ಜಾರ್ಜ್‌ಗೆ ಗೃಹ ಖಾತೆ?  ಯಡಿಯೂರಪ್ಪ ವಿರೋಧ

7

ಜಾರ್ಜ್‌ಗೆ ಗೃಹ ಖಾತೆ?  ಯಡಿಯೂರಪ್ಪ ವಿರೋಧ

Published:
Updated:
ಜಾರ್ಜ್‌ಗೆ ಗೃಹ ಖಾತೆ?  ಯಡಿಯೂರಪ್ಪ ವಿರೋಧ

ಕಲಬುರ್ಗಿ:‘ಸಚಿವ ಕೆ.ಜೆ. ಜಾರ್ಜ್‌ ಅವರಿಗೆ ಮತ್ತೆ ಗೃಹ ಖಾತೆ ನೀಡುವುದು ಸರಿಯಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

‘ನಾವು ಹೋರಾಟ ಮಾಡಿ ಅವರನ್ನು ಗೃಹ ಖಾತೆಯಿಂದ ಇಳಿಸಿದ್ದೇವೆ. ಜಾರ್ಜ್‌ ಅವರು ಮುಖ್ಯಮಂತ್ರಿಗೆ ಪ್ರಿಯವಾದ ವ್ಯಕ್ತಿ. ಹಠವಾದಿಯಾಗಿರುವ ಸಿದ್ದರಾಮಯ್ಯ ಅವರು ಯಾವುದು ಬೇಡವೋ ಅದನ್ನೇ ಮಾಡುತ್ತಿದ್ದಾರೆ’ ಎಂದರು.

‘ಬೆಂಗಳೂರಿನಲ್ಲಿ ಆರು ತಿಂಗಳಲ್ಲಿ ಬಿಜೆಪಿಯ ಮೂವರು ಕಾರ್ಯಕರ್ತರ ಕೊಲೆ ನಡೆದಿವೆ. ತನಿಖೆ ವಿಳಂಬವಾಗುತ್ತಿದ್ದು, ಸರ್ಕಾರವೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನವ್ಯಕ್ತಪಡಿಸಿದರು. ಇಂದು ಆನೇಕಲ್‌ನಲ್ಲಿ ನಡೆದಿರುವ ಬಿಜೆಪಿ ಕಾರ್ಯಕರ್ತರೊಬ್ಬರ ಕೊಲೆ ಆರೋಪಿಗಳನ್ನು ಶೀಘ್ರ  ಬಂಧಿಸಬೇಕು’ ಎಂದು ಯಡಿಯೂರಪ್ಪ ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry