ಗೇಟ್‌ಗೆ ಸಿಲುಕಿ ಜಿಂಕೆ ಸಾವು

7

ಗೇಟ್‌ಗೆ ಸಿಲುಕಿ ಜಿಂಕೆ ಸಾವು

Published:
Updated:
ಗೇಟ್‌ಗೆ ಸಿಲುಕಿ ಜಿಂಕೆ ಸಾವು

ಬೆಳ್ತಂಗಡಿ: ಬೆಳ್ತಂಗಡಿ ಅರಣ್ಯ ಇಲಾ ಖೆಯ ವ್ಯಾಪ್ತಿಯ ಬಂಗಾಡಿ ಸಮೀಪ ಬೆದ್ರಬೆಟ್ಟು ಎಂಬಲ್ಲಿ ಜಿಂಕೆಯೊಂದು ಕಬ್ಬಿಣದ ಗೇಟ್‌ಗೆ ಸಿಲುಕಿ ಗುರುವಾರ ಮೃತಪಟ್ಟಿದೆ.ಬೆದ್ರಬೆಟ್ಟುವಿನಲ್ಲಿ ಖಾಸಗಿಯವರ ತೋಟದ ಕಾಂಪೌಂಡ್‌ನ ಗೇಟಿಗೆ ಕಾಡಿನಿಂದ ಬಂದ ಜಿಂಕೆಯೊಂದು ಗುರುವಾರ ಮಧ್ಯಾಹ್ನ ಸಿಲುಕಿಕೊಂಡಿತ್ತು.

ಕುತ್ತಿಗೆ ಕಬ್ಬಿಣದ ಗೇಟ್‌ಗೆ ಸಿಲುಕಿಕೊಂಡ ಕಾರಣ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳೀಯರು ಇದನ್ನು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಇಲಾಖೆಯವರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ಅಧಿಕಾರಿ ಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry