ಕುಟುಂಬದ ನೆಮ್ಮದಿ ಕಸಿಯುವ ತಂಬಾಕು

7
ಮೂಡಿಗೆರೆ: ವಿಶ್ವ ತಂಬಾಕು ವಿರೋಧಿ ದಿನ– ನ್ಯಾಯಾಧೀಶೆ ಶಶಿಕಲಾ ಹೇಳಿಕೆ

ಕುಟುಂಬದ ನೆಮ್ಮದಿ ಕಸಿಯುವ ತಂಬಾಕು

Published:
Updated:
ಕುಟುಂಬದ ನೆಮ್ಮದಿ ಕಸಿಯುವ ತಂಬಾಕು

ಮೂಡಿಗೆರೆ: ತಂಬಾಕಿಗೆ ಆರೋಗ್ಯವ ನ್ನಷ್ಟೇ ಅಲ್ಲದೇ ಅದನ್ನು ಸೇವನೆ ಮಾಡುವವನ ಕುಟುಂಬದ ನೆಮ್ಮದಿ ಯನ್ನೂ ಕಸಿಯುವ ಅವಗುಣವಿದೆ ಎಂದು ಜೆಎಂಎಫ್‌ ನ್ಯಾಯಾಲಯದ ಹಿರಿಯ ಸಿವಿಲ್‌ ನ್ಯಾಯಾಧೀಶೆ ಎಂ.ಎಸ್‌. ಶಶಿಕಲಾ ಅಭಿಪ್ರಾಯಪಟ್ಟರು.

ಪಟ್ಟಣದ ಮಹಾತ್ಮಗಾಂಧಿ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಏರ್ಪಡಿಸಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಂಬಾಕು ಸೇವನೆಯಿಂದ ನೇರವಾಗಿ ಕ್ಯಾನ್ಸರ್‌ ರೋಗ ಬರುವುದು ಮಾತ್ರವಲ್ಲದೇ, ರೋಗ ಅಂಟಿಸಿಕೊಂಡ ವ್ಯಕ್ತಿಯ ಕುಟುಂಬದವರ ನೆಮ್ಮದಿಯೂ ಕಳೆದು ಹೋಗುತ್ತದೆ. ಆದ್ದರಿಂದ ತಂಬಾಕು ಸೇವನೆಯಿಂದ ದೂರ ಉಳಿಯುವುದರೊಂದಿಗೆ ಕುಟುಂಬ ವನ್ನು ನೆಮ್ಮದಿಯಿಂದ ಸಾಗಿಸಲು ಮುಂದಾಗಬೇಕು ಎಂದರು.

ಶಾಲಾ ಕಾಲೇಜು ಆವರಣದಿಂದ 100 ಮೀ ಅಂತರದಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುವುದು ಕಂಡು ಬಂದರೆ ಕಾನೂನಿನಡಿಯಲ್ಲಿ ಶಿಕ್ಷೆ ನೀಡಲು ಅವಕಾಶವಿದೆ. ಅಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದರೆ ದಂಡ ಸಹಿತ ಶಿಕ್ಷೆ ವಿಧಿಸಬಹುದು ಎಂದರು.ತಾಲ್ಲೂಕು ವೈದ್ಯಾಧಿಕಾರಿ ಡಾ. ಸುಂದ್ರೇಶ್‌ ಮಾತನಾಡಿ, ‘ತಂಬಾಕು ಉತ್ಪನ್ನಗಳಲ್ಲಿ ಪ್ರಧಾನವಾದ ಸಿಗರೇಟಿನಲ್ಲಿ ದೇಹಕ್ಕೆ ಹಾನಿಕಾರಕವಾದ13 ರಾಸಾಯನಿಕ ವಸ್ತುಗಳಿದ್ದು, ಇದನ್ನು ಬಳಸುವುದರಿಂದ ಬಹುಬೇಗ ಸಾವು ಸಂಭವಿಸುತ್ತದೆ’ ಎಂದರು.

ವಕೀಲರ ಸಂಘದ ಅಧ್ಯಕ್ಷ ಎನ್‌. ಎಸ್‌. ಜಯರಾಂ ಮಾತನಾಡಿ, ‘ತಂಬಾಕು ಉತ್ಪನ ಸೇವನೆ ಮಾಡುವ ವರಲ್ಲಿ ಬಹುತೇಕ ವಿದ್ಯಾವಂತರಾಗಿದ್ದು, ತಂಬಾಕು ಉತ್ಪನ್ನಗಳಲ್ಲಿ ಹಾನಿಕಾರಕ ಎಂಬ ಫಲಕವಿದ್ದರೂ ವಿತಂಡವಾದ ದೊಂದಿಗೆ ಸೇವನೆ ಮಾಡಲು ಮುಂದಾ ಗುತ್ತಾರೆ. ತಂಬಾಕು ಸೇವನೆ ಮಾಡುವುದರಿಂದ ಸುಂದರವಾದ ಬದುಕನ್ನೇ ಕಳೆದುಕೊಳ್ಳಬೇಕಾದ ಸ್ಥಿತಿ ಒದಗುತ್ತದೆ’ ಎಂದು ಎಚ್ಚರಿಸಿದರು.

ನ್ಯಾಯಾಧೀಶರಾದ ಎನ್‌.ವಿ. ಅರವಿಂದ್‌, ಪ್ರಕೃತಿ ಕಲ್ಯಾಣ್‌ಪುರ್‌, ಹಿರಿಯ ವಕೀಲ ರಾಜರಾಮ್‌ದರ್ಶನ, ವಕೀಲರ ಸಂಘದ ಕಾರ್ಯದರ್ಶಿ ವೆಂಕಟೇಶ್‌, ಡಾ. ವೀರೇಶ್, ಜೆ.ಡಿ. ಮೂರ್ತಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry