ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಚಿಪ್‌ ಅಳವಡಿಸಿರುವ ಬ್ಯಾಟ್‌ ಬಳಕೆ

7
ಬ್ಯಾಟ್‌ ತಿರುಗಿಸಿದ ಕೋನವನ್ನೂ ಅಳೆಯಬಹುದು

ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಚಿಪ್‌ ಅಳವಡಿಸಿರುವ ಬ್ಯಾಟ್‌ ಬಳಕೆ

Published:
Updated:
ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಚಿಪ್‌ ಅಳವಡಿಸಿರುವ ಬ್ಯಾಟ್‌ ಬಳಕೆ

ಲಂಡನ್‌: ಈವರೆಗೂ ಬೌಲಿಂಗ್‌ ಎಸೆತದ ವೇಗ ಎಷ್ಟಿದೆ ಎಂಬುದನ್ನು ತಿಳಿಯಬಹುದಿತ್ತು. ಇದೀಗ ಬ್ಯಾಟ್ಸ್‌ಮನ್‌ ಬ್ಯಾಟ್‌ ಬೀಸಿದ ವೇಗ, ಬ್ಯಾಟ್‌ ತಿರುಗಿಸಿದ ಕೋನದ ಮಾಹಿತಿ ಕ್ಷಣಾರ್ಧದಲ್ಲಿ ಲಭ್ಯವಾಗುತ್ತದೆ.

ಹಲವು ದೇಶಗಳಲ್ಲಿ ಕ್ರಿಕೆಟ್‌ ಜನಪ್ರಿಯೆ ಕ್ರೀಡೆಯಾಗಿದ್ದು, ಮತ್ತಷ್ಟು ಪ್ರಚುರ ಪಡಿಸುವ ಉದ್ದೇಶದಿಂದ ಅಂತರ ರಾಷ್ಟ್ರೀಯ ಕ್ರಿಕೆಟ್‌ ಮಂಡಳಿ(ಐಸಿಸಿ), ಒಂದು ತಂಡದ ಮೂವರು ಆಟಗಾರರಿಗೆ ‘ಚಿಪ್ ಬ್ಯಾಟ್‌’ ಬಳಸಲು ಅನುಮತಿ ನೀಡಿದೆ.

ಗುರುವಾರದಿಂದ ಆರಂಭವಾಗಿರುವ ಚಾಂಪಿಯನ್ಸ್‌ ಟ್ರೋಫಿ 2017ರ ಕ್ರಿಕೆಟ್‌ ಟೂರ್ನಿಯಲ್ಲಿ ಸಂವೇದಕ ಹೊಂದಿರುವ ಬ್ಯಾಟ್‌ಗಳನ್ನು ಬಳಸಲು ಅವಕಾಶ ನೀಡಿದೆ.

ಟೀಂ ಇಂಡಿಯಾದ ಆರಂಭಿಕ ಆಟಗಾರರಾದ ರೋಹಿತ್‌ ಶರ್ಮಾ, ರಹಾನೆ, ಆರ್‌.ಅಶ್ವಿನ್‌ ಜೂ.4 ರಿಂದ ನಡೆಯುವ ಭಾರತ–ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಚಿಪ್‌ ಅಳವಡಿಸಿರುವ ಬ್ಯಾಟ್‌ ಬಳಸಲಿದ್ದಾರೆ.

ಕ್ರಿಕೆಟ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚಿಪ್‌ ಹೊಂದಿರುವ ಬ್ಯಾಟ್‌ ಬಳಸಲಾಗುತ್ತಿದ್ದು, ಇಂಟೆಲ್‌ ಚಿಪ್‌ ಸಿದ್ಧಪಡಿಸಿದೆ.

* ಬ್ಯಾಟ್‌ ಹಿಡಿಕೆಯ ತುದಿಯಲ್ಲಿ ಚಿಪ್‌:
ಇಂಟೆಲ್ ಕ್ಯೂರಿ ಟೆಕ್ನಾಲಜಿಯ ‘ಬ್ಯಾಟ್ ಸೆನ್ಸ್’ ಚಿಪ್ ಹಿಡಿಕೆಯ ಮೇಲ್ಬಾಗದಲ್ಲಿ ಇರಲಿದೆ. ಬ್ಯಾಟ್‌ ಹಿಡಿಕೆಯ ವೃತ್ತಾಕಾರದ ಜಾಗದಲ್ಲಿ ಈ ಚಿಪ್ ಅಳವಡಿಸಲಾಗುತ್ತದೆ.

* ಅನುಕೂಲಗಳು:
ಬ್ಯಾಟ್‌ ಬಳಸುವಾಗ ಕೋನ( ಆ್ಯಂಗಲ್)ದಲ್ಲಿ ಆಗುವ ಬದಲಾವಣೆ, ಹೊಡೆತದ ರಭಸ ಹಾಗೂ ಬ್ಯಾಟ್ ಬೀಸುವಾಗ ಆದರ ಚಲನೆ ಚಿಪ್‌ ಮೂಲಕ ದಾಖಲಾಗುತ್ತದೆ. ಇದರಿಂದ ದಾಖಲಾಗುವ ಮಾಹಿತಿಯನ್ನು ಕಂಪ್ಯೂಟರ್‌ನಲ್ಲಿ ವಿರ್ಮಶಿಸಬಹುದು. ಬ್ಯಾಟ್ಸ್‌ಮನ್‌ಗಳು ತಪ್ಪು ಸರಿಪಡಿಸಿಕೊಳ್ಳಲೂ ಇದು  ಸಹಕಾರಿಯಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry