ನೂತನ ವಾಷ್‌ ಬೇಸಿನ್‌ ಬಿಡುಗಡೆ

7

ನೂತನ ವಾಷ್‌ ಬೇಸಿನ್‌ ಬಿಡುಗಡೆ

Published:
Updated:
ನೂತನ ವಾಷ್‌ ಬೇಸಿನ್‌ ಬಿಡುಗಡೆ

ವಿಟ್ರಾ ಕಂಪೆನಿ ನೂತನ ಮಾದರಿಯ ಫಾಸೆಟ್‌ ಸರಣಿಯ ವಾಷ್‌ ಬೇಸಿನ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಕಲಾತ್ಮಕವಾಗಿರುವ ಇದು ಮೆಟಲ್‌ ಕೋಟಿಂಗ್‌ ಹೊಂದಿದೆ ಎನ್ನುತ್ತದೆ ಕಂಪೆನಿ. ವೆಬ್‌ಸೈಟ್‌ http://www.vitra-india.com

*ಹೊಸ ಫ್ಯಾನ್‌ ಪರಿಚಯ

ಲುಮಿನಸ್‌ ಎರಡು ಹೊಸ ಫ್ಯಾನ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಡೆಲ್ಟಾಯಿಡ್‌ ಮತ್ತು ಟ್ರಿಗೋನ್‌ ಎಂಬ ಹೆಸರಿನ ಈ ಫ್ಯಾನ್‌ ನೋಡಲು ಆಕರ್ಷಕವಾಗಿದೆ. ಆಧುನಿಕ ನೋಟವನ್ನು ಹೊಂದಿದ್ದು, ಮನೆಯ ಅಂದವನ್ನು ಹೆಚ್ಚಿಸಲಿದೆಯಂತೆ. ಮ್ಯಾಗ್ನೆಟಿಕ್‌ ಗ್ರೇ, ಸಿಲ್ವರ್‌ ವೈಟ್‌ ಬಣ್ಣಗಳಲ್ಲಿದ್ದು, ಆರಂಭಿಕ ಬೆಲೆ ₹2990.

*ವಾಹನ ತೊಳೆಯಲು ಸ್ಪ್ರೆ

ವಿಸ್ತಾ ಸಂಸ್ಥೆ ವಾಹನ ತೊಳೆಯಲು ಡ್ರೈಕ್ಲೀನ್‌ ಸ್ಪ್ರೇ ಒಂದನ್ನು ಪರಿಚಯಿಸಿದೆ. ಇದನ್ನು ಕಾರಿಗೆ ಸ್ಪ್ರೇ ಮಾಡಿ ಮೈಕ್ರೊಫೈಬರ್‌ ಬಟ್ಟೆಯಿಂದ ಒರೆಸಬೇಕು. ‘ನೀರಿನ ಸಮಸ್ಯೆ ಹೆಚ್ಚುತ್ತಿರುವುದರಿಂದ ಇದನ್ನು ಪರಿಚಯಿಸಿದ್ದೇವೆ. ಇದು ವಾಹನಗಳಿಗೆ ಹೊಳಪು ನೀಡಲಿದೆ’ ಎನ್ನುತ್ತದೆ ಕಂಪೆನಿ.   ಬೆಲೆ ₹225.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry