ಬೆಳಗಿನ ಉಪಹಾರಕ್ಕೆ ನುಚ್ಚಿನ ಉಂಡೆ ಇರಲಿ!

7

ಬೆಳಗಿನ ಉಪಹಾರಕ್ಕೆ ನುಚ್ಚಿನ ಉಂಡೆ ಇರಲಿ!

Published:
Updated:
ಬೆಳಗಿನ ಉಪಹಾರಕ್ಕೆ ನುಚ್ಚಿನ ಉಂಡೆ ಇರಲಿ!

ನೆನೆಸಿದ ತೊಗರಿ ಬೇಳೆಯ ಹಸಿ ಹಿಟ್ಟಿನಲ್ಲಿ ನುಚ್ಚಿನ ಉಂಡೆ ಮಾಡುವುದು ಬಹಳ ಸುಲಭ. ಹಬೆಯಲ್ಲಿ ಹದವಾಗಿ ಬೇಯಿಸಿದ ನುಚ್ಚಿನ ಉಂಡೆಗೆ ತುಪ್ಪ ಬೆರೆಸಿ ಸವಿದರೆ ಬೆಳಗಿನ ಉಪಹಾರ ಸಖತ್‌ ಸವಿಯಾಗಿರುತ್ತದೆ. ನೀವು ಕೂಡ ನುಚ್ಚಿನ ಉಂಡೆ ಮಾಡುವ ವಿಧಾನವನ್ನು ‘ಪ್ರಜಾವಾಣಿ ರೆಸಿಪಿ’ ನೋಡಿ ಕಲಿಯಿರಿ!

ಸಾಮಗ್ರಿಗಳು

1. ತೊಗರಿಬೇಳೆ -                       1/4 ಕಪ್

2. ಕಡಲೆ ಬೇಳೆ -                        1/4 ಕಪ್

3. ತೆಂಗಿನ ತುರಿ -                       ಸ್ವಲ್ಪ

4. ಹೆಚ್ಚಿದ ಶುಂಠಿ -                       ಸ್ವಲ್ಪ

5. ಹಸಿಮೆಣಸಿನ ಕಾಯಿ -               03

6. ಕೊತ್ತಂಬರಿ ಸೊಪ್ಪು --               ಸ್ವಲ್ಪ

7. ಇಂಗು -                                ಸ್ವಲ್ಪ

8. ಉಪ್ಪು -                                ಸ್ವಲ್ಪ

9. ಕರಿಬೇವು -                             ಸ್ವಲ್ಪ

ಮಾಡುವ ವಿಧಾನ: ತೊಗರಿ ಬೇಳೆ, ಕಡಲೆ ಬೇಳೆಗಳನ್ನು 3 ಗಂಟೆಗಳ ಕಾಲ ನೆನೆಸಿ. ನೆನೆಸಿದ ಬೇಳೆಗಳೊಂದಿಗೆ ಶುಂಠಿ, ಹಸಿಮೆಣಸಿನ ಕಾಯಿ, ಕರಿಬೇವು, ಸೇರಿಸಿ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣಕ್ಕೆ ಕೊತ್ತಂಬರಿ ಸೊಪ್ಪು, ಇಂಗು ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ ಉಂಡೆಮಾಡಿ 10 ನಿಮಿಷ ಹಬೆಯಲ್ಲಿ ಬೇಯಿಸಿ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry