ ಬೀಳಲಿಲ್ಲ. ಕೇವಲ 31 ಎಸೆತಗಳಲ್ಲಿ ಅರ್ಧಶತಕದ ಗಡಿ ಮುಟ್ಟಿದರು.  ಅದರಲ್ಲಿ ಎಂಟು ಬೌಂಡರಿಗಳು ಮತ್ತು ಒಂದು ಸಿಕ್ಸರ್ ಇತ್ತು. ಅವರು ಒಟ್ಟು ಮೂರು ಸಿಕ್ಸರ್‌ ಗಳನ್ನು ಸ್ಪೋಟಿಸಿದರು. ಮ್ಯಾಕ್ಸ್‌ವೆಲ್ ಜೊತೆಗೆ ಎರಡನೇ ವಿಕೆಟ್  ಜೊತೆಯಾಟ ದಲ್ಲಿ  63 ರನ್‌ಗಳನ್ನು ಸೇರಿಸಿದರು. ಅದ ರಿಂದಾಗಿ ಕೇವಲ 10.3 ಓವರ್‌ಗಳಲ್ಲಿ ತಂಡದ ಮೊತ್ತವು 131ಕ್ಕೆ ಮುಟ್ಟಿತು. 

ಸಂಕ್ಷಿಪ್ತ ಸ್ಕೋರ್‌:

ಕಿಂಗ್ಸ್ ಇಲೆವೆನ್ ಪಂಜಾಬ್‌: 20 ಓವರ್‌ಗಳಲ್ಲಿ 3 ವಿಕೆಟ್‌ ಗಳಿಗೆ 230 (ಮಾರ್ಟಿನ್ ಗಪ್ಟಿಲ್‌ 36, ವೃದ್ಧಿಮಾನ್ ಸಹಾ 93, ಗ್ಲೆನ್ ಮ್ಯಾಕ್ಸ್‌ ವೆಲ್‌ 47, ಶಾನ್‌ ಮಾರ್ಷ್‌ 25); 

ಮುಂಬೈ ಇಂಡಿಯನ್ಸ್‌:  20 ಓವರ್‌ ಗಳಲ್ಲಿ 6 ವಿಕೆಟ್‌ಗಳಿಗೆ 223 (ಲೆಂಡ್ಲ್‌ ಸಿಮನ್ಸ್‌ 59, ಪಾರ್ಥಿವ್ ಪಟೇಲ್‌ 38, ಕೀರನ್ ಪೊಲಾರ್ಡ್‌ ಔಟಾಗದೆ 50, ಹಾರ್ದಿಕ್‌ ಪಾಂಡ್ಯ 30; ಮೋಹಿತ್ ಶರ್ಮಾ 57ಕ್ಕೆ2).

ಫಲಿತಾಂಶ: ಕಿಂಗ್ಸ್ ಇಲೆವೆನ್ಗೆ 7 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT