ಹರಿಯಾಣ, ದೆಹಲಿಯಲ್ಲಿ ಲಘು ಭೂಕಂಪ

7

ಹರಿಯಾಣ, ದೆಹಲಿಯಲ್ಲಿ ಲಘು ಭೂಕಂಪ

Published:
Updated:
ಹರಿಯಾಣ, ದೆಹಲಿಯಲ್ಲಿ ಲಘು ಭೂಕಂಪ

ನವದೆಹಲಿ:  ಹರಿಯಾಣ ಮತ್ತು ನವದೆಹಲಿಯ ಸುತ್ತ ಮುತ್ತ ಶುಕ್ರವಾರ ನಸುಕಿನ 4.30ರ ಸುಮಾರಿಗೆ ಭೂಕಂಪ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ ಭೂಕಂಪದ  ತೀವ್ರತೆ 4.7ರಷ್ಟು ದಾಖಲಾಗಿದೆ.

ದೆಹಲಿಯಲ್ಲಿ  30 ಸೆಕೆಂಡ್‌ಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ.  ಯಾವುದೇ ಪ್ರಾಣಹಾನಿ ಮತ್ತು ಆಸ್ತಿ ಪಾಸ್ತಿ  ನಷ್ಟವಾದ ಬಗ್ಗೆ ವರದಿಯಾಗಿಲ್ಲ.

ಹರಿಯಾಣದ  ರೊಹ್ಟಕ್‌ ನಲ್ಲಿ  ಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪ ಅಧ್ಯಯನ ಕೇಂದ್ರ ಮಾಹಿತಿ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry