ರಮೇಶ್‌ಕುಮಾರ್ ಹರಿಕಥೆ ದಾಸ: ಈಶ್ವರಪ್ಪ

7

ರಮೇಶ್‌ಕುಮಾರ್ ಹರಿಕಥೆ ದಾಸ: ಈಶ್ವರಪ್ಪ

Published:
Updated:
ರಮೇಶ್‌ಕುಮಾರ್ ಹರಿಕಥೆ ದಾಸ: ಈಶ್ವರಪ್ಪ

ದಾವಣಗೆರೆ: ‘ಆರೋಗ್ಯ ಸಚಿವ ರಮೇಶ್‌ಕುಮಾರ್‌ ಹರಿಕಥೆ ದಾಸ. ನಿಮ್ಮೂರಿನ ರಾಜ್ಯೋತ್ಸವಕ್ಕೋ, ಗಣಪತಿ ಹಬ್ಬಕ್ಕೋ ಅವರನ್ನು ಕರೆಯಿರಿ. ಭಗವದ್ಗೀತೆ, ಬೈಬಲ್‌, ಕುರ್‌ಆನ್‌ ಎಲ್ಲವನ್ನೂ ಹೇಳುವ ಅವರಂಥ ಪ್ರವಚನಕಾರ ಇನ್ನೊಬ್ಬರಿಲ್ಲ...’

ವೃದ್ಧರೊಬ್ಬರಿಗೆ ಗಾಲಿ ಕುರ್ಚಿ ನೀಡಲು ಶಿವಮೊಗ್ಗದ ಮೆಗ್ಗಾನ್‌ ಬೋಧನಾ ಆಸ್ಪತ್ರೆ ಸಿಬ್ಬಂದಿ ಲಂಚ ಕೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಪ್ರಶ್ನೆಯೊಂದಕ್ಕೆ ಈ ರೀತಿ ಉತ್ತರಿಸಿದರು.

‘ರಮೇಶ್‌ಕುಮಾರ್ ಹಾಗೂ ಕಾಗೋಡು ತಿಮ್ಮಪ್ಪ ಅವರುಮಂತ್ರಿಯಾಗುವುದಕ್ಕೂ ಮೊದಲು ಆಡಿದ್ದ ಮಾತುಗಳನ್ನು  ನೆನಪಿಸಿಕೊಳ್ಳಲಿ. ಅವರಿಬ್ಬರೂ ಕಾಗದದ ಹುಲಿಗಳು’ ಎಂದು ಟೀಕಿಸಿದರು.

‘ರಮೇಶ್‌ಕುಮಾರ್‌  ಕೂಡಲೇ ಶಿವಮೊಗ್ಗಕ್ಕೆ ಬಂದು ಆಸ್ಪತ್ರೆಯ ಆಡಳಿತ ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳಲಿ’ ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry