ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ಕಾರ್ಯನಿರ್ವಾಹಕ ಅಧಿಕಾರಿಗಳ ವೇತನ ಕಡಿತದಿಂದ ಯುವಕರ ಉದ್ಯೋಗ ಭದ್ರತೆ ಸಾಧ್ಯ: ಇನ್ಫೋಸಿಸ್‌ ನಾರಾಯಣ ಮೂರ್ತಿ

Last Updated 1 ಜೂನ್ 2017, 12:13 IST
ಅಕ್ಷರ ಗಾತ್ರ

ಬೆಂಗಳೂರು: ಐಟಿ ಸಂಸ್ಥೆಗಳ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಪಡೆಯುವ ವೇತನದಲ್ಲಿ ಕಡಿತಗೊಳಿಸುವುದಾದರೆ ಯುವಜನತೆಯ ಉದ್ಯೋಗ ಭದ್ರತೆ ಸಾಧ್ಯ ಎಂದು ಇನ್ಫೋಸಿಸ್‌ ಸಹ ಸಂಸ್ಥಾಪಕ ಎನ್‌.ಆರ್‌.ನಾರಾಯಣ ಮೂರ್ತಿ ಅಭಿಪ್ರಾಯ ಪಟ್ಟರು.

ಉದ್ಯಮದಲ್ಲಿ ಅನೇಕ ಚಾಣಾಕ್ಷಣ ನಾಯಕರಿದ್ದು, ಎಲ್ಲರೂ ಉದ್ಯೋಗ ಕಡಿತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಆಲೋಚನೆ ಹೊಂದಿರುವುದರಲ್ಲಿ ಅನುಮಾನವಿಲ್ಲ ಎಂದರು.

2001 ಹಾಗೂ 2008ರಲ್ಲಿಯೂ ಉದ್ಯಮಗಳಲ್ಲಿ ಉದ್ಯೋಗ ಕಡಿತದ ಸಮಸ್ಯೆ ಎದುರಿಸಿದ್ದೇವೆ. ಇಂಥ ಪರಿಸ್ಥಿತಿ ಹೊಸದಲ್ಲ, ಈ ಕುರಿತು ಹೆಚ್ಚು ಆತಂಕಕ್ಕೆ ಒಳಗಾಗದೆ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.

ಐಟಿ ಕ್ಷೇತ್ರ 2001ರಲ್ಲಿ ಅತ್ಯಂತ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದ ಸಂದರ್ಭದಲ್ಲಿ ಇನ್ಫೋಸಿಸ್‌ ಹಿರಿಯ ಅಧಿಕಾರಿಗಳೆಲ್ಲ ಒಮ್ಮತದಿಂದ ವೇತನ ಕಡಿತಗೊಳಿಸಿಕೊಳ್ಳುವ ನಿರ್ಧಾರವನ್ನು ನಾರಾಯಣ ಮೂರ್ತಿ ನೆನಪಿಸಿಕೊಂಡರು. ಇದರೊಂದಿಗೆ 1500  ಹೊಸ ಎಂಜಿನಿಯರ್‌ಗಳಿಗೆ ಉದ್ಯೋಗ ನೀಡಲು ಸಾಧ್ಯವಾಯಿತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT