ಪಾಕ್‌ ಮಗುವಿಗೆ ವೈದ್ಯಕೀಯ ವೀಸಾ

7
ಹೃದಯ ಸಂಬಂಧಿ ಕಾಯಿಲೆಗೆ ಭಾರತದಲ್ಲಿ ಚಿಕಿತ್ಸೆ

ಪಾಕ್‌ ಮಗುವಿಗೆ ವೈದ್ಯಕೀಯ ವೀಸಾ

Published:
Updated:
ಪಾಕ್‌ ಮಗುವಿಗೆ ವೈದ್ಯಕೀಯ ವೀಸಾ

ಇಸ್ಲಾಮಾಬಾದ್: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಪಾಕಿಸ್ತಾನದ ಎರಡೂವರೆ ತಿಂಗಳ ಮಗುವಿಗೆ ಭಾರತ ವೈದ್ಯಕೀಯ  ವೀಸಾ ನೀಡಿದೆ.

‘ನಮ್ಮ ಮಗುವಿಗೆ ಪಾಕಿಸ್ತಾನದಲ್ಲಿ ಕೊಡಿಸಿದ ಚಿಕಿತ್ಸೆ ಫಲಪ್ರದವಾಗಿಲ್ಲ. ಆದ್ದರಿಂದ ಭಾರತದಲ್ಲಿ ಚಿಕಿತ್ಸೆ ಕೊಡಿಸಲು ವೈದ್ಯಕೀಯ ವೀಸಾ ಬೇಕಿದೆ’ ಎಂದು ಪಾಕಿಸ್ತಾನದ ಪ್ರಜೆ ಕೆನ್‌ ಸಿದ್‌ ಅವರು ಟ್ವಿಟರ್‌ ಮೂಲಕ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೆ ಮನವಿ ಮಾಡಿದ್ದರು.

‘ಮಗುವಿಗೆ ಸಮಸ್ಯೆ ಆಗುವುದಿಲ್ಲ. ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನರ್‌ ಕಚೇರಿ ಸಂಪರ್ಕಿಸಿ. ನಾವು ವೈದ್ಯಕೀಯ ವೀಸಾ ನೀಡುತ್ತೇವೆ’ ಎಂದು ಸುಷ್ಮಾ ಅವರು ಪ್ರತಿಕ್ರಿಯಿಸಿದ್ದರು.

ಮಗುವಿನ ಕುಟುಂಬಕ್ಕೆ ನಾಲ್ಕು ತಿಂಗಳ ಅವಧಿಯ ವೈದ್ಯಕೀಯ ವೀಸಾ ನೀಡಲಾಗಿದೆ. ಇದರಿಂದ ಮಗುವಿಗೆ ಭಾರತದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಬಹುದಾಗಿದೆ ಎಂದು ಭಾರತೀಯ ಹೈಕಮಿಷನ್‌ ಅಧಿಕಾರಿ ತಿಳಿಸಿದ್ದಾರೆ.

‘ಸಾಕಷ್ಟು ಭಿನ್ನಾಭಿಪ್ರಾಯಗಳ ನಡುವೆಯೂ ಮಾನವೀಯತೆ ಜಯ ದೊರಕಿರುವುದು ಹೃದಯ ತುಂಬಿಬಂದಿದೆ. ನಿಮ್ಮ ಶ್ರಮಕ್ಕೆ ಧನ್ಯವಾದ. ಮಾನವೀಯತೆಗೆ ಜಯ! ಎಲ್ಲರಿಗೂ ದೇವರು ಒಳಿತು ಮಾಡಲಿ’ ಎಂದು ಕೆನ್‌ ಟ್ವೀಟ್‌ ಮಾಡಿದ್ದಾರೆ.

ಶಿಫಾರಸು ಪಡೆಯಲು ಸೂಚನೆ: ಇದೇ ರೀತಿಯ ಇನ್ನೊಂದು ಪ್ರಕರಣದಲ್ಲಿ ವೀಸಾ ನೀಡಲು, ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್‌ ಅಜೀಜ್‌ ಅವರ ಶಿಫಾರಸು ಪಡೆಯುವಂತೆ ಸೂಚಿಸಲಾಗಿದೆ.

ತಮ್ಮ  ತಂದೆಗೆ ಮೂತ್ರಪಿಂಡ ಕಸಿ ಚಿಕಿತ್ಸೆಗಾಗಿ ವೀಸಾ ನೀಡಬೇಕು ಎಂದು ಪಾಕಿಸ್ತಾನದ ವಕೀಲರೊಬ್ಬರು ಟ್ವೀಟ್‌ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಸುಷ್ಮಾ ‘ನಿಮ್ಮ ತಂದೆಗೆ ಮೂತ್ರಪಿಂಡ ಕಸಿಯ ಅವಶ್ಯಕತೆ ಇದೆ ಎಂದು ತಿಳಿದು ಖೇದವಾಗಿದೆ. ಇಲ್ಲೊಂದು ತಪ್ಪುಗ್ರಹಿಕೆ ಆಗಿರುವಂತಿದೆ. ವೈದ್ಯಕೀಯ ವೀಸಾ ನೀಡಲು ನಾವು ನಿರಾಕರಿಸಿಲ್ಲ. ಸರ್ತಾಜ್‌ ಅವರು ನಿಮ್ಮ ಪ್ರಕರಣವನ್ನು ಶಿಫಾರಸು ಮಾಡಿದರೆ ನಾವು ತಕ್ಷಣವೇ ವೀಸಾ ನೀಡುತ್ತೇವೆ. ಆದ್ದರಿಂದ ನನ್ನ ಬದಲು ಅವರಿಗೆ ಮನವಿ ಮಾಡಿ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry