ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಲ್ಪವನದಲ್ಲಿ ವರ್ಣಲೋಕ...

Last Updated 2 ಜೂನ್ 2017, 19:30 IST
ಅಕ್ಷರ ಗಾತ್ರ

ಕಲಾಪ್ರೇಮಿಗಳ ಸಮ್ಮುಖದಲ್ಲಿ ಖ್ಯಾತ ಕಲಾವಿದರ ಚಿತ್ರಸಂತೆ. ಕ್ಯಾನ್ವಾಸ್‌ ಮೇಲೆ ಮೂಡುವ ಬಣ್ಣಗಳ ಚಿತ್ತಾರವನ್ನು ಬೆರಗುಗಣ್ಣುಗಳಲ್ಲಿ ತುಂಬಿಕೊಳ್ಳುವ ಸದವಕಾಶ. ಇದಕ್ಕೆ ಭಾನುವಾರ (ಜೂನ್‌ 4) ಸಾಕ್ಷಿಯಾಗಲಿದೆ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ಶಿಲ್ಪವನ.

ಕರ್ನಾಟಕದ ವಿವಿಧ ಭಾಗಗಳಲ್ಲಿನ ಖ್ಯಾತ ಕಲಾವಿದರನ್ನು ಒಟ್ಟು ಸೇರಿಸಿ ‘ಲೆಟ್ಸ್‌ ಡ್ರಾ ಟುಗೆದರ್‌’ ಕಾರ್ಯಕ್ರಮವನ್ನು ಆರ್ಟ್‌ ಪಾರ್ಕ್‌ ಬೆಂಗಳೂರು ಆಯೋಜಿಸಿದೆ.

ಈ ಸಂಸ್ಥೆ ಕಳೆದ ಮೂರೂವರೆ ವರ್ಷದಿಂದ ಪ್ರತಿ ತಿಂಗಳ ಮೊದಲ ಭಾನುವಾರ ‘ಆರ್ಟ್‌ಪಾರ್ಕ್‌’ ಎನ್ನುವ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದೆ. ಪೇಂಟಿಂಗ್‌ ಬಗೆಗೆ ಅರಿವಿಲ್ಲದಿದ್ದರೂ ಅನೇಕರು ಆಸಕ್ತಿಯಿಂದ ಈ ಕಾರ್ಯಕ್ರಮವನ್ನು ನೋಡಿ, ಮೆಚ್ಚಿ ತಾವೂ ಕಲಾಮಾರ್ಗವನ್ನು ಹಿಡಿದ ಉದಾಹರಣೆಗಳಿವೆ.

‘ನಗರದ ಜಂಜಡದ ಬದುಕಿನಲ್ಲಿ ಎಲ್ಲರೂ ಒತ್ತಡದ ಬದುಕು ನಿರ್ವಹಿಸುತ್ತಿದ್ದಾರೆ. ಚಿತ್ರ ನೋಡುವುದು, ಬಿಡಿಸುವುದರಿಂದ ಮನಸ್ಸಿಗೆ ಸಾಕಷ್ಟು ನೆಮ್ಮದಿ ಸಿಗುತ್ತದೆ. ಈ ಬಾರಿ ರಾಜ್ಯದ ಖ್ಯಾತ ಕಲಾವಿದರು ಭಾಗವಹಿಸುತ್ತಿದ್ದು, ಅವರ ಚಿತ್ರರಚನಾ ಕೌಶಲವನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ’ ಎಂದು ಮಾಹಿತಿ ನೀಡುತ್ತಾರೆ ಆರ್ಟ್‌ಪಾರ್ಕ್‌ ಕಮಿಟಿ ಅಧ್ಯಕ್ಷ ಶಿವಾನಂದ ಬಿ.

ಅಂದಹಾಗೆ ಈ ಚಿತ್ರಕಲಾ ಕಾರ್ಯಕ್ರಮದಲ್ಲಿ ಎಸ್‌.ಜಿ. ವಾಸುದೇವ, ಜೆ.ಎಂ.ಎಸ್‌. ಮಣಿ, ಜಿ. ಜೈಕುಮಾರ, ಎಸ್‌.ಕೃಷ್ಣಪ್ಪ, ಜಸ್ಸು ರಾವಲ್‌, ಎ.ಎಂ. ಪ್ರಕಾಶ್‌, ಬಿ.ಶಿವಾನಂದ , ಆರ್‌. ರಾಜು, ಅಮರೇಶ ಬಿಜ್ಜಳ, ಅಭಿಷೇಕ್‌, ಎ.ಯುಗಶ್ರೀ, ಕೆ. ಸುರೇಶ್‌, ಮುಕುಂದ, ಕಾರ್ತಿಕ್‌, ಭರತೇಶ್‌ ಜಿ.ಡಿ, ರಾಣಿರೇಖಾ, ರಾಜೇಶ್‌ ಮಣಿ, ಉಮೇಶ್‌ ಶೆಬೆ, ಸುಹಾಸ್‌ ಚವನ್‌, ಅಂಜಲಿ, ವಿಜಯ್‌, ಸುಪ್ರಿಯಾ ಸಿ.ವಿ, ರವಿ ಕುಲಕರ್ಣಿ, ತೇಜಸ್‌ ಕೆ, ವೀರೇಶ್‌ ರುದ್ರಸ್ವಾಮಿ, ವೀರೇಶ್‌ ಡಿ.ಎಂ, ವೀರಣ್ಣ ಕರಡಿ, ವಿನೋದ್‌ ಶಾಪೂರ್‌, ಶೀತಲ್‌ ಸಿ.ಎಸ್‌. ಭಾಗವಹಿಸುತ್ತಿದ್ದಾರೆ. ಅವರ ಕಲಾವೈಖರಿಯನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಚಿತ್ರಕಲೆಯನ್ನು ಕೊಂಡುಕೊಳ್ಳುವ ಅವಕಾಶವನ್ನೂ ಒದಗಿಸಲಾಗಿದೆ.

ಜನರಲ್ಲಿ ಕಲಾ ಪ್ರೀತಿ ಹೆಚ್ಚಿಸಬೇಕು,  ಮನೆಮನೆಯ ಭಿತ್ತಿಯಲ್ಲೂ ಚಿತ್ರಗಳು ಅಲಂಕಾರಗೊಳ್ಳಬೇಕು ಎನ್ನುವ ಕಾರಣಕ್ಕೆ  ಆಯೋಜನೆ ಆಗುತ್ತಿರುವ ಈ ಕಾರ್ಯಕ್ರಮದಲ್ಲಿ 400–500 ಜನ ಭಾಗವಹಿಸಬಹುದು ಎಂಬ ನಿರೀಕ್ಷೆ ಸಂಸ್ಥೆಯದ್ದು.
ಮಾಹಿತಿಗೆ: 99720 27514. 

ಲೆಟ್ಸ್‌ ಡ್ರಾ ಟುಗೆದರ್‌
ಅತಿಥಿ– ಪ್ರೊ. ಚಂದನ್‌ ಗೌಡ, ಎಂ.ಬಿ. ಕಾಳೆ. ಚಿತ್ರ ಪ್ರಾತ್ಯಕ್ಷಿಕೆ– ಜೆ.ಎಂ.ಎಸ್‌. ಮಣಿ. ಸ್ಥಳ: ಶಿಲ್ಪವನ, ರವೀಂದ್ರ ಕಲಾಕ್ಷೇತ್ರ ಆವರಣ, ಜೆ.ಸಿ.ರಸ್ತೆ. ಭಾನುವಾರ  (ಜೂನ್‌ 4) ಮಧ್ಯಾಹ್ನ 12ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಬೆಳಿಗ್ಗೆ 10.30ರಿಂದ ಸಂಜೆ 5ರವರೆಗೆ ಕಲಾವಿದರು ಚಿತ್ರ ರಚನೆ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT