ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಗಳಲ್ಲೂ ಕೇಂದ್ರೀಕೃತ ಬಿಸಿಯೂಟ ಪೂರೈಕೆ

Last Updated 1 ಜೂನ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಒಂದು ಅನುಕೂಲಕರ ಸ್ಥಳದಲ್ಲಿ ಸ್ಥಾಪಿಸಲಾಗುವ ಅಡುಗೆ ಮನೆಯಿಂದಲೇ ಸುತ್ತಲಿನ ಎಲ್ಲ ಶಾಲೆಗಳಿಗೆ ಬಿಸಿಯೂಟ ಪೂರೈಸುವುದಕ್ಕೆ ಮಾನವ ಸಂಪನ್ಮೂಲ ಸಚಿವಾಲಯ ಅನುಮತಿ ನೀಡಿದೆ.

ಬಿಸಿಯೂಟ ಯೋಜನೆ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ರಸ್ತೆ ಸಂಪರ್ಕ ಇರುವ ಶಾಲೆಗಳಿಗೆ ಈ ರೀತಿಯಲ್ಲಿ ಆಹಾರ ಪೂರೈಸಲು ನಿರ್ಧರಿಸಲಾಗಿದೆ.
2015ರಲ್ಲಿ ನಿಯಮಗಳಿಗೆ ತಿದ್ದುಪಡಿ ತಂದು ನಗರ ಪ್ರದೇಶಗಳ ಶಾಲೆಗಳಿಗೆ ಇಂತಹ ಕೇಂದ್ರೀಕೃತ ಅಡುಗೆ ಮನೆಗಳಿಂದ ಬಿಸಿಯೂಟ ಪೂರೈಸುವುದಕ್ಕೆ ಅವಕಾಶ ಒದಗಿಸಲಾಗಿತ್ತು.

ಬಿಸಿಯೂಟ ಯೋಜನೆಯ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯ ಮಾರ್ಗದರ್ಶಿ ಸೂತ್ರಗಳ ಪ್ರಕಾರ, ಊಟ ತಯಾರಿ ಮತ್ತು ಬಡಿಸುವುದರ ಉಸ್ತುವಾರಿಗೆ ಒಬ್ಬ ಶಿಕ್ಷಕರನ್ನು ನಿಯೋಜಿಸಬೇಕು. ಹೊಸ ವ್ಯವಸ್ಥೆ ಜಾರಿಗೆ ಬಂದರೆ ಶಿಕ್ಷಕರು ಬೋಧನೆಯತ್ತ ಹೆಚ್ಚಿನ ಗಮನ ಹರಿಸುವುದು ಸಾಧ್ಯವಾಗುತ್ತದೆ ಎಂದು ಸಚಿವಾಲಯದ ಮೂಲಗಳು ಹೇಳಿವೆ.

ಹೊಸ ನಿಯಮದಿಂದಾಗಿಬಿಸಿಯೂಟಕ್ಕಾಗಿ ಆರಂಭಿಸಲಾಗಿರುವ ಅಡುಗೆ ಮನೆ ಮತ್ತು ಇತರ ಸೌಲಭ್ಯಗಳನ್ನು ರಾಜ್ಯ ಸರ್ಕಾರ ರದ್ದುಪಡಿಸಬಹುದಾಗಿದೆ. ಹಾಗೆಯೇ ಇಲ್ಲಿ ನಿಯೋಜಿಸಲಾಗಿರುವ ಅಡುಗೆಯವರು ಮತ್ತು ಸಹಾಯಕರ ಸೇವೆಯ ಅಗತ್ಯವೂ ಇರುವುದಿಲ್ಲ.

ಇವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಪರಿಶಿಷ್ಟ ಜಾತಿ, ಪಂಗಡಗಳಿಗೆ ಸೇರಿದವರು. ತಮ್ಮ ಸಂಭಾವನೆಯನ್ನು ತಿಂಗಳಿಗೆ ₹ 2,000ಕ್ಕೆ ಏರಿಸಬೇಕು ಎಂದು ಇವರು ಕೆಲವು ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ.

ಕರ್ನಾಟಕ, ಕೇರಳ ಮತ್ತು ತಮಿಳುನಾಡು ಸೇರಿ 13 ರಾಜ್ಯಗಳು ಸಂಭಾವನೆಯನ್ನು ಹೆಚ್ಚಿಸಿವೆ. ಆದರೆ ಕೇಂದ್ರ ಸರ್ಕಾರ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಮೇ 16ರಿಂದ ಹೊಸ ನಿಯಮ ಜಾರಿಗೆ ಬಂದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬಿಸಿಯೂಟ ಪೂರೈಕೆಗೆ ಎನ್‌ಜಿಒಗಳು ಮತ್ತು ಸೇವಾ ಸಂಸ್ಥೆಗಳಿಂದ ಒಡಿಶಾ ಸರ್ಕಾರ ಈಗಾಗಲೇ ಅರ್ಜಿ ಆಹ್ವಾನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT