‘ಮುನ್ನಾ ಮೈಕಲ್’ ಪೋಸ್ಟರ್ ಬಿಡುಗಡೆ

7

‘ಮುನ್ನಾ ಮೈಕಲ್’ ಪೋಸ್ಟರ್ ಬಿಡುಗಡೆ

Published:
Updated:
‘ಮುನ್ನಾ ಮೈಕಲ್’ ಪೋಸ್ಟರ್ ಬಿಡುಗಡೆ

ಟೈಗರ್‌ ಶ್ರಾಫ್ ಅಭಿನಯದ ‘ಮುನ್ನಾ ಮೈಕಲ್’ ಸಿನಿಮಾದ ಮೊದಲ ಪೋಸ್ಟರ್‌ ಬಿಡುಗಡೆಯಾಗಿದೆ. ಮೈಕಲ್‌ ಜಾಕ್ಸನ್‌ನಂತೆಯೇ ಈ ಪೋಸ್ಟರ್‌ನಲ್ಲಿ ಟೈಗರ್‌ ಶ್ರಾಫ್ ಕಾಣಿಸಿಕೊಂಡಿದ್ದಾರೆ.

ಪೋಸ್ಟರ್‌ನಲ್ಲಿ ನೃತ್ಯ ಸ್ಪರ್ಧೆಯಲ್ಲಿ ಜನಗಳ ಮಧ್ಯೆ ಸ್ಟೆಪ್‌ ಹಾಕುತ್ತಿರುವಂತೆ ಇದೆ. ತಮ್ಮ ಮೊದಲ ಲುಕ್‌ ಇರುವ  ಈ ಪೋಸ್ಟರ್‌ ಅನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದಾರೆ ಟೈಗರ್. ‘ಮೂನ್‌ ವಾಕಿಂಗ್ ಇನ್‌ ದ ಸ್ಟೆಪ್ಸ್‌ ಆಫ್ ಲೆಜೆಂಡ್ಸ್‌’ ಎಂದು ಬರೆದುಕೊಂಡಿದ್ದಾರೆ. (Moon walking in the steps of the legend! #MunnaMichaelPoster #MunnaMichael)

‘ಮುನ್ನಾ ಮೈಕಲ್’ ಸಿನಿಮಾದಲ್ಲಿ ಟೈಗರ್‌ ಅವರೊಂದಿಗೆ ನವಾಜುದ್ದೀನ್ ಸಿದ್ಧಿಕಿ, ನಿಧಿ ಅಗರ್ವಾಲ್ ಇದ್ದಾರೆ. ಸಬೀರ್ ಖಾನ್ ನಿರ್ದೇಶಿಸಿದ್ದಾರೆ.

ನೃತ್ಯಾಧರಿತ ಸಿನಿಮಾ ಎಂದ ಮೇಲೆ ಸ್ಪರ್ಧೆ ಇದ್ದೇ ಇರುತ್ತದೆ. ಇದರಲ್ಲಿ ಟೈಗರ್‌ ಶ್ರಾಫ್ ಬೀದಿ ನೃತ್ಯಗಾರ (ಸ್ಟ್ರೀಟ್‌ ಡ್ಯಾನ್ಸರ್‌). ಮೈಕಲ್‌ ಜಾಕ್ಸನ್‌ನ ದೊಡ್ಡ ಅಭಿಮಾನಿ. ಹಣಕ್ಕಾಗಿ ಮೈಕಲ್ ಜಾಕ್ಸನ್‌ನ ಹಾಡುಗಳನ್ನು ಹಾಕಿಕೊಂಡು ಬೀದಿಬೀದಿಯಲ್ಲಿ ನೃತ್ಯ ಮಾಡುತ್ತಿರುತ್ತಾರೆ ಮುನ್ನ (ಟೈಗರ್ ಶ್ರಾಫ್).

ಸಿನಿಮಾದ ಒಂದು ಹಾಡಿನಲ್ಲಿ ತಂದೆ ಜಾಕಿ ಶ್ರಾಫ್ ಹಾಗೂ ಮೈಕಲ್‌ ಜಾಕ್ಸನ್‌ ಅವರಿಗೆ ಗೌರವ ಸಲ್ಲಿಸಿದ್ದಾರೆ. ದೀರ್ಘ ಕಾಲದಿಂದ ಈ ಸಿನಿಮಾಗಾಗಿ ತಯಾರಿ ನಡೆಸುತ್ತಿದ್ದರು ಟೈಗರ್‌. ಅವರ ಇನ್‌ಸ್ಟಾಗ್ರಾಂ ಪೋಸ್ಟ್‌ಗಳಲ್ಲಿ ‘ಮುನ್ನಾ ಮೈಕಲ್‌’ ಸಿನಿಮಾಗಾಗಿ ಸಮರ ಕಲೆ ಕಲಿತ ವಿಡಿಯೊ, ಜಿಮ್‌ ಕಸರತ್ತಿನ ವಿಡಿಯೊ ಹಂಚಿಕೊಂಡಿದ್ದರು.

ಸಿನಿಮಾದ ಮತ್ತೊಂದು ವಿಶೇಷತೆ ಎಂದರೆ ನವಾಜುದ್ದೀನ್ ಸಿದ್ಧಿಕಿ ನೃತ್ಯ ಕಲಿತಿರುವುದು. ಟೈಗರ್‌ ಶ್ರಾಫ್ ಅವರೊಂದಿಗೆ ನೃತ್ಯ ಮಾಡಬೇಕು ಎಂಬ ಸಲುವಾಗಿ ನೃತ್ಯ ತರಗತಿಗಳಿಗೆ ಹೋಗಿ ತಮ್ಮ ನೃತ್ಯ ಕೌಶಲವನ್ನು ಹೆಚ್ಚಿಸಿಕೊಂಡಿದ್ದಾರೆ. ಸಿನಿಮಾ ಜುಲೈ 21ರಂದು ಬಿಡುಗಡೆಯಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry