ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನಗೆ ಪ್ರಕೃತಿಯಲ್ಲಿ ನಂಬಿಕೆ ಇದೆ

ತಾರೆಯರ ಪರಿಸರ ಪ್ರೇಮ
Last Updated 2 ಜೂನ್ 2017, 19:30 IST
ಅಕ್ಷರ ಗಾತ್ರ

‘ನಾನು ಅಲೆಮಾರಿ. ಯಾವಾಗಲೂ ಸುತ್ತುತ್ತಲೇ ಇರ್ತೇನೆ. ಹಾಗೆ ಹೊರಗೆ ಹೋದಾಗಲೆಲ್ಲಾ ಅಲ್ಲಿ ಸಿಗುವ ಗಿಡಗಳನ್ನು ತಂದು ಕುಂಡಗಳಲ್ಲಿ ಬೆಳೆಸುವುದು ನನ್ನ ಹವ್ಯಾಸ.

ನಮ್ಮನೆ ಟೇರೆಸ್‌ನಲ್ಲಿ 150 ಗಿಡಗಳನ್ನು ಬೆಳೆಸಿದ್ದೇನೆ. ಒಂದು ಎಲೆ ಚಿಗುರಿದಾಗ, ಹೂವು ಅರಳಿದಾಗ ಆಗುವ ಆನಂದ ಅನನ್ಯ. ನಾನು ಗಿಡಗಳಿಗೆ ಯಾವುದೇ ರಾಸಾಯನಿಕ ಗೊಬ್ಬರವಾಗಲೀ, ಔಷಧೀಯಾಗಲಿ ಬಳಸುವುದಿಲ್ಲ. ನನಗೆ ಪ್ರಕೃತಿಯಲ್ಲಿ ನಂಬಿಕೆ ಇದೆ.

ವಿಷಕಾರಿ ಹುಳುಗಳನ್ನು ಕೊಲ್ಲಲ್ಲು ಪ್ರಕೃತಿಯೇ ಒಳ್ಳೆಯ ಹುಳುಗಳನ್ನು ರೂಪಿಸಿದೆ. ಪ್ರಕೃತಿಯೇ ಸಮತೋಲನವಾಗಿರುವ ಏಕೆ ಔಷಧಿ ಹಾಕಬೇಕು? ಔಷಧಿ ಹಾಕುವುದರಿಂದ ಪರೋಪಕಾರಿ ಜೀವಿಗಳು ಸಾಯುತ್ತವೆ.

ಮತ್ತೊಂದು ವಿಶೇಷ ಎಂದರೆ ನಾನು ನಿರುಪಯುಕ್ತ ವಸ್ತುಗಳಲ್ಲಿ  ಅಂದರೆ ಬಳಸದೇ ಇರುವ ದೊಡ್ಡ ಡ್ರಮ್‌ಗಳಲ್ಲಿ ಗಿಡಗಳನ್ನು ಹಾಕಿದ್ದೇನೆ.   ಪ್ರಕೃತಿಯನ್ನು ನೀವು ಸ್ವಲ್ಪ ರಕ್ಷಿಸಿದರೆ ಸಾಕು, ಪ್ರಕೃತಿಯೇ ದೊಡ್ಡ ಪ್ರಮಾಣದಲ್ಲಿ ನಮ್ಮನ್ನು ಪೊರೆಯುತ್ತದೆ. ನಮ್ಮ ಖುಷಿಗೆ ಗಿಡಗಳನ್ನು ಹಾಕಿದೆವು. ಆದರೆ, ಆ ಗಿಡಗಳು ನೀಡುತ್ತಿರುವ ಖುಷಿ ಅಷ್ಟಿಷ್ಟಲ್ಲ. ಅದಕ್ಕೆ ಬೆಲೆ ಕಟ್ಟಲಾಗದು’.
–ನಿವೇದಿತಾ, ನಟಿ

ನಿರೂಪಣೆ: ಮಂಜುನಾಥ, ಮಂಜುಶ್ರೀ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT