ಎಳೆಯರು ನಾವು ಗೆಳೆಯರು

7

ಎಳೆಯರು ನಾವು ಗೆಳೆಯರು

Published:
Updated:
ಎಳೆಯರು ನಾವು ಗೆಳೆಯರು

ನಾಗರಾಜ್ ಗೋಪಾಲ್ ನಿರ್ಮಾಣದ ಈ ಚಿತ್ರವನ್ನು ನಿರ್ದೇಶಿಸಿದವರು ವಿಕ್ರಂ ಸೂರಿ. ಅನೂಪ್ ಸೀಳಿನ್ ಸಂಗೀತ, ಅಶೋಕ್ ವಿ ರಾಮನ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಅಚಿಂತ್ಯ, ನಿಹಾಲ್, ಅಭಿಷೇಕ್, ಅಮೋಘ್, ತುಷಾರ್, ಪುಟ್ಟರಾಜು, ಮಹೇಂದ್ರ, ಸೂರಜ್, ತೇಜಸ್ವಿನಿ, ಮಹಿತಿ, ಶಂಕರ್ ಅಶ್ವತ್ ಮತ್ತು ಇತರರು ಇದರಲ್ಲಿ ಅಭಿನಯಿಸಿದ್ದಾರೆ.

ಸರ್ಕಾರಿ ಕೆಲಸ ದೇವರ ಕೆಲಸ

ಇದೊಂದು ಹಾಸ್ಯಮಯ ಚಿತ್ರ. ಸರ್ಕಾರದ ಕಡೆಯಿಂದ ಕೆಲಸ ಮಾಡಿಸಿಕೊಳ್ಳುವಾಗ ಎದುರಿಸಬೇಕಾಗ ಶೋಷಣೆಗಳನ್ನು ಹಾಸ್ಯ ರೂಪದಲ್ಲಿ ಇದರಲ್ಲಿ ವಿವರಿಸಲಾಗಿದೆ. ಚಿತ್ರದ ನಿರ್ದೇಶನ ಆರ್. ರವೀಂದ್ರ ಅವರದ್ದು. ಅರ್ಜುನ್ ಜನ್ಯ ಸಂಗೀತ, ಮಂಜುನಾಥ್ ಬಿ. ನಾಯಕ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ರವಿಶಂಕರ್ ಗೌಡ, ಸಂಯುಕ್ತ ಹೊರನಾಡು, ‘ಮುಖ್ಯಮಂತ್ರಿ’ ಚಂದ್ರು, ರಂಗಾಯಣ ರಘು, ರಾಜು ತಾಳಿಕೋಟೆ ಮತ್ತು ಇತರರು ತಾರಾಗಣದಲ್ಲಿ ಇದ್ದಾರೆ.

ಲೈಫ್‌ 360

ಎಸ್.ರಾಜಶೇಖರ್ ನಿರ್ಮಾಣದ ಈ ಚಿತ್ರದ ನಿರ್ದೇಶಕ ಅರ್ಜುನ್. ಪ್ರಜ್ವಲ್ ಪೈ, ಮಹಂತ್ ನೀಲ್, ಆಕಾಶ್ ಶಿವಕುಮಾರ್ ಸಂಗೀತ ಚಿತ್ರಕ್ಕಿದೆ. ಅನಿಲ್ ಕುಮಾರ್ ಕೆ ಛಾಯಾಗ್ರಹಣ ಮಾಡಿದ್ದಾರೆ. ಅರ್ಜುನ್, ಅನೂಷಾ, ಪಾಯಲ್, ಶ್ರೀಧರ್, ಬಿರಾದಾರ್, ಸರ್ದಾರ್ ಸತ್ಯ, ಸಿಲ್ಲಿಲಲ್ಲಿ ಶ್ರೀನಿವಾಸ್ ಮತ್ತು ಇತರರು ತಾರಾಬಳಗದಲ್ಲಿದ್ದಾರೆ.ಈ ಕಲರವ

ಎಂ.ಮಹಾದೇವೇಗೌಡ ನಿರ್ಮಿಸಿರುವ ಪ್ರೀತಿ-ಪ್ರೇಮದ ಎಳೆ ಹೊಂದಿರುವ ಈ ಚಿತ್ರದ ನಿರ್ದೇಶಕರು ಸಂದೀಪ್ ದಕ್ಷ್ ಅವರದ್ದು. ಪೀಟರ್ ಎಂ. ಜೋಸೆಫ್ ಸಂಗೀತ, ಕುಮಾರ್ ಜಿ ಛಾಯಾಗ್ರಹಣ ಚಿತ್ರಕ್ಕಿದೆ ನವೀನ್ ಕೃಷ್ಣ, ರೋಹಿಣಿ ಭಾರದ್ವಾಜ್, ಲಕ್ಕಿ, ರಶ್ಮಿ, ನಿಹಾರಿಕಾ, ಮೈಸೂರು ಶೋಭಾ, ಮತ್ತು ಇತರರು ತಾರಾಬಳಗದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry