ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲದಲ್ಲಿ ಮೊಳಕೆ ಕಟ್ಟಿದ ಹುರುಳಿ ಸಾರಿನ ರುಚಿ ನೋಡಿ!

Last Updated 26 ಮೇ 2017, 17:13 IST
ಅಕ್ಷರ ಗಾತ್ರ
ADVERTISEMENT

ಮಳೆಗಾಲದಲ್ಲಿ ಮೊಳಕೆ ಕಟ್ಟಿದ ಹುರುಳಿಯನ್ನು ಸೇವಿಸಿದರೆ ದೇಹವನ್ನು ಬಿಸಿಯಾಗಿಡುವುದರ ಜತೆಗೆ ಸಾಕಷ್ಟು ಖನಿಜಾಂಶಗಳು ದೊರೆಯುತ್ತವೆ. ಮೊಳಕೆ ಕಟ್ಟಿದ ಹುರುಳಿ ಸಾರನ್ನು ಮಾಡುವುದಕ್ಕೆ ಬೇಕಾಗುವ ಸಾಮಗ್ರಿ ಮತ್ತು   ವಿಧಾನವನ್ನು ಇಲ್ಲಿ  ನೀಡಲಾಗಿದೆ.

ಸಾಮಗ್ರಿಗಳು

1. ಮೊಳಕೆ ಕಟ್ಟಿದ ಹುರುಳಿ -                 ಒಂದು ಕಪ್
2. ಕೆಂಡದ ಮೇಲೆ ಸುಟ್ಟ ಈರುಳ್ಳಿ -          ಒಂದು
3. ಉಪ್ಪು -                                      ಸ್ವಲ್ಪ
4. ಟೊಮ್ಯಾಟೊ ಹೆಚ್ಚಿದ್ದು -                    02
5. ಕಪ್ಪು ಬದನೆಕಾಯಿ -                        02
6. ಆಲೂಗಡ್ಡೆ -                                  02
7. ಎಣ್ಣೆ -                                         ಸ್ವಲ್ಪ

ರುಬ್ಬುವುದಕ್ಕೆ
1. ತೆಂಗಿನ ತುರಿ -             1 1/2 ಕಪ್
2. ಅರಿಶಿನ -                    1/2  ಚಮಚ
3. ಧನಿಯಾ ಪುಡಿ -            02 ಚಮಚ
4. ಖಾರದ ಪುಡಿ -              02 ಚಮಚ
5. ಲವಂಗ -                     04
6. ಚಕ್ಕೆ -                         02
7. ಇಡಿಯಾಗಿ ಸುಟ್ಟ ಈರುಳ್ಳಿ - 01
8. ಗಸಗಸೆ -                       ಒಂದು ಚಮಚ
9. ಶುಂಠಿ ಬೆಳ್ಳುಳ್ಳಿ ಪೇಸ್ಟ್ -      ಒಂದು ಚಮಚ

ಒಗ್ಗರಣೆಗೆ
ಸಾಸಿವೆ -                           ಸ್ವಲ್ಪ
ಈರುಳ್ಳಿ -                            01
ಒಣಮೆಣಸಿನ ಕಾಯಿ -            02
ಕರಿಬೇವು -                         ಸ್ವಲ್ಪ
ಎಣ್ಣೆ –                               ಎರಡು ಸ್ಪೂನ್
ಮಾಡುವ ವಿಧಾನ: ರುಬ್ಬುವುದಕ್ಕೆ ಬೇಕಾದ ಎಲ್ಲಾ ಸಾಮಾಗ್ರಿಗಳನ್ನು ಒಟ್ಟಿಗೆ ಸೇರಿಸಿ, ಮಿಕ್ಸಿಯಲ್ಲಿ ರುಬ್ಬಿಕೊಳ್ಳೀ. ರುಬ್ಬಿದ ಮಿಶ್ರಣವನ್ನು ಪಕ್ಕಕ್ಕಿಡಿ. ಎರಡು ಸ್ಪೂನ್ ಎಣ್ಣೆಯನ್ನು ಕುಕ್ಕರ್ ಗೆ ಹಾಕಿ ಬಿಸಿ ಮಾಡಿಕೊಳ್ಳಿ. ಸಾಸಿವೆ, ಒಣ ಮೆಣಸಿನ ಕಾಯಿ, ಕರಿಬೇವು ಹಾಕಿ ಒಗ್ಗರಣೆ ಕೊಡಿ. ಜೊತೆಗೆ ಉದ್ದಕ್ಕೆ ಕತ್ತರಿಸಿದ ಈರುಳ್ಳಿಯನ್ನೂ ಹಾಕಿ ಸ್ವಲ್ಪ ಹೊತ್ತು ಬಾಡಿಸಿ.

ಕತ್ತರಿಸಿದ ಟೊಮ್ಯಾಟೊ, ಬದನೆಕಾಯಿ, ಆಲೂಗಡ್ಡೆ ಗಳನ್ನು ಹಾಕಿ ಸ್ವಲ್ಪ ಹೊತ್ತು ಬಾಡಿಸುತ್ತಿರಿ. ರುಬ್ಬಿದ ಮಿಶ್ರಣವನ್ನು ಇದಕ್ಕೆ ಸೇರಿಸಿ. ಜೊತೆಗೆ, ಮೊಳಕೆ ಕಟ್ಟಿದ ಹುರುಳಿ ಕಾಳನ್ನೂ ಹಾಕಿ. ರುಚಿಗೆ ತಕ್ಕಷ್ಟು ಉಪ್ಪನ್ನೂ ಹಾಕಿ  2-3 ಕಪ್ ನೀರು ಸೇರಿಸಿ ಚೆನ್ನಾಗಿ ಒಮ್ಮೆ ಕಲಕಿ. ಕುಕ್ಕರ್ ಎರಡು ಸೀಟಿ ಕೂಗುವಷ್ಟು ಬೇಯಿಸಿದರೆ, ಮೊಳಕೆ ಕಟ್ಟಿದ ಹುರುಳಿ ಸಾರು ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT