ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಚಂದ್ರ ಗುಹಾ ರಾಜೀನಾಮೆ ಪತ್ರದಲ್ಲಿ ಕೊಹ್ಲಿ, ದ್ರಾವಿಡ್‌, ದೋನಿ ಬಗ್ಗೆ ಅಸಮಾಧಾನ

Last Updated 2 ಜೂನ್ 2017, 10:11 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ (ಬಿಸಿಸಿಐ) ನಿವೃತ್ತ ನ್ಯಾಯಮೂರ್ತಿ ಆರ್‌.ಎಂ. ಲೋಧಾ ಸಮಿತಿಯ ಶಿಫಾರಸುಗಳ ಜಾರಿಗೆ ಸುಪ್ರೀಂ ಕೋರ್ಟ್‌ ನೇಮಕ ಮಾಡಿದ್ದ ಆಡಳಿತಾಧಿಕಾರಿಗಳ ಸಮಿತಿಗೆ(ಸಿಒಎ) ಇತಿಹಾಸಕಾರ ರಾಮಚಂದ್ರ ಗುಹಾ ಅವರು ಗುರುವಾರ ರಾಜೀನಾಮೆ ನೀಡಿದರು.

ಶುಕ್ರವಾರ ಸಿಒಎ ಮುಖ್ಯಸ್ಥ ವಿನೋದ್‌ ರೈ ಅವರಿಗೆ ಏಳು ಪುಟಗಳ ಪತ್ರ ಬರೆದಿರುವ ರಾಮಚಂದ್ರ ಗುಹಾ ಅವರು ತಾವು ರಾಜೀನಾಮೆ ನೀಡಿರುವುದಕ್ಕೆ ಕಾರಣಗಳನ್ನು ಉಲ್ಲೇಖಿಸಿದ್ದಾರೆ.

‘ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್‌.ದೋನಿ ಅವರು ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕವೂ ಬಿಸಿಸಿಐ ದೋನಿ ಅವರಿಗೆ ‘ಎ’ ಶ್ರೇಣಿ ಆದ್ಯತೆ ಹಾಗೂ ಇನ್ನಿತರ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತಿದೆ’ ಎನ್ನುವುದು ರಾಜೀನಾಮೆ ಕಾರಣಗಳಲ್ಲಿ ಒಂದಾಗಿದೆ.

‘19 ವರ್ಷದೊಳಗಿನ ಕ್ರಿಕೆಟ್‌ ಆಟಗಾರರಿಗೆ ತರಬೇತಿದಾರ ಹುದ್ದೆಯನ್ನು ರಾಹುಲ್‌ ದ್ರಾವಿಡ್ ಅವರಿಗೆ ವಹಿಸಲಾಗಿದೆ. ಆದರೆ, ಆದರ ಬಗ್ಗೆ ಗಮನ ಹರಿಸುವ ಬದಲು ಐಪಿಲ್‌ ಟಿ–20 ಟೂರ್ನಿಯತ್ತ(ಡೆಲ್ಲಿ ಡೆರ್‌ಡೆವಿಲ್ಸ್‌) ಹೆಚ್ಚು ಆಸಕ್ತಿ ತೋರಿದ್ದರು’ ಎಂದಿದ್ದಾರೆ.

‘ಆಟಗಾರರು, ಮಾಜಿ ಆಟಗಾರರು ಹಾಗೂ ಕೋಚ್‌ ಆಯ್ಕೆ ವಿಚಾರದಲ್ಲಿ ಹಿತಾಸಕ್ತಿ ಸಂಘರ್ಷ ನಡೆಯುತ್ತಿದ್ದು, ಬಗೆಹರಿಸುವಲ್ಲಿ ಬಿಸಿಸಿಐ ವಿಫಲವಾಗಿದೆ’ ಎಂದಿದ್ದಾರೆ.

ಟೀಂ ಇಂಡಿಯಾದ ಮಾಜಿ ಆಟಗಾರ ಸುನಿಲ್‌ ಗವಾಸ್ಕರ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ರಾಮಚಂದ್ರ ಗುಹಾ ಅವರು, ‘ವೀಕ್ಷಕ ವಿವರಣೆಗಾರರಾಗಿರುವ ಸುನೀಲ್‌ ಗವಾಸ್ಕರ್‌ ಅವರನ್ನು ಬಿಸಿಸಿಐ ಪ್ಲೇಯರ್‌ ಮ್ಯಾನೇಜ್‌ಮೆಂಟ್‌ನ ಮುಖಸ್ಥರನ್ನಾಗಿ ನೇಮಕ ಮಾಡಿರುವುದು ಸರಿಯಲ್ಲ’ ಎಂದಿದ್ದಾರೆ.

ರಾಮಚಂದ್ರ ಗುಹಾ ಅವರ ರಾಜೀನಾಮೆ ಸಲ್ಲಿಕೆಗೆ ಕಾರಣವಾಗಿರುವ ಇತರ ಅಂಶಗಳು:
* ಸದ್ಯ ಟೀಂ ಇಂಡಿಯಾದ ಕೋಚ್‌ ಆಗಿ ಅನಿಲ್‌ ಕುಂಬ್ಳೆ ಕಾರ್ಯ ನಿರ್ವಹಿಸುತ್ತಿದ್ದರೂ, ಬಿಸಿಸಿಐ ಹೊಸ ಕೋಚ್‌ ನೇಮಕಕ್ಕೆ ಸಂದರ್ಶನ ನಡೆಸುತ್ತಿರುವುದು.
* ವಿದೇಶಿ ಆಟಗಾರರಿಗೆ ಹೋಲಿಸಿದರೆ ದೇಶಿ ಆಟಗಾರರಿಗೆ ಕಡಿಮೆ ವೇತನ.
* ಅನರ್ಹ ಅಧಿಕಾರಿಗಳು ಬಿಸಿಸಿಐ ಸಭೆಗಳಲ್ಲಿ ಭಾಗಿಯಾಗುತ್ತಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT