ಸರಳ ಅಮ್ಮ ಜೂಹಿ ಚಾವ್ಲಾ

7

ಸರಳ ಅಮ್ಮ ಜೂಹಿ ಚಾವ್ಲಾ

Published:
Updated:
ಸರಳ ಅಮ್ಮ ಜೂಹಿ ಚಾವ್ಲಾ

ಒಂದು ಕಾಲದಲ್ಲಿ ಬಾಲಿವುಡ್‌ನ  ಜನಪ್ರಿಯ ನಟಿಯಾಗಿ, ಸೌಂದರ್ಯದ ಖಣಿಯಾಗಿ ಹೆಸರು ಮಾಡಿದ್ದ ಜೂಹಿ ಚಾವ್ಲಾ ಇಂದಿಗೂ ಅದೇ ಛಾಪನ್ನು ಉಳಿಸಿಕೊಂಡು ಬಂದವರು. ಹೀಗಿದ್ದೂ ಅವರು ತಮ್ಮ ಮಕ್ಕಳಿಗೆ ಮಾತ್ರ ಸರಳ, ಸಾಮಾನ್ಯ ಅಮ್ಮನಂತೆ. 

 

ಅಮ್ಮ ಹಾಗೂ ಮಕ್ಕಳ ಬಾಂಧವ್ಯ ಹೇಗಿರುತ್ತದೋ ಅಂತೆಯೇ ಅವರಿದ್ದು, ಯಾವುದೇ ರೀತಿಯಲ್ಲೂ ಅವರ ಸ್ಟಾರ್‌ಗಿರಿ ಮಕ್ಕಳ ಮೇಲೆ ಪ್ರಭಾವ ಬೀರದಂತೆ ನೋಡಿಕೊಂಡಿದ್ದಾರಂತೆ.  ಅರ್ಜುನ್‌ (13) ಹಾಗೂ ಝಾನ್ವಿ (16) ಎನ್ನುವ ಇಬ್ಬರು ಮಕ್ಕಳಿದ್ದು ಅವರೇ ತಮ್ಮ ಬದುಕು ಎಂದು ಹೇಳಿಕೊಂಡಿದ್ದಾರೆ.

 

‘ಎಂದೂ ನನ್ನನ್ನು ದೊಡ್ಡ ಸ್ಟಾರ್‌, ನಟಿ ಎನ್ನುವ ರೀತಿಯಲ್ಲಿ ನನ್ನ ಮಕ್ಕಳು ನೋಡಿಯೇ ಇಲ್ಲ. ನಾವು ಸುತ್ತಾಡಲು ಅಥವಾ ಶಾಪಿಂಗ್‌ಗೆ ಹೋದಾಗಲೂ ಅಷ್ಟೇ, ಆಟೊಗ್ರಾಫ್‌ನಲ್ಲಿ ಸಹಿ ಹಾಕಲು ನಿಂತರೂ ಅವರು ಇಷ್ಟಪಡುವುದಿಲ್ಲ.ಅವರೊಂದಿಗೆ ಹೊರಗಡೆ ಹೋದಾಗಲೂ ನಾನು ಅವರಿಗೆ ಸಮಯ ನೀಡುತ್ತಿಲ್ಲ ಎನ್ನುವ ಬೇಸರ ಅವರಿಗೆ. ಒಂದೊಮ್ಮೆ ಸಹಿ ಹಾಕುತ್ತಾ ನಿಂತೆ ಎಂದಾದರೆ ಇನ್ನೆಂದಿಗೂ ನಿನ್ನೊಂದಿಗೆ ಬರುವುದಿಲ್ಲ ಎಂದು ಹಠ ಮಾಡುತ್ತಾರೆ’ ಎಂದು ಹೇಳಿಕೊಂಡಿದ್ದಾರೆ ಜೂಹಿ.

 

ಸಿನಿ ತಾರೆಯೇ ಆಗಿದ್ದರೂ ತಾಯಿಯಾಗುವುದು ಕಷ್ಟವೂ ಅಲ್ಲ, ಭಿನ್ನವೂ ಅಲ್ಲ ಎಂದಿರುವ ಅವರು, ‘ಮಕ್ಕಳ ಟಿಫಿನ್‌ ಬಾಕ್ಸ್‌ನಲ್ಲಿ ಏನಿದೆ, ಶಾಲೆಯಲ್ಲಿ ಎಲ್ಲವೂ ಸರಿ ಇದೆಯೇ, ಅವರಿಗೆ ಯಾವುದಾದರೂ ವಿಷಯದಲ್ಲಿ ತರಬೇತಿಯ ಅವಶ್ಯಕತೆ ಇದೆಯೇ, ಅವರ ಆರೋಗ್ಯ ಸರಿಯಾಗಿದೆಯೇ, ಹೋಂವರ್ಕ್‌ ಅನ್ನು ಚಾಚೂ ತಪ್ಪದೆ ಮಾಡುತ್ತಿದ್ದಾರೆಯೇ ಎಂಬೆಲ್ಲವನ್ನೂ ನಿರಂತರವಾಗಿ ವಿಚಾರಿಸುತ್ತಿರುತ್ತೇನೆ’ ಎಂದಿದ್ದಾರೆ ಜೂಹಿ. 

 

ಅಂದಹಾಗೆ ಅವರ ಮಕ್ಕಳು ಜೂಹಿ ಮಾಡಿರುವ ಸಿನಿಮಾಗಳನ್ನು ಅಷ್ಟಾಗಿ ನೋಡಿಲ್ಲವಂತೆ. ‘ಭೂತ್‌ನಾತ್‌’ ಚಿತ್ರವೊಂದಕ್ಕೆ ಅವರನ್ನು ಕರೆದುಕೊಂಡು ಹೋಗಿದ್ದರಂತೆ. ಜೂಹಿ ಮಕ್ಕಳು ಕೆಲವೊಮ್ಮೆ ಶಾರುಖ್‌ ಖಾನ್‌ ಅವರನ್ನು ಭೇಟಿ ಆಗುತ್ತಾರಂತೆ. ಬಿಟ್ಟರೆ ಸಿನಿಮಾಕ್ಕೆ ಸಂಬಂಧಿಸಿದ ಪಾರ್ಟಿಗಳಿಗೂ ಅವರು ಹೋಗುವುದಿಲ್ಲ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry