ಪೃಥ್ವಿ–2 ಕ್ಷಿಪಣಿ ಪರೀಕ್ಷೆ ಯಶಸ್ವಿ

7

ಪೃಥ್ವಿ–2 ಕ್ಷಿಪಣಿ ಪರೀಕ್ಷೆ ಯಶಸ್ವಿ

Published:
Updated:
ಪೃಥ್ವಿ–2 ಕ್ಷಿಪಣಿ ಪರೀಕ್ಷೆ ಯಶಸ್ವಿ

ಬಾಲಸೋರ್: ಸ್ವದೇಶಿ ನಿರ್ಮಿತ, ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯದ ಪೃಥ್ವಿ –2 ಕ್ಷಿಪಣಿಯನ್ನು ಒಡಿಶಾದ ಸೇನಾ ನೆಲೆಯಿಂದ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.

ಶುಕ್ರವಾರ ಬೆಳಿಗ್ಗೆ 9.50ಕ್ಕೆ ಚಂಡಿಪುರದ ಸಮಗ್ರ ಪರೀಕ್ಷಾ ವಲಯದಲ್ಲಿರುವ (ಐಟಿಆರ್) ಉಡಾವಣಾ ಸಂಕೀರ್ಣ 3ರಿಂದ 350 ಕಿ.ಮೀ. ದೂರ ಭೂ ಮೇಲ್ಮೈನಿಂದ ಮೇಲ್ಮೈಗೆ ಕ್ರಮಿಸಬಲ್ಲ ಈ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದು ಸೇನೆಯ ಮೂಲಗಳು ತಿಳಿಸಿವೆ.

ಅತ್ಯಾಧುನಿಕ ಕ್ಷಿಪಣಿಯ ಉಡಾವಣೆ ಯಶಸ್ವಿಯಾಯಿತು ಮತ್ತು ಈ ಕ್ಷಿಪಣಿಯ ಉಡಾವಣೆ ಎಲ್ಲ ಉದ್ದೇಶಗಳನ್ನು ಯಶಸ್ವಿಯಾಗಿ ಪೂರೈಸಿದೆ ಎಂದು ಸೇನೆ ಹೇಳಿದೆ.

ಪೃಥ್ವಿ- 2 ಕ್ಷಿಪಣಿಯು 500 ಕೆ.ಜಿ.ಯಿಂದ 1,000 ಕೆ.ಜಿ. ತೂಕವನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ ಮತ್ತು ದ್ರವ ಇಂಧನದ ಅವಳಿ ಎಂಜಿನ್‌ಗಳನ್ನು ಹೊಂದಿದೆ. ಇದು ನಿಖರತೆಯೊಂದಿಗೆ ತನ್ನ ಗುರಿಯನ್ನು ತಲುಪಿ ಹೊಡೆಯ ಬಲ್ಲ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ.

ಡಿಆರ್‌ಡಿಒ ವಿಜ್ಞಾನಿಗಳ ಮೇಲ್ವಿಚಾರಣೆಯಲ್ಲಿ ಪರೀಕ್ಷಾರ್ಥ ಉಡಾವಣೆ ನಡೆಸಲಾಯಿತು ಎಂದು ಡಿಆರ್‌ಡಿಒನ ವಿಜ್ಞಾನಿಗಳು ಹೇಳಿದ್ದಾರೆ.

ಇಂಟಿಗ್ರೇಟೆಡ್‌ ಗೈಡೆಡ್‌ ಡೆವಲಪ್‌ಮೆಂಟ್‌ ಪ್ರೋಗ್ರಾಮ್‌ ಅಡಿ ಒಂಬತ್ತು ಮೀಟರ್‌ ಎತ್ತರದ ಪೃಥ್ವಿ–2 ಡಿಆರ್‌ಡಿಒ ಅಭಿವೃದ್ಧಿಪಡಿಸಿದ ದ್ರವ ಇಂಧನದ ಮೊದಲ ಕ್ಷಿಪಣಿ ಇದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry