ಆರ್ಚರಿ ವಿಶ್ವಕಪ್‌: ಪುರುಷರ ಕಾಂಪೌಂಡ್‌ ವಿಭಾಗದಲ್ಲಿ ಚಿನ್ನ ಗೆದ್ದ ಭಾರತ

7

ಆರ್ಚರಿ ವಿಶ್ವಕಪ್‌: ಪುರುಷರ ಕಾಂಪೌಂಡ್‌ ವಿಭಾಗದಲ್ಲಿ ಚಿನ್ನ ಗೆದ್ದ ಭಾರತ

Published:
Updated:
ಆರ್ಚರಿ ವಿಶ್ವಕಪ್‌: ಪುರುಷರ ಕಾಂಪೌಂಡ್‌ ವಿಭಾಗದಲ್ಲಿ ಚಿನ್ನ ಗೆದ್ದ ಭಾರತ

ಶಾಂಘೈ: ಇಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್‌ನ ಪುರುಷರ ಕಾಂಪೌಂಡ್‌ ವಿಭಾಗದಲ್ಲಿ ಭಾರತ ಚಿನ್ನ ಗೆದ್ದಿದೆ.

ಪುರುಷರ ಕಾಂಪೌಂಡ್‌ ವಿಭಾಗದಲ್ಲಿ ಭಾರತದ ಅಭಿಷೇಕ್‌ ವರ್ಮಾ, ಚಿನ್ನ ರಾಜು ಶ್ರೀಧರ್‌, ಅಮನ್‌ಜಿತ್ ಸಿಂಗ್‌ ಇದ್ದರು. ಶನಿವಾರ ಕೊಲಂಬಿಯಾ ವಿರುದ್ಧ ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಪೈಪೋಟಿಯಲ್ಲಿ ಭಾರತ 226-221 ಪಾಯಿಂಟ್ಸ್ ಗಳಲ್ಲಿ ಗೆದ್ದಿದೆ.

ಕೊಲಂಬಿಯಾ ತಂಡದಲ್ಲಿ ಕಾಮಿಲೊ ಆಂಡ್ರೆಸ್ ಕರ್ಡೋನಾ, ಜೋಸ್ ಕಾರ್ಲೊಸ್ ಒಸ್ಪಿನಾ ಮತ್ತು ಡ್ಯಾನಿಯಲ್ ಮುನೋಜ್ ಇದ್ದರು.

ಮೊದಲ ಸೆಟ್ ನಲ್ಲಿ ಭಾರತ 58-57 ಪಾಯಿಂಟ್ ಗಳಿಸಿತ್ತು. ಮೂರನೇ ಸುತ್ತಿನಲ್ಲಿ ಕೊಲಂಬಿಯಾ ತಂಡ 52-52 ಪಾಯಿಂಟ್ಸ್  ಗಳಿಸಿದ್ದು ಪಂದ್ಯ ಟೈನಲ್ಲಿ ಕೊನೆಗೊಂಡಿದೆ.

ಮಹಿಳೆಯರ ವಿಭಾಗದ ಪಂದ್ಯದಲ್ಲಿ ಕೊರಿಯಾ, ಡೆನ್ಮಾರ್ಕ್ ಮತ್ತು ರಷ್ಯಾ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry