ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಪಾತಿ ಜೊತೆಗೆ ಎಣ್ಣೆಗಾಯಿ ಸವಿಯಿರಿ!

Last Updated 19 ಮೇ 2017, 14:03 IST
ಅಕ್ಷರ ಗಾತ್ರ
ADVERTISEMENT

ಚಪಾತಿ ಜೊತೆಗೆ ಗುಂಡು ಬದನೆಕಾಯಿಯಲ್ಲಿ ಮಾಡಿದ ಎಣ್ಣೆಗಾಯಿ ಅಥವಾ ಎಣಗಾಯಿ ಸೇವಿಸಿದರೆ ಅದರ ರುಚಿಯೇ ಬೇರೆ!  ಎಣ್ಣೆಗಾಯಿ ಮಾಡುವ ವಿಧಾನಕ್ಕೆ ‘ಪ್ರಜಾವಾಣಿ ರೆಸಿಪಿ’ಯ ವಿಡಿಯೊ ವೀಕ್ಷಿಸಿ.

ಸಾಮಗ್ರಿಗಳು:
1. ಕೊತ್ತಂಬರಿ ಬೀಜ -            04 ಸ್ಪೂನ್
2. ಜೀರಿಗೆ -                        01 ಸ್ಪೂನ್
3. ಲವಂಗ -                        02
4. ಚಕ್ಕೆ -                            02
5. ಮೆಂತ್ಯ -                        ಸ್ವಲ್ಪ
6. ಸಾಸಿವೆ -                       ಸ್ವಲ್ಪ
7. ಬಿಳಿ ಎಳ್ಳು -                     01 ಸ್ಪೂನ್
8. ಕೊಬ್ಬರಿ -                       1/2  ಕಪ್
9. ಬ್ಯಾಡಗಿ ಮೆಣಸು -             1/2  ಕಪ್
10. ಉದ್ದಿನ ಬೇಳೆ -                01 ಸ್ಪೂನ್
11. ಕಡಲೆಬೇಳೆ --                  01 ಸ್ಪೂನ್
12. ಇಂಗು - ಚಿಟಿಕೆ
13. ತುರಿದ ತೆಂಗಿನಕಾಯಿ -     1/4 ಕಪ್
14. ಗುಂಡು ಬದನೆಕಾಯಿ -      4
ಮಾಡುವ ವಿಧಾನ: ಬಾಂಡ್ಲಿಯಲ್ಲಿ ಮೆಣಸಿನ ಕಾಯಿ ಹಾಕಿ ಹುರಿದುಕೊಂಡು ನಂತರ ಸಾಸಿವೆ, ಕಡಲೆ ಬೇಳೆ, ಉದ್ದಿನ ಬೇಳೆ, ಜೀರಿಗೆ, ಎಳ್ಳು, ಕೊತ್ತಂಬರಿ ಬೀಜ, ಚಕ್ಕೆ, ಲವಂಗ, ಇಂಗು ಎಲ್ಲ್ಲವನ್ನು ಹಾಕಿ ಹುರಿದುಕೊಳ್ಳಿ. ಇದಕ್ಕೆ ಒಣ ಕೊಬ್ಬರಿ ಹಾಕಿ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣದ ಜೊತೆ ತೆಂಗಿನ ಕಾಯಿ, ಕತ್ತರಿಸಿದ ಈರುಳ್ಳಿ, ಕೊತ್ತಂಬರಿ ಸೊಪ್ಪು ಹಾಕಿಕೊಂಡು ಚೆನ್ನಾಗಿ ಕಲಸಿ.

ಸಣ್ಣ ಗಾತ್ರದ ಗುಂಡು ಬದನೆಕಾಯಿಯನ್ನು ಸ್ಟಫ್ ಮಾಡಲು ಅನುಕೂಲವಾಗುವಂತೆ ಅರ್ಧವಷ್ಟೇ ಕತ್ತರಿಸಿ, ಈ ಮೇಲಿನ ಮಸಾಲೆಯನ್ನು ಬದನೆಕಾಯಿ ಒಳಗೆ ತುಂಬಿರಿ. ಬಾಂಡ್ಲಿಯಲ್ಲಿ ಒಗ್ಗರಣೆ ಹಾಕಿಕೊಂಡು ಸ್ಟಫ್ಡ್ ಬದನೆಕಾಯಿಯನ್ನು ಹಾಕಿರಿ. ಸ್ವಲ್ಪ  ಬೆಲ್ಲ ಹಾಕಿ, ಸ್ವಲ್ಪ ನೀರನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಎರಡು ನಿಮಿಷ ಬೇಯಿಸಿಕೊಳ್ಳಿ. ನಂತರ ಹುಣಸೇಹುಳಿ ಹಾಕಿ ಉಳಿದ ಮಸಾಲೆ ಹಾಕಿರಿ ನಂತರ ಅಲಂಕಾರಕ್ಕೆ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ಎಣ್ಣೆಗಾಯಿ ಸವಿಯಲು ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT