ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿ ಮಾಲಿನ್ಯ ಪರಿಶೀಲನೆಗೆ ಸದನ ಸಮಿತಿ

ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪರಿಷತ್ತಿನ ನಿರ್ಣಯ
Last Updated 1 ಜೂನ್ 2017, 4:45 IST
ಅಕ್ಷರ ಗಾತ್ರ

ಮಂಗಳೂರು:  ಮಳವೂರು ಅಣೆ ಕಟ್ಟೆಯ ಬಳಿ ಫಲ್ಗುಣಿ ನದಿಯ ನೀರು ಕಲುಷಿತವಾಗಿರುವುದು ಮತ್ತು ಅದ ರಿಂದ ಸಾವಿರಾರು ಸಂಖ್ಯೆಯಲ್ಲಿ ಜಲ ಚರಗಳು ಸಾವಿಗೀಡಾಗಿರುವ ಕುರಿತು ಪರಿಶೀಲನೆ ನಡೆಸಲು ಸದನ ಸಮಿತಿ ರಚಿಸುವ ನಿರ್ಣಯವನ್ನು ಬುಧವಾರ ನಡೆದ ಮಂಗಳೂರು ಮಹಾನಗರ ಪಾಲಿಕೆಯ ಪರಿಷತ್ತಿನ ತಿಂಗಳ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಯಿತು.

ಮೇಯರ್‌ ಕವಿತಾ ಸನಿಲ್‌ ಅಧ್ಯ ಕ್ಷತೆಯಲ್ಲಿ ಸಭೆ ಆರಂಭವಾಗುತ್ತಿದ್ದಂತೆಯೇ ಈ ವಿಚಾರ ಪ್ರಸ್ತಾಪಿಸಿದ ಕಾಂಗ್ರೆಸ್‌ನ ದೀಪಕ್‌ ಪೂಜಾರಿ, ಮಹಾ ಬಲ ಮಾರ್ಲ, ಸಿಪಿಎಂನ ದಯಾನಂದ ಶೆಟ್ಟಿ, ಬಿಜೆಪಿಯ ಸುಧೀರ್‌ ಶೆಟ್ಟಿ ಕಣ್ಣೂರು, ‘ಕೆಲವು ಕೈಗಾರಿಕೆಗಳು ತ್ಯಾಜ್ಯ ನೀರನ್ನು ಸಂಸ್ಕರಿಸದೇ ನೇರವಾಗಿ ನದಿಗೆ ಹರಿಸುತ್ತಿರುವುದೇ ಘಟನೆಗೆ ಕಾರಣ. ಕೈಗಾರಿಕಾ ತ್ಯಾಜ್ಯ ನೀರನ್ನು ನೇರವಾಗಿ ನದಿಗೆ ಹರಿಸುತ್ತಿರುವ ಉದ್ದಿಮೆಗಳನ್ನು ಗುರುತಿಸಿ ಕಠಿಣ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

ನದಿಗೆ ತ್ಯಾಜ್ಯ ನೀರನ್ನು ಹರಿಸುತ್ತಿರುವ ಎಲ್ಲ ಕೈಗಾರಿಕೆಗಳಿಗೆ ತಕ್ಷಣವೇ ನೋಟಿಸ್‌ ಜಾರಿ ಮಾಡಬೇಕು. ಅಂತಹ ಎಲ್ಲ ಉದ್ದಿಮೆಗಳಿಗೆ ನೀರು ಪೂರೈಕೆ ಮಾಡುವುದನ್ನು ಸ್ಥಗಿತಗೊಳಿಸಬೇಕು. ತಕ್ಷಣವೇ ಆ ಎಲ್ಲ ಉದ್ದಿಮೆಗಳ ನೀರಿನ ಸಂಪರ್ಕವನ್ನು ಕಡಿತಗೊಳಿಸಬೇಕು. ಆಗ ಮಾತ್ರ ಈ ಸಮಸ್ಯೆಗೆ ಪರಿಹಾರ ದೊರೆ ಯುತ್ತದೆ ಎಂದು ಕೆಲವು ಸದಸ್ಯರು ಸಲಹೆ ನೀಡಿದರು.

ಚರ್ಚೆಯ ಬಳಿಕ ಉತ್ತರ ನೀಡಿದ ಮೇಯರ್‌, ‘ಸದನ ಸಮಿತಿಯು ಸ್ಥಳಕ್ಕೆ ಭೇಟಿ ನೀಡಿ ನದಿ ನೀರು ಮಲಿನವಾ ಗಿರುವುಕ್ಕೆ ಕಾರಣವಾಗಿರುವ ಅಂಶಗಳ ಕುರಿತು ಪರಿಶೀಲನೆ ನಡೆಸಲಿದೆ. ಮಾಲಿನ್ಯಕ್ಕೆ ನಿಖರ ಕಾರಣ ಏನು ಎಂಬುದನ್ನು ಪತ್ತೆ ಮಾಡಲಿದೆ. ಸಮಿತಿಯ ವರದಿ ಯನ್ನು ಆಧರಿಸಿ, ಮಾಲಿನ್ಯಕ್ಕೆ ಕಾರಣವಾ ಗಿರುವವರ ವಿರುದ್ಧ ಕ್ರಮ ಜರುಗಿಸುವ ನಿರ್ಧಾರವನ್ನು ಪರಿಷತ್ತು ಕೈಗೊಳ್ಳುತ್ತದೆ’ ಎಂಬ ನಿರ್ಣಯವನ್ನು ಮಂಡಿಸಿದರು. ಅದಕ್ಕೆ ಪರಿಷತ್ತು ಸರ್ವಾನುಮತದ ಒಪ್ಪಿಗೆ ನೀಡಿತು.

ಕೈಕೊಟ್ಟ ಎಸ್‌ಟಿಪಿ: ಸುರತ್ಕಲ್‌ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆಯಲ್ಲಿ ದ್ರವ ತ್ಯಾಜ್ಯ ಸಂಸ್ಕರಣಾ  ಘಟಕಗಳ (ಎಸ್‌ಟಿಪಿ) ಬಾವಿಗಳಲ್ಲಿ (ವೆಟ್‌ವೆಲ್‌) ಅಳವಡಿಸಿರುವ ಐದು ಪಂಪ್‌ಗಳು ಕೆಟ್ಟು ಹೋಗಿರುವ ವಿಷಯವನ್ನು ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಗಣೇಶ್ ಹೊಸಬೆಟ್ಟು, ‘ಪಂಪ್‌ಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿರುವ ಪ್ಯಾನೆಲ್‌ಗಳು ಶೋಚನೀಯ ಸ್ಥಿತಿಯಲ್ಲಿವೆ. ಗುತ್ತಿಗೆದಾ ರರು ಕಳಪೆ ಕಾಮಗಾರಿ ಮಾಡಿರುವುದೇ ಇದಕ್ಕೆ ಕಾರಣ’ ಎಂದರು.

ಈ ಆರೋಪಕ್ಕೆ ಉತ್ತರಿಸಿದ ಮಹಾ ನಗರ ಪಾಲಿಕೆ ಆಯುಕ್ತ ಮೊಹಮ್ಮದ್ ನಜೀರ್‌, ‘ಸುರತ್ಕಲ್‌ನಲ್ಲಿ ಎಸ್‌ಟಿಪಿ ವ್ಯವಸ್ಥೆ ಕೆಲಸ ಮಾಡುತ್ತಿದೆ. ಆದರೆ, ವೆಟ್‌ವೆಲ್‌ಗಳ ಕಾರ್ಯನಿರ್ವಹಣೆ ಸಮರ್ಪಕವಾಗಿಲ್ಲ. ವೆಟ್‌ವೆಲ್‌ಗಳ ಪಂಪ್‌ ಗಳಿಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗುವುದನ್ನು ತಪ್ಪಿಸಲು ಎಲ್ಲ ಕಡೆಗ ಳಲ್ಲಿ ಜನರೇಟರ್‌ ಅಳವಡಿಸುವಂತೆ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಸೂಚನೆ ನೀಡಿದ್ದೇನೆ. ವೆಟ್‌ವೆಲ್‌ ಪಂಪ್‌ಗಳ ದುರಸ್ತಿಗೂ ಸೂಚಿಸಿದ್ದೇನೆ’ ಎಂದರು.

‘ಈ ವೆಟ್‌ವೆಲ್‌ಗಳಿಗೆ ಎಡಿಬಿ ಒಂದನೇ ಹಂತದ ಕಾಮಗಾರಿ ವೇಳೆ ಪಂಪ್‌ ಅಳವಡಿಸಲಾಗಿತ್ತು. ಅವೆಲ್ಲವೂ ಈಗ ದುಸ್ಥಿತಿಯಲ್ಲಿವೆ. ಈಗ ಪ್ರತಿ ವೆಟ್‌ ವೆಲ್‌ನಲ್ಲಿ ಕನಿಷ್ಠ ಒಂದು ಪಂಪ್‌ ಅನ್ನು ದುರಸ್ತಿ ಮಾಡಿಸಬೇಕು’ ಎಂದು ಕಾರ್ಯ ನಿರ್ವಾಹಕ ಎಂಜಿನಿಯರ್‌ ಗಣೇಶ್‌ ಹೇಳಿದರು.

ವಿಧಾನ ಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕ ಐವನ್‌ ಡಿಸೋಜ ಮಾತನಾಡಿ, ‘ನಗರದ ಒಳಚರಂಡಿ ವ್ಯವಸ್ಥೆ ಕಾಮಗಾರಿಗಾಗಿ ಎಡಿಬಿ ಯೋಜ ನೆಯಡಿ ಕೋಟ್ಯಂತರ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ಆದರೆ, ಈಗ ಕೊಳಚೆ ನೀರು ಬಸಿದು, ತಗ್ಗು ಪ್ರದೇಶ ಗಳಲ್ಲಿನ ಬಾವಿ ನೀರಿಗೆ ಸೇರುತ್ತಿದೆ. ಇದರಿಂದ ನಗರದ ಜಲಮೂಲಗಳು ಮಲಿನವಾಗುತ್ತಿವೆ. ಈ ಬಗ್ಗೆ ತನಿಖೆ ನಡೆಸುವ ಅಗತ್ಯವಿದೆ’ ಎಂದರು.

ಲೋಕಾಯುಕ್ತ ತನಿಖೆಗೆ ಆದೇಶಿಸು ವಂತೆ ಬಿಜೆಪಿ ಸದಸ್ಯರು ಆಗ್ರಹಿಸಿದರು. ಕಾಂಗ್ರೆಸ್‌ ಸದಸ್ಯರು ಅದನ್ನು ವಿರೋಧಿಸಿ ದರು. ಇದರಿಂದ ಕೆಲಕಾಲ ಸಭೆಯಲ್ಲಿ ವಾಕ್ಸಮರ ನಡೆಯಿತು.

ಎಸ್‌ಟಿಪಿ ಕಡ್ಡಾಯ: ನಗರದ ವ್ಯಾಪ್ತಿಯಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗ ಳನ್ನು (ಎಸ್‌ಟಿಪಿ) ಹೊಂದಿರದ ಬಹು ಮಹಡಿ ಕಟ್ಟಡಗಳಿಗೆ ಸ್ವಾಧೀನ ಪ್ರಮಾಣಪತ್ರ ವಿತರಣೆ ಮಾಡಬಾರದು. ನಗ ರದ ಎಲ್ಲ ಬಹುಮಹಡಿ ಕಟ್ಟಡಗಳು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಹೋಟೆಲ್‌ಗಳಲ್ಲಿ ಎಸ್‌ಟಿಪಿ ನಿರ್ಮಿಸಿ ರುವ ಕುರಿತು ತಪಾಸಣೆ ನಡೆಸಿ, ವರದಿ ಸಲ್ಲಿಸಬೇಕು ಎಂದು ಮೇಯರ್‌ ನಗರ ಯೋಜನಾ ವಿಭಾಗದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಗರದ ಕೆಲವು ಕಡೆಗಳಲ್ಲಿ ಬಹು ಮಹಡಿ ಕಟ್ಟಡಗಳು, ಹೋಟೆಲ್‌ಗಳು ಮತ್ತು ಶಿಕ್ಷಣ ಸಂಸ್ಥೆಗಳು ತ್ಯಾಜ್ಯ ನೀರನ್ನು ನೇರವಾಗಿ ಚರಂಡಿಗಳಿಗೆ ಹರಿಸುತ್ತಿವೆ ಎಂದು ದೂರಿದ ಕೆಲವು ಸದಸ್ಯರು, ಅಂತಹವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.

20ಯೂನಿಟ್‌ ಅಥವಾ 2 ಸಾವಿರ ಚದರ ಮೀಟರ್‌ಗಳಿಗಿಂತ ಹೆಚ್ಚಿನ ವಿಸ್ತೀ ರ್ಣದ ಕಟ್ಟಡಗಳಲ್ಲಿ ಎಸ್‌ಟಿಪಿ ಹೊಂದು ವುದು ಕಡ್ಡಾಯ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ಈ ಸಂಬಂಧ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಮೇಯರ್‌, ವರದಿ ಬಂದ ಬಳಿಕ ಕ್ರಮ ಜರುಗಿಸುವ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT