ಕ್ಯಾಸಿನೊದಲ್ಲಿ ದಾಳಿ: 36 ಮಂದಿ ಸಾವು

7

ಕ್ಯಾಸಿನೊದಲ್ಲಿ ದಾಳಿ: 36 ಮಂದಿ ಸಾವು

Published:
Updated:
ಕ್ಯಾಸಿನೊದಲ್ಲಿ ದಾಳಿ: 36 ಮಂದಿ ಸಾವು

ಮನಿಲಾ: ಕ್ಯಾಸಿನೊದಲ್ಲಿ ಮುಸುಕುಧಾರಿ ವ್ಯಕ್ತಿಯೊಬ್ಬ ಸ್ವಯಂಚಾಲಿತ ಬಂದೂಕಿನಿಂದ ದಾಳಿ ನಡೆಸಿದ್ದರಿಂದ 36 ಮಂದಿ ಮೃತಪಟ್ಟಿದ್ದಾರೆ.

ರೆಸಾರ್ಟ್ಸ್‌ ವರ್ಲ್ಡ್‌ ಮನಿಲಾ ಎನ್ನುವ ಜೂಜು ಅಡ್ಡೆಯಲ್ಲಿ ಈ ಘಟನೆ ನಡೆದಿದೆ. ಆದರೆ,ಇದು ಭಯೋತ್ಪಾದಕರ ದಾಳಿಯಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿ ಹಿಂದೆ ಕಳ್ಳತನದ ಹೊರತು ಬೇರೆ ಉದ್ದೇಶ ಇದ್ದಂತೆ ತೋರುವುದಿಲ್ಲ. ಏಕೆಂದರೆ ಮುಸುಕು ಧರಿಸಿದ್ದ ಬಂದೂಕುಧಾರಿ ಜನರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿಲ್ಲ. ಆತ ಟಿ.ವಿ ಪರದೆಗೆ ಗುಂಡು ಹಾರಿಸಿದ್ದಾನೆ. ಆದರೆ ವಿಷಯುಕ್ತ ಹೊಗೆಯಿಂದಾಗಿ ಇವರೆಲ್ಲಾ ಸಾವಿಗೀಡಾಗಿದ್ದಾರೆ ಎಂದು ಪೊಲೀಸ್‌ ಮುಖ್ಯಸ್ಥ ರೊನಾಲ್ಡ್‌ ಡೆಲಾ ರೋಸಾ ತಿಳಿಸಿದ್ದಾರೆ.

‘ದಾಳಿಯಿಂದ ಕಂಗಾಲಾದ ಜನರು ಪಾರಾಗಲು ಓಡುವ ವೇಳೆ ಕಾಲ್ತುಳಿತ ಉಂಟಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌್ ಟ್ರಂಪ್‌ ಈ ಕೃತ್ಯವನ್ನು ಭಯೋತ್ಪಾದಕರ ದಾಳಿ ಎಂದೇ ಕರೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry