ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿಯೇ ಹೆಚ್ಚು ವೈದ್ಯಕೀಯ ಸೀಟು

Last Updated 25 ಮೇ 2017, 19:30 IST
ಅಕ್ಷರ ಗಾತ್ರ
ಬೆಂಗಳೂರು: ದೇಶದಲ್ಲಿಯೇ ಅತಿ ಹೆಚ್ಚು ವೈದ್ಯಕೀಯ ಸೀಟುಗಳು (8,750) ಕರ್ನಾಟಕದಲ್ಲಿವೆ. ಮಹಾರಾಷ್ಟ್ರ (7,120) ಮತ್ತು ತಮಿಳುನಾಡು (6.660) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.
 
ಭಾರತೀಯ ವೈದ್ಯಕೀಯ ಪರಿಷತ್ (ಎಂಸಿಐ) 2017– 18ನೇ ಸಾಲಿನಲ್ಲಿ ಲಭ್ಯವಿರುವ ಎಂಬಿಬಿಎಸ್‌ ಸೀಟುಗಳ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
 
ಕರ್ನಾಟಕದಲ್ಲಿ ಸರ್ಕಾರಿ, ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳು ಸೇರಿ 56 ವೈದ್ಯಕೀಯ ಕಾಲೇಜುಗಳಿವೆ. ಬಹುತೇಕ ಕಾಲೇಜುಗಳು ಪ್ರತಿ ವರ್ಷವೂ ಪ್ರವೇಶ ಮಿತಿಯನ್ನು ಹೆಚ್ಚಳ ಮಾಡಿಕೊಳ್ಳಲು ಪ್ರಯತ್ನಿಸುತ್ತಿವೆ. 
 
350 ಸೀಟು ಹೆಚ್ಚಳ: 2017– 18ನೇ ಸಾಲಿಗೆ ರಾಜ್ಯದಲ್ಲಿ ಎಂಬಿಬಿಎಸ್‌ಗೆ 350 ಸೀಟುಗಳು ಹೆಚ್ಚಳ ಆಗಿವೆ. 
 
ಮಂಡ್ಯ, ಹಾಸನ, ಶಿವಮೊಗ್ಗ, ರಾಯಚೂರು, ಬೆಳಗಾವಿ ಮತ್ತು ಬೀದರ್‌ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಪ್ರವೇಶ ಮಿತಿಯನ್ನು 100ರಿಂದ 150 ಸೀಟುಗಳಿಗೆ ಮತ್ತು ಹುಬ್ಬಳ್ಳಿಯ ಕಿಮ್ಸ್‌ ಕಾಲೇಜಿನ ಪ್ರವೇಶ ಮಿತಿಯನ್ನು 150ರಿಂದ 200ಕ್ಕೆ ಹೆಚ್ಚಳ ಮಾಡಲು ಎಂಸಿಐ ಅನುಮತಿ ನೀಡಿದೆ. 
 
ಕಳೆದ ವರ್ಷ ಬೆಂಗಳೂರಿನ ಸೇಂಟ್ ಜಾನ್ ವೈದ್ಯಕೀಯ ಕಾಲೇಜಿನ ಪ್ರವೇಶ ಮಿತಿಯು 60ರಿಂದ 90 ಸೀಟುಗಳಿಗೆ ಹೆಚ್ಚಳವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT