ಹೈದರಾಬಾದ್‌ನ ಇಬ್ಬರ ಸಾವು

7

ಹೈದರಾಬಾದ್‌ನ ಇಬ್ಬರ ಸಾವು

Published:
Updated:
ಹೈದರಾಬಾದ್‌ನ ಇಬ್ಬರ ಸಾವು

ಹೈದರಾಬಾದ್‌: ಅಮೆರಿಕದ ಡೆಟ್ರಾಯಿಟ್‌ನ ಹೊರವಲಯದ ಈಜುಕೊಳದಲ್ಲಿ ಹೈದರಾಬಾದ್‌ನ ಇಬ್ಬರ ಶವ ಬುಧವಾರ ಪತ್ತೆಯಾಗಿದೆ.

ನೋವಿಯಲ್ಲಿರುವ ನಾರ್ಥ್‌ವಿಲ್ಲೆ ಅಪಾರ್ಟ್‌ಮೆಂಟ್‌ ಆವರಣದಲ್ಲಿರುವ ಈಜುಕೊಳದಲ್ಲಿ ನಾಗರಾಜು (31) ಹಾಗೂ ಅವರ ಮೂರು ವರ್ಷದ ಮಗು ಅನಂತ ಸಾಯಿ ಅವರ ಶವ ತೇಲುತ್ತಿತ್ತು ಎಂದು ಅಮೆರಿಕ ತೆಲಂಗಾಣ ಅಸೋಸಿಯೇಷನ್‌ ತಿಳಿಸಿದೆ. ಮಗುವಿನ ಟ್ರೈಸಿಕಲ್‌ ಈಜುಕೊಳದ ತಳದಲ್ಲಿ ಪತ್ತೆಯಾಗಿದೆ.

ಕೊಳದ ಸಮೀಪ ಹೋಗುತ್ತಿದ್ದವರು  ಶವಗಳನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ  ನಾಗರಾಜು ಅವರು ಇನ್ಫೊಸಿಸ್‌ನಲ್ಲಿ ಕೆಲಸ ಮಾಡುತ್ತಿದ್ದರು.

‘ಕೊಳದ ಸಮೀಪ ಟ್ರೈಸಿಕಲ್‌ನಲ್ಲಿ ಸಾಗುತ್ತಿದ್ದ ಮಗು ಅಚಾನಕ್‌ ಆಗಿ ನೀರಿಗೆ ಬಿದ್ದಿರಬಹುದು. ಅದನ್ನು ಪಾರು ಮಾಡಲು ನೀರಿಗೆ ಧುಮುಕಿದಾಗ, ಈಜು ಬಾರದ ನಾಗರಾಜು ಅವರೂ ಮೃತಪಟ್ಟಿರಬಹುದು’ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry