ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಪ್ರಯಾಣಿಕರ ಸಂಖ್ಯೆ ಹೆಚ್ಚಳ

Last Updated 27 ಮೇ 2017, 19:30 IST
ಅಕ್ಷರ ಗಾತ್ರ
ನವದೆಹಲಿ: ಹಿಂದಿನ ವರ್ಷಕ್ಕೆ  (2015–16) ಹೋಲಿಸಿದರೆ 2016–17ರಲ್ಲಿ ರೈಲುಗಳಲ್ಲಿ ಪ್ರಯಾಣಿಸಿದವರ ಸಂಖ್ಯೆಯಲ್ಲಿ ಶೇ 1ರಷ್ಟು ಹೆಚ್ಚಳವಾಗಿದೆ. 
 2012ರಿಂದ  ಸತತವಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖ ಉಂಟಾಗಿ ಒತ್ತಡಕ್ಕೆ ಸಿಲುಕಿದ್ದ ರೈಲ್ವೆ, ಈ ಅಂಕಿ ಅಂಶದಿಂದಾಗಿ ನಿಟ್ಟುಸಿರು  ಬಿಡುವಂತಾಗಿದೆ.
 
‘ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿವುದಕ್ಕಾಗಿ ಕಳೆದ ಹಣಕಾಸು ವರ್ಷದಲ್ಲಿ ಕೈಗೊಂಡ ಹಲವು ಕ್ರಮಗಳು ಫಲ ನೀಡಿವೆ’ ಎಂದು ರೈಲು ಮಂಡಳಿ ಸದಸ್ಯ (ಸಂಚಾರ) ಮೊಹಮ್ಮದ್‌ ಜಮ್‌ಶದ್‌ ಹೇಳಿದ್ದಾರೆ.
****
ರೈಲ್ವೆ ಕ್ಷೇತ್ರದಲ್ಲಿ ಹೂಡಿಕೆ
₹1.11 ಲಕ್ಷ ಕೋಟಿ- 2016–17ರಲ್ಲಿ ಹೂಡಿರುವ ಬಂಡವಾಳ
₹1.31 ಲಕ್ಷ ಕೋಟಿ  - ಪ್ರಸಕ್ತ ಆರ್ಥಿಕ (2017–18) ವರ್ಷದ ಹೂಡಿಕೆ ಮೊತ್ತ
₹3.75 ಲಕ್ಷ ಕೋಟಿ - ಕಳೆದ ಮೂರು ವರ್ಷಗಳಲ್ಲಿ ಹಾಕಿರುವ ಬಂಡವಾಳ
₹8.5 ಲಕ್ಷ ಕೋಟಿ- ಮುಂದಿನ ಐದು ವರ್ಷಗಳಲ್ಲಿ ಮಾಡಲಿರುವ ಹೂಡಿಕೆ ಮೊತ್ತ
****
ಹೆಚ್ಚಳಕ್ಕೆ ಕಾರಣಗಳೇನು?
l 87 ಹೊಸ ರೈಲು ಸೇವೆಗಳ ಆರಂಭ
l ರೈಲುಗಳ ಸಂಚಾರ ವಿಸ್ತರಣೆ ಮತ್ತು ಓಡಾಟದ ಪ್ರಮಾಣದ ಹೆಚ್ಚಳ
l ಈಗಿರುವ ರೈಲುಗಳಿಗೆ ಹೆಚ್ಚುವರಿಯಾಗಿ 586 ಬೋಗಿಗಳ ಅಳವಡಿಕೆ. ಇದರಿಂದ ಆಸನ/ಬರ್ತ್‌ಗಳ ಸಂಖ್ಯೆಯಲ್ಲಿ 43,420 ಹೆಚ್ಚಳ
l ರಜಾ ಕಾಲದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆಗಳಿಸಲು 31,438 ವಿಶೇಷ ಟ್ರಿಪ್‌ಗಳು
l 350 ರೈಲುಗಳ ಸರಾಸರಿ ವೇಗ ಹೆಚ್ಚಳ
l 104 ರೈಲುಗಳನ್ನು ‘ಸೂಪರ್‌ಫಾಸ್ಟ್‌ ರೈಲು’ಗಳಾಗಿ ಮಾರ್ಪಾಟು
****
822.1 ಕೋಟಿ- 2016–17ರಲ್ಲಿ ರೈಲುಗಳಲ್ಲಿ ಪ್ರಯಾಣಿಸಿದವರ ಸಂಖ್ಯೆ
15.1 ಕೋಟಿ- 2015–16ರಲ್ಲಿ ರೈಲು ಪ್ರಯಾಣಿಕರ ಸಂಖ್ಯೆ8
****
ಗಳಿಕೆಯಲ್ಲೂ ಹೆಚ್ಚಳ
₹47,400  ಸಾವಿರ ಕೋಟಿ- 2016–17ರಲ್ಲಿ ಪ್ರಯಾಣಿಕರ ಟಿಕೆಟ್‌ನಿಂದ ಬಂದ ಆದಾಯ
₹45,400  ಸಾವಿರ ಕೋಟಿ - 2015–16ರಲ್ಲಿ ಟಿಕೆಟ್‌ನಿಂದ ಬಂದಿದ್ದ  ಆದಾಯ
₹51  ಸಾವಿರ ಕೋಟಿ- 2017–18ರಲ್ಲಿ ಪ್ರಯಾಣಿಕ ವಿಭಾಗದಲ್ಲಿ ಸಂಗ್ರಹಿಸಲು ಹಾಕಿಕೊಳ್ಳಲಾದ ಗುರಿಯ ಮೊತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT