ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು

Last Updated 28 ಮೇ 2017, 20:06 IST
ಅಕ್ಷರ ಗಾತ್ರ

ನಗೆಯ ಹಾಯಿದೋಣಿ
ಲೇ:
ಎಂ. ತಿಮ್ಮಯ್ಯ
ಪ್ರ: ಐಬಿಎಚ್‌ ಪ್ರಕಾಶನ, ನಂ. 77, 2ನೇ ಮುಖ್ಯರಸ್ತೆ, ರಾಮರಾವ್‌ ಲೇಔಟ್, ಬಿಎಸ್‌ಕೆ 3ನೇ ಸ್ಟೇಜ್, ಬೆಂಗಳೂರು– 85

**

ಲೇಖಕ ಎಂ. ತಿಮ್ಮಯ್ಯ, ಬೆಂಗಳೂರಿನ ಕಾರ್ಖಾನೆಗಳಲ್ಲಿನ ಕನ್ನಡ ಸಂಘಟನೆಗಳನ್ನು ಒಗ್ಗೂಡಿಸುವ ಮೂಲಕ ಕನ್ನಡ ಚಳವಳಿಯ ಭಾಗವಾಗಿ ಗುರ್ತಿಸಿಕೊಂಡವರು. ಅವರ ಸಮೃದ್ಧ ಓದು ಹಾಗೂ ಜೀವನಾನುಭವದ ಅಭಿವ್ಯಕ್ತಿಯಂತೆ ‘ನಗೆಯ ಹಾಯಿದೋಣಿ’ ಕೃತಿಯನ್ನು ನೋಡಬಹುದು.

ಶೀರ್ಷಿಕೆಗೆ ಅಡಿ ಟಿಪ್ಪಣಿಯಾಗಿ ‘ಹಾಸ್ಯಲೇಪಿತ ಬರಹಗಳು’ ಎಂದು ತಿಮ್ಮಯ್ಯನವರು ತಮ್ಮ ಪುಸ್ತಕದ ಸ್ವರೂಪವನ್ನು ಗುರ್ತಿಸಿದ್ದಾರೆ. ಆದರೆ, ಓದುಗರನ್ನು ನಗಿಸುವುದಷ್ಟೇ ಈ ಬರಹಗಳ ಉದ್ದೇಶವಾಗಿಲ್ಲ. ಪ್ರೌಢ ವ್ಯಕ್ತಿಯೊಬ್ಬ ತನ್ನ ತಿಳಿವಳಿಕೆಯನ್ನು ಅತ್ಯಂತ ನಮ್ರವಾಗಿ ಸಹೃದಯರೊಂದಿಗೆ ಹಂಚಿಕೊಳ್ಳುವ ಮಾದರಿ ಇಲ್ಲಿನದು. ಈ ಪ್ರಕ್ರಿಯೆಯಲ್ಲಿ ಅಲ್ಲಲ್ಲಿ ನಗೆಮಿಂಚುಗಳು ಸುಳಿಯುತ್ತವೆ, ಮನಸ್ಸನ್ನು ಮುದಗೊಳಿಸುತ್ತವೆ. ಆ ಕಾರಣದಿಂದಾಗಿಯೇ ಈ ಬರಹಗಳನ್ನು ‘ಪ್ರೇರಣೆ ಲೇಖನಮಾಲೆ’ ಎಂದು ಜರಗನಹಳ್ಳಿ ಶಿವಶಂಕರ್ ತಮ್ಮ ಮುನ್ನುಡಿಯಲ್ಲಿ ಗುರ್ತಿಸಿರುವುದು ಸರಿಯಾಗಿದೆ.

ತಿಮ್ಮಯ್ಯನವರ ಬರಹಗಳಲ್ಲಿ ಷೇಕ್ಸ್‌ಪಿಯರ್‌, ಬರ್ನಾಡ್‌ ಷಾ, ಬುದ್ಧ, ಕುವೆಂಪು, ಬೀಚಿ, ಕೈಲಾಸಂ, ಗೊರೂರು, ವಚನಕಾರರು, ಗಾಂಧಿ – ಹೀಗೆ ಅನೇಕ ಮಂದಿ ಬಂದುಹೋಗುತ್ತಾರೆ. ಈ ಜ್ಞಾಪಕ ಚಿತ್ರಶಾಲೆ ‘ಹಾಯಿದೋಣಿ’ ಬರಹಗಳ ರುಚಿಯನ್ನು ಹೆಚ್ಚಿಸಿದೆ. ನಗೆಪ್ರಸಂಗವೊಂದನ್ನು ಹಂಚಿಕೊಳ್ಳುವ ನಡುವೆಯೇ ಲೇಖಕರು ತಮ್ಮ ಅನಿಸಿಕೆಯನ್ನೂ ಸೇರಿಸುವ ಮೂಲಕ ಓದುಗರೊಂದಿಗೆ ನೇರ ಸಂವಹನ ಸಾಧಿಸಲು ಪ್ರಯತ್ನಿಸುತ್ತಾರೆ. ಅಭಿರುಚಿಯ ದೃಷ್ಟಿಯಿಂದ ವಿಶಿಷ್ಟವಾದ ಕೃತಿಯಿದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT