ಸಾರ್ವಜನಿಕವಾಗಿ ಕರು ಹತ್ಯೆ: ಕೇರಳದ ಯುವ ಕಾಂಗ್ರೆಸ್‌ನ 8 ಮಂದಿ ಬಂಧನ

7

ಸಾರ್ವಜನಿಕವಾಗಿ ಕರು ಹತ್ಯೆ: ಕೇರಳದ ಯುವ ಕಾಂಗ್ರೆಸ್‌ನ 8 ಮಂದಿ ಬಂಧನ

Published:
Updated:
ಸಾರ್ವಜನಿಕವಾಗಿ ಕರು ಹತ್ಯೆ: ಕೇರಳದ ಯುವ ಕಾಂಗ್ರೆಸ್‌ನ 8 ಮಂದಿ ಬಂಧನ

ಕಣ್ಣೂರು(ಕೇರಳ): ಜಾನುವಾರು ಮಾರಾಟ ಮತ್ತು ಖರೀದಿ ನಿರ್ಬಂಧಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ ಬಳಿಕ ಸಾರ್ವಜನಿಕವಾಗಿ ಕರುವೊಂದನ್ನು ಹತ್ಯೆಗೈದು ಪ್ರತಿಭಟನೆ ನಡೆಸಿದ ಪ್ರಕರಣ ಸಂಬಂಧ ಕೇರಳ ಯುವ ಕಾಂಗ್ರೆಸ್‌ನ ಎಂಟು ಕಾರ್ಯಕರ್ತರನ್ನು ಬಂಧಿಸಲಾಗಿದೆ. 

ಪ್ರಕರಣ ಸಂಬಂಧ ಕೇರಳ ಪೊಲೀಸ್‌ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿತ್ತು. ಯುವ ಕಾಂಗ್ರೆಸ್‌ನ ಮುಖಂಡ ರಿಜ್ಜಿ ಮಾಕುಟ್ಟಿ ಸೇರಿದಂತೆ ಎಂಟು ಜನರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಮೇ 27ರಂದು ಯುವ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸುವ ನೆಪದಲ್ಲಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತೆರೆದ ವಾಹನದಲ್ಲಿ ಕರುವನ್ನು ತಂದು ಸಾರ್ವಜನಿಕವಾಗಿ ಕತ್ತರಿಸಿ ಹತ್ಯೆ ಮಾಡಿದ್ದರು. ಬಳಿಕ, ಮಾಂಸವನ್ನು ಸಾರ್ವಜನಿಕರಿಗೆ ಉಚಿತವಾಗಿ ಹಂಚಿದ್ದರು.

ಘಟನೆ ಬಳಿಕ, ಪೊಲೀಸರು ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಜಾನುವಾರು ಮಾರಾಟ ಮತ್ತು ಖರೀದಿ ನಿರ್ಬಂಧ ಆದೇಶವನ್ನು ಖಂಡಿಸಿ ಕೇರಳದಲ್ಲಿ ವಿವಿಧೆಡೆ ಈಚೆಗೆ ‘ಬೀಫ್‌ ಫೆಸ್ಟ್‌’ ಸಹ ಆಯೋಜಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry