ಜಿಎಸ್‌ಟಿ: ಚಿನ್ನದ ದರ ಇಂದು ನಿಗದಿ

7

ಜಿಎಸ್‌ಟಿ: ಚಿನ್ನದ ದರ ಇಂದು ನಿಗದಿ

Published:
Updated:
ಜಿಎಸ್‌ಟಿ: ಚಿನ್ನದ ದರ ಇಂದು ನಿಗದಿ

ನವದೆಹಲಿ : ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯು ಶನಿವಾರ ಇಲ್ಲಿ ಸಭೆ ಸೇರಲಿದ್ದು, ಬಾಕಿ ಇರುವ ಆರು ಪ್ರಮುಖ ಸರಕುಗಳ ತೆರಿಗೆ ದರವನ್ನು ನಿಗದಿ ಮಾಡಲಿದೆ.

ಚಿನ್ನ, ಜವಳಿ, ಬಿಸ್ಕಿಟ್, ಪಾದರಕ್ಷೆ, ಬೀಡಿ, ಕೃಷಿ ಉತ್ಪನ್ನಗಳು ಹಾಗೂ ಅಮೂಲ್ಯ ವಸ್ತುಗಳಾದ ಹರಳು, ನಾಣ್ಯ ಮತ್ತು ಚಿನ್ನಾಭರಣಗಳಿಗೆ ತೆರಿಗೆ ದರ ನಿಗದಿಪಡಿಸಲಿದೆ. ಚಿನ್ನಾಭರಣ ಸೇರಿದಂತೆ ಅತ್ಯಮೂಲ್ಯ ವಸ್ತುಗಳಿಗೆ ಶೇ 4 ರಷ್ಟು ತೆರಿಗೆ ದರ ನಿಗದಿಮಾಡುವಂತೆ ಕೆಲವು ರಾಜ್ಯಗಳು ಒತ್ತಾಯಿಸಿವೆ. ಸದ್ಯಕ್ಕೆ ಶೇ 2 ರಷ್ಟು ತೆರಿಗೆ ದರ ಇದೆ.

ಪ್ರತಿ ಕೆ.ಜಿಗೆ ₹100ಕ್ಕಿಂತಲೂ ಕಡಿಮೆ ದರ ಇರುವ ಬಿಸ್ಕಿಟ್‌ಗಳಿಗೆ ತೆರಿಗೆಯಿಂದ ವಿನಾಯಿತಿ ನೀಡಬೇಕು ಎಂದು  ಶ್ರೀನಗರದಲ್ಲಿ ನಡೆದಿದ್ದ ಸಭೆಯಲ್ಲಿ ಕೆಲವು ರಾಜ್ಯಗಳು ಒತ್ತಾಯಿಸಿದ್ದವು. ಆದರೆ ಬಿಸ್ಕಿಟ್‌ ಅನ್ನು ಶೇ 12 ರ ತೆರಿಗೆ  ದರದ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.

ಸದ್ಯಕ್ಕೆ, ಪ್ರತಿ ಕೆ.ಜಿಗೆ ₹100 ಕ್ಕಿಂತ ಕಡಿಮೆ ಬೆಲೆ ಇರುವ ಬಿಸ್ಕಿಟ್‌ಗೆ ಸೀಮಾ ಸುಂಕ ವಿಧಿಸುತ್ತಿಲ್ಲ. ರಾಜ್ಯಗಳು ‘ವ್ಯಾಟ್‌’ ವಿಧಿಸುತ್ತಿವೆ.  ಜುಲೈ 1 ರಿಂದ ಜಿಎಸ್‌ಟಿ ಜಾರಿಗೆ ಬರಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry