ಬೆಟ್ಟಗಳ ಮಧ್ಯೆ ಮನೆಯ ಮಾಡಿ...

7

ಬೆಟ್ಟಗಳ ಮಧ್ಯೆ ಮನೆಯ ಮಾಡಿ...

Published:
Updated:
ಬೆಟ್ಟಗಳ ಮಧ್ಯೆ ಮನೆಯ ಮಾಡಿ...

ಬೆಟ್ಟಗಳ ಮಧ್ಯೆ ಮನೆಯ ಮಾಡಿದರೆ ಹೇಗಿರುತ್ತದೆ? ಇಂಥದ್ದೊಂದು ಪ್ರಯೋಗ ಸ್ವೀಡನ್‌ನಲ್ಲಿ ನಡೆದಿದೆ. 50 ಚದರ ಮೀಟರ್‌ ಇರುವ ಈ ಮನೆಯಲ್ಲಿ ಅಡುಗೆ ಕೋಣೆ ಸೇರಿ ಎರಡು ಕೋಣೆಗಳಿವೆ. ಮರದಿಂದ ಮಾಡಿರುವ ಈ ಮನೆಯನ್ನು ‘ನೆಸ್ಟಿಕ್‌ ಬಾಕ್ಸ್‌ ಹೌಸ್‌’ ಎಂದು ಕರೆಯಲಾಗುತ್ತದೆ. ವಾಸ್ತುಶಿಲ್ಪಿ ಎಲಿಸ್ಟಾಬೆಟಾ ಗ್ಯಾಬ್ರಿಯೆಲಾ ಮತ್ತು ಪೊನ್ಟಾಸ್‌ ಈ ವಿನ್ಯಾಸದ ರೂವಾರಿ.

*ವಿದ್ಯುತ್‌ ಚಾಲಿತ ಹಡಗು

ಡೀಸೆಲ್‌, ಎಂಜಿನ್‌ಗಳ ಬಳಕೆಯಿಂದ ಪರಿಸರ ಮಾಲಿನ್ಯ ಹೆಚ್ಚುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ನಾರ್ವೆ ಮೂಲದ ಯರಾ ಸಂಸ್ಥೆ ಮಹತ್ವದ ಉಪಾಯ  ಕಂಡುಕೊಂಡಿದೆ. ಅದುವೇ ವಿದ್ಯುತ್‌ ಚಾಲಿತ ಹಡಗು. 2020ಕ್ಕೆ ಇದರ ಪಯಣ ಆರಂಭವಾಗಲಿದೆ. ಈ ತಂತ್ರಜ್ಞಾನ ಅಭಿವೃದ್ಧಿಯಾದರೆ  ಒಂದು ವರ್ಷದಲ್ಲಿ 678 ಟನ್‌ ಕಾರ್ಬನ್‌ ಡೈಆಕ್ಸೈಡ್‌ ಪ್ರಮಾಣ ತಗ್ಗುವ ನಿರೀಕ್ಷೆಯಿದೆ. 

*

ಸುರಂಗ ಮಾರ್ಗದ ಬಸ್ಸು

ಆಟೊಮೊಬೈಲ್‌ ಕ್ಷೇತ್ರದಲ್ಲಿ ಹೊಸ  ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಅಮೆರಿಕ ಮೂಲದ ಎಲೊನ್‌ ಮಸ್ಕ್‌ ಬೋರಿಂಗ್‌ ಕಂಪೆನಿ ಇದೀಗ ಸುರಂಗ ಮಾರ್ಗಗಳಲ್ಲಿ ಸಂಚರಿಸುವ ಬಸ್ಸುಗಳನ್ನು ತಯಾರಿಸುವ ಯೋಜನೆ ರೂಪಿಸಿದೆ. ಬಸ್‌ಗಳು ಹೇಗಿವೆ ಗೊತ್ತೆ? ಚಿತ್ರ ನೋಡಿ ಗೊತ್ತಾಗುತ್ತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry