4

ಷೇರುಪೇಟೆಯಲ್ಲಿ ದಾಖಲೆಗಳ ಅಬ್ಬರ...!

ಕೆ. ಜಿ. ಕೃಪಾಲ್
Published:
Updated:

ಕೇಂದ್ರ ಸರ್ಕಾರದ ಮೂರು ವರ್ಷದ  ಸಂಭ್ರಮಾಚರಣೆಯಂದು ಷೇರುಪೇಟೆಯ ಹೆಗ್ಗುರುತಾದ ಸಂವೇದಿ ಸೂಚ್ಯಂಕ ಶುಕ್ರವಾರ ಮಧ್ಯಂತರದಲ್ಲಿ 31,074ಅಂಶಗಳಿಗೆ  ತಲುಪಿ ಸರ್ವಕಾಲೀನ ದಾಖಲೆ ನಿರ್ಮಿಸಿತು.

ಮಂಗಳವಾರ ಮತ್ತು ಬುಧವಾರ  ಸೂಚ್ಯಂಕ ಮತ್ತು ಉಪ ಸೂಚ್ಯಂಕ ಚಲನೆ ಕಂಡವರಿಗೆ ಗುರುವಾರ ಮತ್ತು ಶುಕ್ರವಾರದ ಏರಿಕೆ ವಿಸ್ಮಯಕಾರಿಯಾಗಿ ಗೋಚರಿಸಬಹುದು.  

ಗಡಿಯಲ್ಲಿಯ ತ್ವೇಷಮಯ ವಾತಾವರಣದಿಂದ ಪೇಟೆಯಲ್ಲಿ ನೀರಸ ಚಟುವಟಿಕೆ ಕಂಡರೂ ಗುರುವಾರ ಮತ್ತು ಶುಕ್ರವಾರ ಮೂಲಾಧಾರಿತ ಪೇಟೆ ಅನಿರೀಕ್ಷಿತ ಏರಿಕೆ ಕಂಡಿತು. ಪೇಟೆ ಆರಂಭದ ದಿನ ಪ್ರದರ್ಶಿಸಿದ ವಹಿವಾಟಿನ ಗಾತ್ರ ₹೫.೦೨ ಲಕ್ಷ ಕೋಟಿಯಾದರೆ, ಮಂಗಳವಾರದ ನೀರಸ ವಾತಾವರಣದಲ್ಲಿ ₹8.28ಲಕ್ಷ ಕೋಟಿ ವಹಿವಾಟು ಕಂಡಿದೆ. ಬುಧವಾರ ₹9.17 ಲಕ್ಷ ಕೋಟಿ ಹಾಗೂ  ಚುಕ್ತಾ ಚಕ್ರದ ದಿನ ವಾದ ಗುರುವಾರ ದಾಖಲೆಯ ₹13.01 ಲಕ್ಷಕೋಟಿ ವಹಿವಾಟು ನಡೆದಿದೆ.   ಈ ರೀತಿಯ ಆರೋಹಣದ ಅಂಶಗಳು ಪೇಟೆಯಲ್ಲಿ ನಡೆಯುತ್ತಿರುವ ಊಹಿಕೆ ವ್ಯವಹಾರದ ಗಾತ್ರಕ್ಕೆ ಹಿಡಿದ ಕನ್ನಡಿಯಾಗಿದೆ. 

ಶುಕ್ರವಾರ ಪೇಟೆಯ ಸಂವೇದಿ ಸೂಚ್ಯಂಕ ಒಂದು ಹಂತದಲ್ಲಿ 370 ಕ್ಕೂ ಹೆಚ್ಚಿನ ಏರಿಕೆ ಕಂಡು ಅಂತ್ಯದಲ್ಲಿ 31,028 ಅಂಶಗಳಲ್ಲಿ  ದಾಖಲೆಯ ಅಂತ್ಯ ಕಂಡಿತು. ಆದರೂ ಸಹ , ಮೂಲಾಧಾರಿತ ಪೇಟೆಯ ಹೊಸ ಚಕ್ರದ ಆರಂಭದ ದಿನದ ವಹಿವಾಟಿನ ಗಾತ್ರ ಕೇವಲ ₹3.72 ಲಕ್ಷ ಕೋಟಿಯಷ್ಟಿದೆ. ಮೂರು ವರ್ಷಗಳ ಹಿಂದೆ ಅಂದರೆ 2014ರ ಮೇ  26 ರಂದು  ಕೇಂದ್ರ ಸರ್ಕಾರದ ಆರಂಭದ ದಿನ ಸಂವೇದಿ ಸೂಚ್ಯಂಕಸುಮಾರು 720 ಅಂಶ ಏರಿಳಿತ ಪ್ರದರ್ಶಿಸಿ ತನ್ನೊಂದಿಗೆ ಇತರೆ ವಲಾಯಧಾರಿತ ಉಪಸೂಚ್ಯಂಕ ಮಿಂಚುವಂತೆ ಮಾಡಿತ್ತು.

ಪೇಟೆಯೊಳಗೆ ಹರಿದುಬರುತ್ತಿರುವ ಹಣದ ಹೊಳೆಯೇ ಈ ವಾತಾವರಣಕ್ಕೆ  ಕಾರಣ. ಷೇರುಗಳ ದರಗಳು ಏರಿಕೆಕಾಣಲು ಕಂಪೆನಿಗಳ ಬ್ರಾಂಡ್ ವ್ಯಾಲ್ಯೂ ಮುಖ್ಯ ಎಂಬುದಕ್ಕೆ ಈ ವಾರ ರೇಮಂಡ್ ಲಿಮಿಟೆಡ್ ಬೆಳವಣಿಗೆ ನಿದರ್ಶನ. ಕಾರ್ಪೊರೇಟ್ ನೀತಿ ಪಾಲನೆಯಲ್ಲಿ ರೇಮಂಡ್‌ ಕಂಪೆನಿ ಲೋಪವೆಸಗಿದೆ ಎಂಬ ಸುದ್ದಿಯಿಂದ ಆ ಕಂಪೆನಿಯ ಷೇರಿನ ಬೆಲೆ ₹740ರ ಸಮೀಪದಿಂದ ₹598 ಕ್ಕೆ ಕುಸಿಯುವಂತಾಯಿತು. ಆದರೆ ಹೊಸ ಚುಕ್ತಾದಿನ ಶುಕ್ರವಾರ ಷೇರಿನ ಬೆಲೆ ಪುಟಿದೆದ್ದು ₹723ರಲ್ಲಿ ಕೊನೆಗೊಂಡಿದೆ.  

ಇಷ್ಟು ಹರಿತವಾದ ಕುಸಿತ ತ್ವರಿತವಾಗಿ ಮೇಲೇರಲು ಕಂಪೆನಿಯ ಘನತೆ, ಗುಣಮಟ್ಟ, ಹೂಡಿಕೆದಾರರ ನಂಬಿಕೆ ಮತ್ತು ಬ್ರಾಂಡ್ ವ್ಯಾಲ್ಯೂ ಕಾರಣವಾಗಿದೆ. ಈ ರೀತಿಯ ಮಿಂಚಿನ ಅವಕಾಶ ಉಪಯೋಗಿಸಿಕೊಳ್ಳುವ ಕೌಶಲ ಬೆಳಸಿಕೊಳ್ಳುವುದು ಅತ್ಯವಶ್ಯಕವಾಗಿದೆ.

ಜಿಂದಾಲ್ ಸ್ಟಿಲ್ ಆ್ಯಂಡ್ ಪವರ್ ಲಿಮಿಟೆಡ್ ತನ್ನ ಫಲಿತಾಂಶ ಪ್ರಕಟಿಸಿದಾಗ ನಿರೀಕ್ಷಿತ ಮಟ್ಟದಲ್ಲಿದೆ ಎಂಬ ಕಾರಣಕ್ಕಾಗಿ ಸ್ವಲ್ಪ ಏರಿಕೆ ಕಂಡಿತು. ಆದರೆ,ಕಲ್ಲಿದ್ದಲು ಹಗರಣದಲ್ಲಿ ಸಿಬಿಐ  ಕಂಪೆನಿಯ ಪ್ರವರ್ತಕರ ವಿರುದ್ಧ  ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್‌) ಸಲ್ಲಿಸಿದ ಸುದ್ಧಿಯಿಂದ ಷೇರಿನ ಬೆಲೆ ₹103ರವರೆಗೂ ಕುಸಿಯಿತು.  ಆದರೆ ಗುರುವಾರ ಮತ್ತು ಶುಕ್ರವಾರ ಷೇರಿನ ಬೆಲೆ ಪುಟಿದೆದ್ದು ₹124ರ ಸಮೀಪ ಕೊನೆಗೊಂಡಿದೆ.

ವೋಲ್ಟಾಸ್ ಲಿಮಿಟೆಡ್ ಫಲಿತಾಂಶ ಪ್ರಕಟಣೆಗೆ ಮುನ್ನಾ ದಿನ ಕಂಪೆನಿಯ ಫಲಿತಾಂಶ ಪ್ರೋತ್ಸಾಹದಾಯಕವಾಗಿರಲಾರದೆಂಬ ಕಾರಣಕ್ಕೆ ಷೇರಿನ ಬೆಲೆ ₹403ರ ಸಮೀಪಕ್ಕೆ ಕುಸಿಯಿತು. ಆದರೆ ಫಲಿತಾಂಶ ಉತ್ತಮವಾಗಿದೆ ಎಂಬ ಕಾರಣಕ್ಕಾಗಿ ಶುಕ್ರವಾರ ಷೇರಿನ ಬೆಲೆ ₹501ರವರೆಗೂ ಏರಿಕೆ ಕಂಡು ₹498ರ ಸಮೀಪ ವಾರಾಂತ್ಯ ಕಂಡಿತು.

ಷೇರುಪೇಟೆಯಲ್ಲಿ ಬರಬಹುದಾದ ಹೆಚ್ಚಿನ ಪ್ರಭಾವಿ ಅಂಶ ಅಲ್ಪಾಯುಯಾಗಿರುತ್ತವೆ. ಇಂದು ಒಂದು ಕಾರಣಕ್ಕೆ ಇಳಿಕೆ ಕಂಡರೆ ನಾಳೆ ಮತ್ತೊಂದು ಕಾರಣಕ್ಕೆ ಬದಲಾವಣೆ ಕಾಣಬಹುದು ಎಂಬುದನ್ನು ಈ ವಾರ ಷೇರುಪೇಟೆ ಪ್ರದರ್ಶಿಸಿದ ರೀತಿಯಿಂದ ತಿಳಿಯುತ್ತದೆ.

ಈಗಿನ ದಿನಗಳಲ್ಲಿ ಕಂಪೆನಿಗಳ ಸಾಧನೆಗಿಂತ ಇತರೆ ಅಂಶಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ವಿಶೇಷವಾಗಿ ಮೂಲಾಧಾರಿತ ಪೇಟೆಯ ಪರಿಸ್ಥಿತಿ  ಮತ್ತು ಅಲ್ಲಿ ಶೂನ್ಯ ಮಾರಾಟಗಾರರ ಸ್ಥಿತಿಯನ್ನು ಆಧರಿಸಿ  ಪೇಟೆ  ವಾರದ ಏರಿಳಿತ ಪುಷ್ಟೀಕರಿಸುತ್ತದೆ.ಒಟ್ಟಾರೆ  ಈ ವಾರದಲ್ಲಿ ಸಂವೇದಿ ಸೂಚ್ಯಂಕ 563.29 ಅಂಶ ಏರಿಕೆ ಕಂಡರೆ ಮಧ್ಯಮ ಶ್ರೇಣಿ ಸೂಚ್ಯಂಕ 124  ಹಾಗೂ ಕೆಳ ಮಧ್ಯಮ ಶ್ರೇಣಿ ಸೂಚ್ಯಂಕ 140 ಅಂಶ ಇಳಿಕೆಯಿಂದ ವಿಭಿನ್ನತೆ ಪ್ರದರ್ಶಿಸಿವೆ.

ವಿದೇಶಿ ವಿತ್ತೀಯ ಸಂಸ್ಥೆಗಳು ₹324 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರೆ ಸ್ವದೇಶಿ ವಿತ್ತೀಯ ಸಂಸ್ಥೆಗಳು ₹2,584 ಕೋಟಿ ಮೌಲ್ಯದ ಷೇರು ಖರೀದಿಸಿ ಸೂಚ್ಯಂಕಗಳ ಜಿಗಿತಕ್ಕೆ ಕಾರಣವಾಗಿವೆ.  ಪೇಟೆಯ ಬಂಡವಾಳೀಕರಣ ಮೌಲ್ಯ ₹125.63 ಲಕ್ಷ ಕೋಟಿಗಳಲ್ಲಿ ಸ್ಥಿರತೆ ಕಂಡಿತ್ತು.

ಹೊಸ ಷೇರು: ಇತ್ತೀಚಿಗೆ ಪಿಎಸ್‌ಪಿ ಪ್ರಾಜೆಕ್ಟ್ಸ್ ಲಿಮಿಟೆಡ್‌ ಪ್ರತಿ ಷೇರಿಗೆ ₹210ರಂತೆ ವಿತರಿಸದ ಆರಂಭಿಕ ಷೇರು ಸೋಮವಾರ ಬಾಂಬೆ ಷೇರು ವಿನಿಮಯ ಕೇಂದ್ರದ ‘ಟಿ’ ವಿಭಾಗದಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿವೆ.

ಬೋನಸ್ ಷೇರು: 1:1ರ ಅನುಪಾತದ ಬೋನಸ್ ಷೇರು ಪ್ರಕಟಿಸಿದ ಕಂಪೆನಿ: ಪಿ ಸಿ ಜ್ಯುವೆಲ್ಲರ್ಸ್, ಮನ್ ಅಲ್ಯೂಮಿನಿಯಂ, ಸನ್ವಾರಿಯಾ ಆಗ್ರೋ,  ಮುಂಜಾಲ್ ಆಟೋ.

1:2 ಅನುಪಾತದ ಬೋನಸ್ ಷೇರು: ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊ ರೇಷನ್ (ನಿಗದಿತ ದಿನ ಜುಲೈ 12), ಮಹಿಂದ್ರಾ ಹಾಲಿಡೇಸ್ ಅಂಡ್ ರಿಸಾರ್ಟ್ಸ್ (ಜೂನ್ 11)

ಮುಖಬೆಲೆ ಸೀಳಿಕೆ: ದ್ವಾರಿಕೇಶ್ ಶುಗರ್ ಇಂಡಸ್ಟ್ರೀಸ್ ಕಂಪೆನಿಯು ಜೂನ್ 2 ರಂದು ಷೇರಿನ ಮುಖಬೆಲೆ ಸೀಳಿಕೆ ಪರಿಶೀಲಿಸಲಿದೆ.

**

ವಾರದ ವಿಶೇಷ: ಅನಿರೀಕ್ಷಿತ ತಿರುವುಗಳ ಸುಳಿ

ಷೇರುಪೇಟೆಯಲ್ಲಿ  ಷೇರಿನ ಬೆಲೆಗಳು ಪೂರ್ವ ನಿಯೋಜಿತ ರೀತಿಯಲ್ಲಿ ಸಾಗದೆ ಅನಿರೀಕ್ಷಿತ ತಿರುವುಗಳಲ್ಲಿ ಸಾಗಿ ಕೆಲವರಿಗೆ ಅಚ್ಚರಿಮೂಡಿಸಿದರೆ ಮತ್ತೆ ಕೆಲವರಿಗೆ ಅಗಾಧ ಹಾನಿ ಮಾಡುತ್ತವೆ. ಹೂಡಿಕೆದಾರರು ಮುಖ್ಯವಾಗಿ ತಮ್ಮ ಬಂಡವಾಳವನ್ನು ಸುರಕ್ಷತೆಯಾಗಿ ಇರಿಸುವುವ ಜತೆ ಬೆಳವಣಿಗೆ ಕಾಣುವ ಧ್ಯೇಯದಿಂದ ಚಟುವಟಿಕೆ ನಡೆಸುವುದು ಸೂಕ್ತ.ಇಲ್ಲವಾದರೆ ಬಂಡವಾಳ ನಶಿಸುವ ವೇಗ ಕಲ್ಪನಾತೀತ. ದುಡುಕದೆ ಸೂಕ್ತ ಸಮಯದ ನಿರ್ಧಾರ ಅಗತ್ಯ ಎಂಬುದಕ್ಕೆ ರೇಮಂಡ್ ಲಿಮಿಟೆಡ್, ವೋಲ್ಟಾಸ್, ಜಿಂದಾಲ್ ಸ್ಟಿಲ್ ಆ್ಯಂಡ್ ಪವರ್ ಪ್ರದರ್ಶಿಸಿದ ಏರಿಳಿತಗಳೇ ಸಾಕ್ಷಿ.

ಪೇಟೆಯ ತಕ್ಷಣದ ಪ್ರತಿಕ್ರಿಯೆಗಳು ತೀಕ್ಷ್ಣವಾಗಿದ್ದು, ಆ ಸಂದರ್ಭದಲ್ಲಿ ತಕ್ಷಣದ ನಿರ್ಧಾರ ಅಪಾಯ.  ಪ್ರತಿ  ಒಂದು ಷೇರಿಗೆ ಎರಡು ಷೇರಿನಂತೆ ಬೋನಸ್ ಷೇರು ಪ್ರಕಟಿಸಿದ ಬಯೋಕಾನ್ ಷೇರಿನ ಬೆಲೆ ₹1,180  ರವರೆಗೂ ಏರಿಕೆ ಕಂಡಿದ್ದು ನಂತರ ಈ ವಾರ ₹885 ರವರೆಗೂ ಕುಸಿದು ನಂತರ ₹940 ರಲ್ಲಿ ವಾರಾಂತ್ಯ ಕಂಡಿದೆ.

ಮುಂದಿನ ತಿಂಗಳು ವಿತರಿಸಲಿರುವ ಬೋನಸ್ ಷೇರುಗಳ ಬಗ್ಗೆ  ಅಂಚೆ ಮತದಾನದ ಮೂಲಕ ಷೇರುದಾರರ ಅಭಿಪ್ರಾಯ ಹೊರಬೀಳಲಿರುವ ಕಾರಣ ಚುರುಕಾಗುವ ಸಾಧ್ಯತೆ ಇದೆ. ಆದರೆ ಷೇರಿನ ಬೆಲೆ ಮಾತ್ರ ಬೋನಸ್ ಷೇರು ಘೋಷಣೆ ನಂತರ ತೀವ್ರ ಕುಸಿತ ಕಂಡಿದೆ.

ಹಾಗೆಯೇ1:1ರ ಅನುಪಾತದ ಬೋನಸ್ ಷೇರು ಪ್ರಕಟಿಸಿರುವ ಪೆಟ್ರೋನೆಟ್ ಎಲ್‌ಎನ್‌ಜಿ ಷೇರಿನ ಬೆಲೆ ಒಂದೇ ವಾರದಲ್ಲಿ ₹458 ರಿಂದ ಕುಸಿದು  ನಂತರ ₹443ರ ಬಳಿ ಜಿಗಿತ ಕಂಡಿದೆ. ಶುಕ್ರವಾರ ಸಾರ್ವಜನಿಕ ತೈಲ ಮಾರಾಟ ಕಂಪೆನಿ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ 1:2 ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ ಎಂದ ಕಾರಣ ದಿನದ ಕನಿಷ್ಠ ಬೆಲೆ ₹469 ರಿಂದ  ₹570 ರ ಸಮೀಪದವರೆಗೂ ಏಕ ಮುಖವಾಗಿ ಏರಿಕೆ ಕಂಡಿದೆ.

ಕಂಪೆನಿಯು ಪ್ರಕಟಿಸಿದ ₹1.10ರ ಅಂತಿಮ ಲಾಭಾಂಶ ಆಕರ್ಷಣಿಯವಲ್ಲದಿದ್ದರೂ ಬೋನಸ್ ಎಂಬ ಕಾರಣಕ್ಕಾಗಿ ಹೆಚ್ಚಿನ ಏರಿಕೆ ಕಂಡಿದೆ.  ಮುಂದಿನ ದಿನಗಳಲ್ಲಿ ಬಯೋಕಾನ್, ಪೆಟ್ರೋನೆಟ್ ಎಲ್ಎನ್‌ಜಿಗಳಂತೆ ಕುಸಿತ ಕಾಣಬಹುದೇ ಕಾಡು ನೋಡೋಣ.

ಈ ರೀತಿಯ ಏರಿಳಿತಗಳು ಕೇವಲ ಹೊರಗಿನ ಕಾರಣಗಳಾಗಿದ್ದು ಆಂತರಿಕ ಸಾಧನೆ, ಬೆಳವಣಿಗೆಗಳಿಗೆ ಸಂಬಂಧವಿಲ್ಲವಾಗಿದೆ. ಚಟುವಟಿಕೆಯನ್ನು, ಪೇಟೆಯ ಸೂಚ್ಯಂಕಗಳು ಗರಿಷ್ಠದಲ್ಲಿರುವಾಗ ಹೆಚ್ಚಿನ ಎಚ್ಚರಿಕೆಯ ನಿರ್ಧಾರದಿಂದ ನಡೆಸುವುದು ಉತ್ತಮ.

**

ಲಾಭಾಂಶ ವಿತರಣೆ

ಹೆಚ್ಚು ಲಾಭಾಂಶ  ವಿತರಿಸಲಿರುವ ಕಂಪೆನಿಗಳು:  ಬಾಷ್ ಪ್ರತಿ ಷೇರಿಗೆ ₹90,  ಹಾಕಿನ್ಸ್ ಕುಕ್ಕರ್ಸ್ ₹70, ಟಿವಿಎಸ್ ಶ್ರೀಚಕ್ರ  ₹50.70,  ಲಕ್ಷ್ಮಿ ಮೆಷಿನ್ ವರ್ಕ್ಸ್  ₹35, ನ್ಯಾಷನಲ್ ಪೆರಾಕ್ಸಿಡ್  ₹34, ಪೇಜ್ ಇಂಡಸ್ಟ್ರೀಸ್ ₹26, ಕ್ಲಾರಿಯಂಟ್ ಮತ್ತು ಎಂಪೈರ್ ಇಂಡಸ್ಟ್ರೀಸ್  ₹25, ಬ್ರಿಟಾನಿಯ ಇಂಡಸ್ಟ್ರೀಸ್   ₹22, ಟಾಟಾಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್  ₹18, ಬಾಯರ್ ಕಾರ್ಪೊರೇಷನ್‌   ₹17, ಎಂ ಫಾಸಿಸ್  ₹17, ವಿಎಸ್‌ಟಿ ಟ್ರಿಲ್ಲರ್ಸ್ ಮತ್ತು ಎಲ್ಸಿಡ್ ಇನ್ವೆಸ್ಟ್‌ಮೆಂಟ್ಸ್  ₹15. ಮಹಾನಗರ ಗ್ಯಾಸ್ ₹11, ಟಾಟಾ ಕೆಮಿಕಲ್ಸ್ ₹11, 

₹5 ರಿಂದ ₹10 ಲಾಭಂಶ ವಿತರಣೆ: ಭಾರತ್ ಫೋರ್ಜ್, ಡಿಎಫ್ಎಂ ಇಂಡಸ್ಟ್ರೀಸ್, ಅಕ್ರಿಸಿಲ್, ಕಲ್ಯಾಣಿ ಸ್ಟಿಲ್, ಸುಖಜೀತ್ ಸ್ಟಾರ್ಚ್,  ಗುಜರಾತ್ ಅಲ್ಕಲೈಸ್  ಪ್ರತಿ ಷೇರಿಗೆ ₹5,   ಎಕ್ಸೆಲ್ ಇಂಡಸ್ಟ್ರೀಸ್  ಮತ್ತು ವೆಂಕಿಸ್ ಇಂಡಿಯಾ  ₹6,  ಓರಿಯಂಟಲ್ ಕಾರ್ಬನ್ ಅಂಡ್ ಕೆಮಿಕಲ್ಸ್ ₹7, ವಿಂಪ್ಲಾಸ್ಟ್  ₹7, ಲುಪಿನ್  ₹7.50, ಧನುಸೇರಿ ಟೀ ಇಂಡಸ್ಟ್ರೀಸ್ ಮತ್ತು ಮಾರ್ಗನ್ ಕ್ರೂಸಿಬಲ್  ₹8,  ಟೆಕ್ ಮಹಿಂದ್ರ ₹9,  ಅಲ್ಕೆಮ್ ಲ್ಯಾಬ್ ₹9, ನೊವಾರ್ಟಿಸ್ ಮತ್ತು ಹನಿವೆಲ್ ಆಟೋಮೇಷನ್  ₹10, ದಿವೀಸ್ ಲ್ಯಾಬ್ ₹10,  ಎಸ್‌ಕೆ ಎಫ್ ಇಂಡಿಯಾ ₹10

₹3 ಕ್ಕೂ ಹೆಚ್ಚಿನ ಲಾಭಾಂಶ: ಅಜಮೇರಾ ರಿಯಾಲ್ಟಿ, ಕಲ್ಯಾಣಿ ಫೋರ್ಜ್, ಕೊಠಾರಿ ಪ್ರಾಡಕ್ಟ್ಸ್, ಜೂಬಿಲಿಯಂಟ್ ಲೈಫ್, ಇಂಗರ್ಸಾಲ್ ರಿಯಾಂಡ್, ಗುಜರಾತ್ ಗ್ಯಾಸ್, ಟಿ ಪಿ ಎಲ್ ಪ್ಲಾಸ್ಟಿಕ್, ಅಪ್ಟೆಕ್, ವೇಯ್ಜ್ ಮನ್ ಫಾರೆಕ್ಸ್ ಕಂಪೆನಿಗಳು ₹3.

ವೋಲ್ಟಾಸ್, ಅಯೋನ್ ಎಕ್ಸ್ ಚೇಂಜ್, ಡಿಸಿಎಂ ಶ್ರೀರಾಮ್ ಇಂಡಸ್ಟ್ರೀಸ್, ಗರ್‌ವಾರೆ ವಾಲ್ ರೊಪ್ಸ್, ಧಾಮಪುರ್ ಶುಗರ್ ಕಂಪೆನಿಗಳು ಪ್ರತಿ ಷೇರಿಗೆ ₹3.50.

ಬ್ಯಾಂಕೋ ಪ್ರಾಡಕ್ಟ್ಸ್, ನರ್ಮದಾ ಜೆಲೆಟಿನ್, ಗ್ರಿನ್ಡ್ ವೆಲ್ ನಾರ್ಟನ್, ಸ್ವೆಲೆಕ್ಟ್ ಎನರ್ಜಿ ಸಿಸ್ಟಮ್ಸ್, ಹೆರಿಟೇಜ್ ಫುಡ್, ಎ ಐ ಎ ಇಂಜಿನೀರಿಂಗ್, ರಾಜಪಾಲಯಂ ಮಿಲ್ಸ್, ಬಾಂಬೆ ಸೈಕಲ್ ಕಾನ್ಪಿಗಳು ಪ್ರತಿ ಷೇರಿಗೆ ₹4. ವಾಟೆಕ್ ವಾಬಾಗ್ ₹4 , ಅಮರರಾಜ ಬ್ಯಾಟರೀಸ್ ಪ್ರತಿ ಷೇರಿಗೆ ₹4.25, ಗುಡ್ ರಿಕ್ ಗ್ರೂಪ್ ಪ್ರತಿ ಷೇರಿಗೆ ₹4.50.

ಇತರೆ ಪ್ರಮುಖ ಕಂಪೆನಿಗಳು ವಿತರಿಸಲಿರುವ ಲಾಭಾಂಶ: ಐ ಟಿ ಸಿ ₹4.75, ಸನ್ ಫಾರ್ಮ ₹3 .50,   ಸಿಪ್ಲಾ ₹2, ಡಿ ಎಲ್ ಎಫ್ ₹2,  ಇಂಡಿಯನ್ ಕಾರ್ಡ್ ಕ್ಲಾಥಿಂಗ್ ₹2, ಎಫ್ ಡಿ ಸಿ ₹2.25,  ಸುಂದರಂ ಫಾಸ್ಟ್ ನೆರ್ಸ ₹2.80, ಇಂಗರ್ಸಾಲ್ ರಿಯಾಂಡ್ ₹3, ಗುಜರಾತ್ ಗ್ಯಾಸ್ ₹3, ವೋಲ್ಟಾಸ್  ₹3.50, ಅಶೋಕ್

ಲೈಲ್ಯಾಂಡ್‌ ₹1.56.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry