ಸನ್ನಿ ಲಿಯೋನ್ ಇದ್ದ ಖಾಸಗಿ ವಿಮಾನ ಅಪಘಾತದಿಂದ ಪಾರು

7

ಸನ್ನಿ ಲಿಯೋನ್ ಇದ್ದ ಖಾಸಗಿ ವಿಮಾನ ಅಪಘಾತದಿಂದ ಪಾರು

Published:
Updated:
ಸನ್ನಿ ಲಿಯೋನ್ ಇದ್ದ ಖಾಸಗಿ ವಿಮಾನ ಅಪಘಾತದಿಂದ ಪಾರು

ಮುಂಬೈ : ಬಾಲಿವುಡ್ ನಟಿ ಸನ್ನಿ ಲಿಯೋನ್ ಮತ್ತು ಆಕೆಯ ಪತಿ ಡೇನಿಯಲ್ ವೆಬರ್ ಅವರಿದ್ದ  ಖಾಸಗಿ ವಿಮಾನ ಸ್ವಲ್ಪದರಲ್ಲಿಯೇ ಅಪಘಾತದಿಂದ ಪಾರಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

ಸನ್ನಿಲಿಯೋನ್ ಖಾಸಗಿ ವಿಮಾನವೊಂದರಲ್ಲಿ ಮುಂಬೈಗೆ ತೆರಳುತ್ತಿದ್ದರು. ಈ ವೇಳೆ ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ಪತನಗೊಳ್ಳುವ ಸಂಭವವಿತ್ತು. ಈ ಸಂದರ್ಭದಲ್ಲಿ ಪೈಲಟ್‌ ಮುಂಜಾಗ್ರತೆ ವಹಿಸಿ ಅವಘಡವನ್ನು ತಪ್ಪಿಸಿದರು ಎಂದು ಸನ್ನಿ ಲಿಯೋನ್ ಟ್ವೀಟ್‌ ಮಾಡಿದ್ದಾರೆ.

ವಿಮಾನ ಮಹಾರಾಷ್ಟ್ರದ ದುರ್ಗಮ ಪ್ರದೇಶವೊಂದರಲ್ಲಿ ತುರ್ತು ಭೂ ಸ್ಪರ್ಶ ಮಾಡಿದೆ. ನಂತರ ನಾವಿಬ್ಬರು ರಸ್ತೆ ಮೂಲಕ ಮುಂಬೈ ತಲುಪಿದೆವು ಎಂದು ಸನ್ನಿಲಿಯೋನ್ ಟ್ವೀಟ್ ಮಾಡಿದ್ದಾರೆ.

ಸುಮಾರು 6 ಗಂಟೆಗಳ ಪ್ರಯಾಣದ ಬಳಿಕ ಮುಂಬೈ ತಲುಪಿದೆವು ಎಂದು ಅವರು ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry