ಪ್ರಿಯಾಂಕಾ ಚೋಪ್ರಾ ಬಟ್ಟೆ ನೋಡಿ ಅವರನ್ನು ಅಳೆಯಬೇಡಿ: ಪಿಗ್ಗಿ ಬೆಂಬಲಕ್ಕೆ ನಿಂತ ಸನ್ನಿ

7

ಪ್ರಿಯಾಂಕಾ ಚೋಪ್ರಾ ಬಟ್ಟೆ ನೋಡಿ ಅವರನ್ನು ಅಳೆಯಬೇಡಿ: ಪಿಗ್ಗಿ ಬೆಂಬಲಕ್ಕೆ ನಿಂತ ಸನ್ನಿ

Published:
Updated:
ಪ್ರಿಯಾಂಕಾ ಚೋಪ್ರಾ ಬಟ್ಟೆ ನೋಡಿ ಅವರನ್ನು ಅಳೆಯಬೇಡಿ: ಪಿಗ್ಗಿ ಬೆಂಬಲಕ್ಕೆ ನಿಂತ ಸನ್ನಿ

ಮುಂಬೈ: ‘ಪ್ರಿಯಾಂಕಾ ಚೋಪ್ರಾ ಧರಿಸಿದ್ದ ಬಟ್ಟೆಯನ್ನು ನೋಡಿ ಅವರನ್ನು ಅಳೆಯಬೇಡಿ’ ಎಂದು ನಟಿ ಸನ್ನಿ ಲಿಯೋನ್‌ ಹೇಳಿದ್ದಾರೆ.

‘ಪ್ರಿಯಾಂಕಾ ಸಮಾಜಮುಖಿಯಾಗಿ ಹಲವು ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅದನ್ನೂ ಜನ ಗಮನಿಸಬೇಕು. ಕೇವಲ ಬಟ್ಟೆಯನ್ನು ನೋಡಿ ಅವರ ಬಗ್ಗೆ ತೀರ್ಮಾನಕ್ಕೆ ಬರುವುದು ಸರಿಯಲ್ಲ’ ಎಂದು ಸನ್ನಿ ತಿಳಿಸಿದ್ದಾರೆ.

ಬರ್ಲಿನ್‌ ಪ್ರವಾಸದಲ್ಲಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ಭೇಟಿಯಾಗಿದ್ದರು. ಈ ಭೇಟಿಯ ವೇಳೆ ಪ್ರಿಯಾಂಕಾ ಕಾಲುಗಳು ಕಾಣುವಂಥ ಉಡುಗೆಯನ್ನು ಧರಿಸಿದ್ದ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು.‘ಭಾರತದ ಪ್ರಧಾನಿಮಂತ್ರಿಯವರನ್ನು ವಿದೇಶದಲ್ಲಿ ಭೇಟಿ ಮಾಡಲು ಹೋಗುವ ವೇಳೆ ಪ್ರಿಯಾಂಕಾ ಅಷ್ಟು ಚಿಕ್ಕ ಉಡುಪು ಧರಿಸಿದ್ದು ಸರಿಯಲ್ಲ’ ಎಂದು ಹಲವರು ಟ್ವೀಟ್‌ ಮಾಡಿದ್ದರು.

ಮೋದಿ ಭೇಟಿ ವೇಳೆ ಪ್ರಿಯಾಂಕಾ ಕಾಲುಗಳು ಕಾಣುವಂಥ ಬಟ್ಟೆ ತೊಟ್ಟಿದ್ದರು. ರಾಷ್ಟ್ರೀಯ ನಾಯಕರನ್ನು ಭೇಟಿಯಾಗುವಾಗ ಪ್ರಿಯಾಂಕಾ ಹೀಗೆ ಕಾಲು ಕಾಣುವಂಥ ಬಟ್ಟೆ ತೊಡಬಾರದಿತ್ತು ಎನ್ನುವುದು ನೆಟಿಜನ್ನರ ಅಭಿಪ್ರಾಯವಾಗಿತ್ತು.

ಪ್ರಿಯಾಂಕಾ ತೊಟ್ಟಿದ್ದ ಕೆನೆ ಬಣ್ಣದ ಈ ಉಡುಗೆಯ ವಿನ್ಯಾಸ ಮಾಡಿದ್ದವರು ಮಾರ್ಕ್ ಜೇಕಬ್ಸ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry