ಕಲ್ಕಿ ಸೌಂದರ್ಯ ರಹಸ್ಯ

7

ಕಲ್ಕಿ ಸೌಂದರ್ಯ ರಹಸ್ಯ

Published:
Updated:
ಕಲ್ಕಿ ಸೌಂದರ್ಯ ರಹಸ್ಯ

ಪ್ರತಿಭಾವಂತ ನಟಿ ಎನಿಸಿಕೊಂಡಿರುವ ಕಲ್ಕಿ ಕೊಯ್ಲಿನ್‌ ಮೊದಲ ನೋಟಕ್ಕೆ ಗಮನ ಸೆಳೆಯುವುದು ಹೊಳಪಿನ ಚರ್ಮದಿಂದಾಗಿ. ಹೆಚ್ಚು ಮೇಕಪ್‌ ಮಾಡಿಕೊಳ್ಳದಿದ್ದರೂ ಕಲ್ಕಿ ಸುಂದರವಾಗಿಯೇ ಕಾಣುತ್ತಾರೆ.

ಮುಖದ ಕಾಂತಿಗೆ: ಬೆಳಿಗ್ಗೆ ಎದ್ದ ಕೂಡಲೇ ತಣ್ಣೀರಿನಿಂದ ಮುಖ ತೊಳೆಯುತ್ತಾರೆ. ಇವರದು ಒಣ ಚರ್ಮ. ಹಾಗಾಗಿ ಹೈಡ್ರೇಟಿಂಗ್‌ ಕ್ರೀಮ್‌ ಹಚ್ಚುತ್ತಾರೆ. ಚರ್ಮದ ಕಾಂತಿ ಇದರಿಂದ ಹೆಚ್ಚುತ್ತದೆ.

ಸನ್‌ಬರ್ನ್‌ನಿಂದ ತಪ್ಪಿಸಿಕೊಳ್ಳಲು ಇವರು ಪ್ರತಿದಿನ ಸನ್‌ಸ್ಕ್ರೀನ್‌ ಲೋಶನ್‌ ಹಚ್ಚಿಕೊಳ್ಳುತ್ತಾರೆ. ಸನ್‌ಬರ್ನ್‌ಗೆ ಕೊಬ್ಬರಿ ಎಣ್ಣೆಯೇ ಮದ್ದು.

ಶೂಟಿಂಗ್‌ ಮುಗಿದ ತಕ್ಷಣ ಕ್ಲೆನ್ಸರ್‌ ಮೂಲಕ ಮೇಕಪ್‌ ತೆಗೆಯುತ್ತಾರೆ. ಟೀ ಟ್ರೀ  ಆಯಿಲ್‌ ಹಚ್ಚುತ್ತಾರೆ. ರಾತ್ರಿ ಹೊತ್ತು ಆ್ಯಂಟಿ ಏಜಿಂಗ್‌ ಕ್ರೀಮ್‌ ಬಳಸುತ್ತಾರೆ.

ಕೂದಲಿನ ಆರೈಕೆ: ಪ್ರತಿದಿನ ಸ್ವಿಮಿಂಗ್‌ ಮಾಡುವುದರಿಂದ ಆ್ಯಂಟಿ ಕ್ಲೋರಿನ್‌ ಶ್ಯಾಂಪು ಬಳಸುತ್ತಾರೆ. ವಾರಕ್ಕೊಮ್ಮೆ ಮೊರಾಕನ್‌ ಆಯಿಲ್‌ ಹಚ್ಚಿ ಮಸಾಜ್‌ ಮಾಡಿಕೊಳ್ಳುತ್ತಾರೆ.

ದೇಹದ ಸೌಂದರ್ಯಕ್ಕೆ: ಪ್ರತಿದಿನ ಸ್ವಿಮಿಂಗ್‌ ಮಾಡುತ್ತಾರೆ. ವಾಲಿಬಾಲ್‌, ಫುಟ್‌ಬಾಲ್ ಆಡುವ ಮೂಲಕ ಕೊಬ್ಬು ಕರಗಿಸುತ್ತಾರೆ. ಜಾಗಿಂಗ್‌, ಡಾನ್ಸ್‌, ಯೋಗ ಇಷ್ಟವಂತೆ.

ಆಹಾರ: ಬೆಳಿಗ್ಗೆ ಉಪಹಾರಕ್ಕೆ ಜೇನುತುಪ್ಪ, ಮೊಸರು ಬೆರೆಸಿದ ಓಟ್ಸ್‌, ಮಧ್ಯಾಹ್ನ ಅನ್ನ, ಕೋಳಿ ಖಾದ್ಯ, ರಾಜ್ಮ ಸೇವಿಸುತ್ತಾರೆ. ಜೊತೆಗೆ ಸ್ವಲ್ಪ ಸಿಹಿ ತಿನಿಸು ತಿನ್ನುತ್ತಾರೆ. ರಾತ್ರಿ ರೋಟಿ, ತರಕಾರಿ ಸೇವಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry