5

ಒಮ್ಮೆ ಜೋಳದ ರೊಟ್ಟಿ ಮಾಡಿ ನೋಡಿ!

Published:
Updated:
ಒಮ್ಮೆ ಜೋಳದ ರೊಟ್ಟಿ ಮಾಡಿ ನೋಡಿ!

ಸದಾ ಚಪಾತಿ, ಪರೋಟ ತಿಂದು ನಿಮಗೆ ಬೋರಾಗಿದ್ದರೆ ಒಮ್ಮೆ ಜೋಳದ ರೊಟ್ಟಿಯ ರುಚಿ ನೋಡಿ! ಚಟ್ನಿ ಅಥವಾ ಪಲ್ಯದ ಜತೆಯಲ್ಲಿ ರೊಟ್ಟಿಯನ್ನು ತಿಂದರೆ ಅದರ ರುಚಿಯೇ ಬೇರೆ!  ಜೋಳದ ರೊಟ್ಟಿ ಮಾಡುವ ವಿಧಾನವನ್ನು ‘ಪ್ರಜಾವಾಣಿ ರೆಸಿಪಿ’ಯಲ್ಲಿ ನೀಡಲಾಗಿದೆ.

ಸಾಮಗ್ರಿಗಳು

1. ಜೋಳದ ಹಿಟ್ಟು -              ಒಂದು ಕಪ್

2. ಉಪ್ಪು -                         ರುಚಿಗೆ

3. ಬಿಸಿ ನೀರು -                   1/2 ಕಪ್

ಮಾಡುವ ವಿಧಾನ: ನೀರಿಗೆ ಸ್ವಲ್ಪ ಉಪ್ಪು ಸೇರಿಸಿ ಬಿಸಿ ಮಾಡಿ. ಬೇರೆ ಬಟ್ಟಲಲ್ಲಿ ಸ್ವಲ್ಪ ನೀರು, 2 ಸ್ಪೂನ್ ಹಿಟ್ಟನ್ನು ಕಲಸಿ, ಕುದಿಯುತ್ತಿರುವ ನೀರಿಗೆ ಕಲಸಿದ ಹಿಟ್ಟನ್ನು ಹಾಕಿ ಕುದಿ ಬಂದ ನಂತರ ಉಳಿದ ಜೋಳದ ಹಿಟ್ಟನ್ನು ಹಾಕಿ.

2 ನಿಮಿಷ ಕುದಿಸಿ ಕೆಳಗಿಳಿಸಿ ಚೆನ್ನಾಗಿ ನಾದಿ ಉಂಡೆಗಳಾಗಿ ಮಾಡಿ. ಕೂಡಲೇ ಅವನ್ನು ರೊಟ್ಟಿಗಳಾಗಿ ತಟ್ಟಿ, ಕಾದ ಹೆಂಚಿನ ಮೇಲೆ ತಟ್ಟಿದ ರೊಟ್ಟಿಯನ್ನು ಹಾಕಿ. ಒದ್ದೆ ಬಟ್ಟೆಯಿಂದ ಸವರುತ್ತಾ, ಎರಡು ಕಡೆ ಬೇಯಿಸಿದರೆ ಜೋಳದ ರೊಟ್ಟಿ ಸವಿಯಲು ಸಿದ್ಧ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry