ಒಮುಂಗ್‌ ಕುಮಾರ್‌ ನಿರ್ದೇಶನದ ಚಿತ್ರಕ್ಕೆ ಕರೀನಾ ಕಪೂರ್‌ ಸಿದ್ಧತೆ? ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ‘ಬೆಬೊ’

7

ಒಮುಂಗ್‌ ಕುಮಾರ್‌ ನಿರ್ದೇಶನದ ಚಿತ್ರಕ್ಕೆ ಕರೀನಾ ಕಪೂರ್‌ ಸಿದ್ಧತೆ? ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ‘ಬೆಬೊ’

Published:
Updated:
ಒಮುಂಗ್‌ ಕುಮಾರ್‌ ನಿರ್ದೇಶನದ ಚಿತ್ರಕ್ಕೆ ಕರೀನಾ ಕಪೂರ್‌ ಸಿದ್ಧತೆ? ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ‘ಬೆಬೊ’

ಮುಂಬೈ: ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಅಭಿನಯಕ್ಕೆ ಬ್ರೇಕ್‌ ನೀಡಿದ್ದ ಬಾಲಿವುಡ್‌ ಬೆಡಗಿ ಕರೀನಾ ಕಪೂರ್‌ ಹೊಸ ಚಿತ್ರದಲ್ಲಿ ನಟಿಸಲು ತಯಾರಿ ನಡೆಸಿದ್ದಾರಂತೆ.

ಸಾಧಕರ ಜೀವನಾಧಾರಿತ ಚಿತ್ರಗಳ ನಿರ್ದೇಶನದಲ್ಲಿ ಸೈ ಎನಿಸಿರುವ ಒಮುಂಗ್‌ ಕುಮಾರ್‌ ಅವರ ನಿರ್ದೇಶನದಲ್ಲಿ ಕರೀನಾ ನಟನೆಯ ಹೊಸ ಚಿತ್ರ ಮೂಡಿಬರಲಿದೆ ಎಂಬ ಸುದ್ದಿ ಬಾಲಿವುಡ್‌ನಲ್ಲಿ ಹರಿದಾಡುತ್ತಿದೆ.

ಕಳೆದ ಡಿಸೆಂಬರ್‌ನಲ್ಲಿ ತೈಮೂರ್‌ಗೆ ಜನ್ಮ ನೀಡಿದ್ದ ಕರೀನಾ ಮಗುವಿನ ಲಾಲನೆ – ಪಾಲನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇದೀಗ ಮತ್ತೆ ನಟನೆಯತ್ತ ಮುಖ ಮಾಡಲು ಮುಂದಾಗಿರುವ ಕರೀನಾ ಇದಕ್ಕಾಗಿ ಜಿಮ್‌ನಲ್ಲಿ ವರ್ಕೌಟ್‌ ಶುರು ಮಾಡಿದ್ದಾರಂತೆ.‘ಸರಬ್ಜಿತ್‌’, ‘ಮೇರ್‌ ಕೋಮ್‌’ ನಂತಹ ಸಾಧಕರ ಜೀವನಾಧಾರಿತ ಚಿತ್ರಗಳನ್ನು ಒಮುಂಗ್‌ ಕುಮಾರ್‌ ನಿರ್ದೇಶಿಸಿದ್ದಾರೆ. ಸದ್ಯ ಸಂಜಯ್‌ ದತ್‌ ನಟನೆಯ ‘ಭೂಮಿ’ ಚಿತ್ರದ ಚಿತ್ರೀಕರಣವನ್ನು ಅವರು ಮುಗಿಸಿದ್ದಾರೆ.

ಯಾರ ಜೀವನಾಧಾರಿತ ಚಿತ್ರವನ್ನು ಒಮುಂಗ್‌ ಕುಮಾರ್‌ ನಿರ್ದೇಶಿಸಲಿದ್ದಾರೆ, ಕರೀನಾ ಯಾವ ಸಾಧಕರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಇನ್ನೂ ಬಹಿರಂಗಗೊಂಡಿಲ್ಲ.

ಕತೆಯ ಕೆಲಸ ಪೂರ್ಣಗೊಂಡ ನಂತರ ಒಮುಂಗ್‌ ಮತ್ತು ಕರೀನಾ ಚಿತ್ರದ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂಬ ಮಾತುಗಳು ಬಾಲಿವುಡ್‌ನಲ್ಲಿ ಹರಿದಾಡುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry