ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಸಲಾಮಿ' ಚಿತ್ರದ ಹಾಡಿನ ರಾಗದಲ್ಲಿ ಮೊಗವಾ ನೀ ನೋಡುವೇಕೇ ಎಂದು ಹಾಡಿದ 'ಜಾಜಿ ಮಲ್ಲಿಗೆ'

Last Updated 15 ಮೇ 2017, 10:57 IST
ಅಕ್ಷರ ಗಾತ್ರ

'ದೇವತೆಯೆ ಕಂಡೇನ್' ಎಂಬ ತಮಿಳು ಚಿತ್ರದ ರಿಮೇಕ್ ಕನ್ನಡದ 'ಜಾಜಿ ಮಲ್ಲಿಗೆ'. ನಟ ಅಜಯ್ ರಾವ್ ಮತ್ತು ಗೌರಿ ನಾಯಕ- ನಾಯಕಿಯರಾಗಿ ಅಭಿನಯಿಸಿದ ಈ ಸಿನಿಮಾ 2009ರಲ್ಲಿ ತೆರೆಕಂಡಿತ್ತು. ಸಿನಿಮಾ ನಿರ್ದೇಶನ ಅನಂತರಾಜು, ಸಂಗೀತ ನಿರ್ದೇಶನ ಸಾಧು ಕೋಕಿಲ ಅವರದ್ದು.

ಈ ಚಿತ್ರದಲ್ಲಿ 'ಮೊಗವಾ ನೀ ನೋಡುವೇಕೇ..ಒಲವಿಂದ ಮನಸಾ ನೀ ನೋಡಾ' ಎಂಬ ಸುಂದರವಾದ ಹಾಡು ಇದೆ. ಈ ಹಾಡನ್ನು ಹಾಡಿದ್ದು ಕುನಾಲ್ ಗಾಂಜಾವಾಲ ಮತ್ತು ಕೆ.ಎಸ್. ಚಿತ್ರಾ.

1994ರಲ್ಲಿ ತೆರೆಕಂಡ ಬಾಲಿವುಡ್ ಚಿತ್ರ 'ಸಲಾಮಿ'ಯಲ್ಲಿ ಕುಮಾರ್ ಸಾನು ಮತ್ತು ಆಶಾ ಭೋಸ್ಲೆ ಹಾಡಿದ 'ಚೆಹರಾ ಕ್ಯಾ ದೇಖ್ ತೇ ಹೋ' ಎಂಬ ಹಾಡೊಂದಿದೆ. ನದೀಮ್- ಶ್ರವಣ್ ಸಂಗೀತ ನಿರ್ದೇಶಿಸಿದ ಈ ಸಿನಿಮಾ ಬಾಕ್ಸ್ ಆಫೀಸ್‍ನಲ್ಲಿ ಹೆಚ್ಚು ಸದ್ದು ಮಾಡದೇ ಇದ್ದರೂ, ಇದರ ಹಾಡುಗಳು ಸೂಪರ್ ಹಿಟ್ ಆಗಿದ್ದವು.

ಚಿತ್ರ: ಜಾಜಿ ಮಲ್ಲಿಗೆ
ಹಾಡು: ಮೊಗವಾ ನೀ ನೋಡುವೇಕೇ
ಗಾಯಕರು: ಕುನಾಲ್ ಗಾಂಜಾವಾಲ, ಕೆ.ಎಸ್ ಚಿತ್ರಾ
ಸಂಗೀತ ನಿರ್ದೇಶನ: ಸಾಧು ಕೋಕಿಲ

ಸಾಮ್ಯತೆ

ಚಿತ್ರ: ಸಲಾಮಿ (ಹಿಂದಿ)
ಹಾಡು: ಚೆಹರಾ ಕ್ಯಾ ದೇಖ್ ತೇ ಹೋ
ಗಾಯಕರು: ಕುಮಾರ್ ಸಾನು, ಆಶಾ ಭೋಂಸ್ಲೆ
ಸಂಗೀತ ನಿರ್ದೇಶನ: ನದೀಮ್-ಶ್ರವಣ್

'ಜಾಜಿ ಮಲ್ಲಿಗೆ ಚಿತ್ರದ ಮೊಗವಾ ನೀ ನೋಡುವೇಕೇ' ಹಾಡಿನ ರಾಗ 'ಚೆಹರಾ ಕ್ಯಾ ದೇಖ್ ತೇ ಹೋ' ಹಾಡನ್ನು ತುಂಬಾ ಹೋಲುತ್ತದೆ. ಈ ಹಾಡುಗಳನ್ನು ಕೇಳಿದರೆ ಜಾಜಿ ಮಲ್ಲಿಗೆ ಚಿತ್ರದ ಹಾಡಿಗೆ 'ಸಲಾಮಿ' ಚಿತ್ರದ ಹಾಡೇ ಸ್ಫೂರ್ತಿ ಎಂಬುದನ್ನು ಅಲ್ಲಗೆಳೆಯುವಂತಿಲ್ಲ.

[related]

ಪರಭಾಷೆಯಿಂದ ಸ್ಫೂರ್ತಿ ಪಡೆದ ಕನ್ನಡ ಹಾಡುಗಳ ಬಗ್ಗೆ ಸ್ಫೂರ್ತಿ ಸೆಲೆ ಸರಣಿ ಲೇಖನ ಮಾಲೆಯ ಮೂಲಕ ಬೆಳಕು ಚೆಲ್ಲುತ್ತಿದ್ದೇವೆ. ನಿಮಗೂ ಇಂಥಾ ಹಾಡುಗಳ ಬಗ್ಗೆ ತಿಳಿದಿದ್ದರೆ ಕಾಮೆಂಟ್ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT