‘ಸೈನ್ಸ್ ಎಕ್ಸ್‌ಪ್ರೆಸ್’ ರೈಲು ಇದೇ 6 ರಂದು ನಗರಕ್ಕೆ

7

‘ಸೈನ್ಸ್ ಎಕ್ಸ್‌ಪ್ರೆಸ್’ ರೈಲು ಇದೇ 6 ರಂದು ನಗರಕ್ಕೆ

Published:
Updated:
‘ಸೈನ್ಸ್ ಎಕ್ಸ್‌ಪ್ರೆಸ್’ ರೈಲು ಇದೇ 6 ರಂದು ನಗರಕ್ಕೆ

ಬೆಂಗಳೂರು: ‘ಸೈನ್ಸ್ ಎಕ್ಸ್‌ಪ್ರೆಸ್’ ರೈಲು ಬೆಂಗಳೂರಿಗೆ ಬರಲಿದ್ದು, ಜೂನ್ 6ರಿಂದ 8ರವರೆಗೆ ವೈಟ್‌ಫೀಲ್ಡ್‌ ನಿಲ್ದಾಣ ಮತ್ತು ಜೂನ್ 9ರಿಂದ 11ರವರೆಗೆ ಕೆಂಗೇರಿ ನಿಲ್ದಾಣದಲ್ಲಿ ಸಾರ್ವಜನಿಕ ವೀಕ್ಷಣೆಗೆ ಲಭ್ಯವಿರುತ್ತದೆ.

ಸೈನ್ಸ್‌ ಎಕ್ಸ್‌ಪ್ರೆಸ್‌ ರೈಲು ಈ ಬಾರಿ ಹವಾಮಾನ ಬದಲಾವಣೆ ಕುರಿತು ಮಾಹಿತಿ ನೀಡುತ್ತದೆ. 13 ಬೋಗಿಗಳನ್ನು ವಿಜ್ಞಾನ ವಸ್ತು ಪ್ರದರ್ಶನಕ್ಕೆಂದೇ ಮೀಸಲಿಡಲಾಗಿದೆ.

2007ರ ಅಕ್ಟೋಬರ್‌ನಲ್ಲಿ ಸೈನ್ಸ್‌ ಎಕ್ಸ್‌ಪ್ರೆಸ್‌ ರೈಲಿಗೆ ಮೊದಲು ಚಾಲನೆ ನೀಡಲಾಯಿತು. ಈಗಾಗಲೇ ದೇಶದಾದ್ಯಂತ 8 ಸುತ್ತುಗಳನ್ನು ಸುತ್ತಿದ್ದು, 490 ನಿಲ್ದಾಣಗಳಲ್ಲಿ ಪ್ರದರ್ಶನ ಮಾಡಲಾಗಿದೆ.

ಹವಾಮಾನ ಬದಲಾವಣೆ ವಿಷಯ ಕುರಿತ ಈ ವಿಶೇಷ ರೈಲಿಗೆ ಕಳೆದ ಫೆ.17ರಂದು ನವದೆಹಲಿಯಲ್ಲಿ ಚಾಲನೆ ನೀಡಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry